Darshan Thoogudeepa : ಹುಲಿ ಉಗುರು ಆರೋಪದಡಿ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಆಗಿ ಹೇಳಿದ್ದೇನು.?

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಮೊನ್ನೆ ತಾನೇ ಹುಲಿ ಉಗುರು ಧರಿಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಇದೀಗ ಡಿಬಾಸ್ ದರ್ಶನ್ ಗೂ ಕಾನೂನು ಸಂಕಷ್ಟ ಎದುರಾಗಿದೆ. ದರ್ಶನ್ ಅವರನ್ನ ಅರೆಸ್ಟ್ ಮಾಡಬೇಕೆಂದು ದೂರು ದಾಖಲಿಸಲಾಗಿದ್ದು, ಈ ಬಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಏನು ಹೇಳಿದ್ದಾರೆ ಗೊತ್ತಾ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Varthur Santhosh : ಹುಲಿ ಉಗುರು ಧರಿಸಿದ್ದ ನಟ ದರ್ಶನ್ ಹಾಗು ವಿನಯ್ ಗುರೂಜಿ ಅರೆಸ್ಟ್ ಆಗ್ತಾರಾ.? ಶಾಕ್ ಆದ ಅಭಿಮಾನಿಗಳು

ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಆರೋಪದಲ್ಲಿ ನಟ ದರ್ಶನ್ ಮೇಲೆ ಸರ್ವಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಎನ್ನುವವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಟ ದರ್ಶನ್ ಹಾಕಿರುವ ಚಿನ್ನದ ಚೈನ್ ನಲ್ಲಿ ಹುಲಿ ಉಗುರು ಇದೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.

Whatsapp Group Join
Telegram channel Join

ಹುಲಿ ಉಗುರು ಧರಿಸಿದ ಕಾರಣಕ್ಕೆ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ. ಅದೇ ರೀತಿ ನಟ ದರ್ಶನ್ ವಿರುದ್ದವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಟ ದರ್ಶನ್ ಅವರು ಅರಣ್ಯ ಇಲಾಖೆ ರಾಯಭಾರಿಯೂ ಆಗಿದ್ದಾರೆ. ಹಾಗಿರುವಾಗ ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ.? ಅವರ ಧರಿಸಿರುವ ಹುಲಿ ಉಗುರು ಅಸಲಿಯೋ.? ಅಥವಾ ನಕಲಿಯೋ.? ಎನ್ನುವುದನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಬೇಕು ಎಂದಿದ್ದಾರೆ.

ಇದನ್ನೂ ಕೂಡ ಓದಿ : Varthur Santhosh : ಬಿಗ್ ಶಾಕ್.. ನೋಟೀಸ್.! ವರ್ತೂರು ಸಂತೋಷ್ ಆಪ್ತರಿಗೆ ಅರಣ್ಯ ಇಲಾಖೆ ನೋಟಿಸ್

ಈ ಬಗ್ಗೆ ಮಾತನಾಡಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ. ಹಾಗೆ ನೋಡುತ್ತಾ ಹೋದರೆ ಈ ರೀತಿಯ ಲಾಕೆಟ್ ಧರಿಸಿರುವವರು ತುಂಬಾ ಜನ ಸಿಗ್ತಾರೆ. ಆದರೆ ಅದೆಲ್ಲಾ ಹುಲಿ ಉಗುರುಗಳು ಅಂತ ಹೇಳುವುದಕ್ಕೂ ಆಗಲ್ಲ. ಅದೇನೇ ಇದ್ದರೂ ದರ್ಶನ್ ಅವರು ಕಾನೂನು ಮೂಲಕವೇ ಉತ್ತರ ಕೊಡುತ್ತಾರೆ. ದರ್ಶನ್ ಒಬ್ಬರನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ ಎನ್ನುವ ಖಡಕ್ ಮಾತು ಹೇಳಿದ್ದಾರೆ ಎನ್ನುವ ಸುದ್ಧಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply