Darshan Thoogudeepa : ಅರಣ್ಯ ಅಧಿಕಾರಿಗಳ ಬಳಿ ನಕಲಿ ಹುಲಿ ಉಗುರು ಎಂದ ದರ್ಶನ್.! ಆದರೆ ದರ್ಶನ್ ವಕೀಲರು ಹೇಳಿದ್ದೇನು ಗೊತ್ತಾ.?

Darshan Thoogudeepa : ರಾಜ್ಯದಲ್ಲಿ ಹುಲಿಯ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದರೂ ಹುಲಿಯ ಉಗುರಿ(Tiger Claw)ನದ್ದೇ ಮಾತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟರ ಮನೆಯಲ್ಲೆಲ್ಲಾ ಶೋಧವೂ ನಡೆಯಿತು. ಈ ಪೈಕಿ ನಟ ಡಿಬಾಸ್ ದರ್ಶನ್ ಅವರ ಮನೆಯಲ್ಲಿಯೂ ಸಹ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

Whatsapp Group Join
Telegram channel Join

ಹೌದು, ಬಿಗ್ ಬಾಸ್ ಮನೆಯಿಂದ ಆರಂಭವಾದ ಹುಲಿ ಉಗುರಿನ ಪ್ರಕರಣ ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಬಳಿಯೂ ಹುಲಿ ಉಗುರಿನ(Tiger Claw) ಪೆಂಡೆಂಟ್ ಇದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸಹ ತಂಡ ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡರು. ನಟ ದರ್ಶನ್ ಅವರ ಮನೆಯ್ಲಲೂ ಸಹ ಶೋಧ ಕಾರ್ಯ ನಡೆಯಿತು.

ಇದನ್ನೂ ಕೂಡ ಓದಿ : ಪ್ರತೀದಿನ ಕೋತಿಗೆ ತಿಂಡಿ ಕೊಡುತ್ತಿದ್ದ ಬೀದಿಬದಿ ವ್ಯಾಪಾರಿ / ಅದಕ್ಕೆ ಕೋತಿ ಮಾಡಿದ್ದೇನು ಗೊತ್ತಾ.?

Whatsapp Group Join
Telegram channel Join

ಮೂಲಗಳ ಪ್ರಕಾರ ದರ್ಶನ್ ಅವರ ಮನೆಯಲ್ಲಿ ಒಂದಲ್ಲ, ಎರಡಲ್ಲಾ ಎಂಟರಿಂದ ಹತ್ತು ಹುಲಿ ಉಗುರುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿವೆ. ಉಗುರಿನ ಮಾದರಿಯ ಪೆಂಡೆಂಟ್ ಗಳು ದೊರೆತಿವೆ. ಆದರೆ ಯಾವುದು ಅಸಲಿಯಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಾಣಿಪ್ರಿಯರಾದ ಡಿಬಾಸ್ ಎಂದೆಂದಿಗೂ ಪ್ರಾಣಿಗಳ ಹಲ್ಲು, ಉಗುರು, ಚರ್ಮ ಬಳಸಲು ಇಷ್ಟ ಪಡುವುದಿಲ್ಲ ಎನ್ನುವುದು ಸಾಬೀತಾಗಿದೆ.

ಡಿಬಾಸ್ ಮನೆ ಶೋಧ ಕಾರ್ಯಕ್ಕೆ ಬಂದ ವೇಳೆ ಅರಣ್ಯಾಧಿಕಾರಿಗಳಿಗೆ ಡಿಬಾಸ್ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬಂದ ತಕ್ಷಣ ಮನೆ ಬಾಗಿಲು ತೆರೆದು ಅವರನ್ನು ಸ್ವಾಗತಿಸಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ ಎಂಟರಿಂದ ಹತ್ತು ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಗಳು ಸಿಕ್ಕಿದ್ದು, ಅವು ಯಾವುದು ಅಸಲಿ ಅಲ್ಲ ಎನ್ನಲಾಗುತ್ತಿದೆ.

ಇದನ್ನೂ ಕೂಡ ಓದಿ : Farmer Scheme : ಗಂಗಾ ಕಲ್ಯಾಣ ಯೋಜನೆ ಮೂಲಕ ಸಿಗುವ ಸಹಾಯಧನವೇಷ್ಟು.? ಏರಿಕೆ ಕಂಡ ಪಿಎಂ ಕಿಸಾನ್ ಯೋಜನೆ ಸಹಾಯಧನ.?

ಈ ಬಗ್ಗೆ ಮಾತನಾಡಿರುವ ದರ್ಶನ್ ಪರ ವಕೀಲರು, ದರ್ಶನ್ ಅವರು ಸಾಕಷ್ಟು ಸಿನಿಮಾಗಳಿಗಾಗಿ ಅನೇಕ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಬಳಸಿದ್ದಾರೆ. ಆದರೆ ಅದ್ಯಾವುದು ಅಸಲಿ ಅಲ್ಲ. ಕೇವಲ ಅದರ ಮಾದರಿಗಳಷ್ಟೇ, ಈಗಾಗಲೇ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸಿದ್ದು, ಯಾವುದು ಅಸಲಿ ಅಲ್ಲ ಎಂದಿದ್ದಾರೆ.

ಆದರೆ ಕೆಲವರು ಮಾತ್ರ ದರ್ಶನ್ ಅವರನ್ನು ಅರೆಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ. ಇಂತಹವರಿಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ದರ್ಶನ್ ಅವರು ಪ್ರಾಣಿ ಪ್ರಿಯರು. ಅವರು ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಅವರ ಆಪ್ತ ಸ್ನೇಹಿತರು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ – ಅಭಿಪ್ರಾಯಗಳನ್ನು ಕೆಳಗೆ ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply