Tiger Claw : ನಟ ದರ್ಶನ್ ಮನೆಯಲ್ಲಿ ಸಿಕ್ಕಿತಾ ಹುಲಿ ಉಗುರು.! ಈ ಬಗ್ಗೆ ಡಿಬಾಸ್ ದರ್ಶನ್ ಹೇಳಿದ್ದೇನು ಗೊತ್ತಾ.?

Tiger Claw : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರಿಗೆ ಇದೀಗ ದೊಡ್ಡ ಕಂಟಕ ಎದುರಾಗಿದೆ. ನಟ ದರ್ಶನ್ ಅವರ ಮನೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಿದ್ದೇನು.? ದರ್ಶನ್ ಅವರು ಇಂದು ಅರೆಸ್ಟ್ ಆಗುತ್ತಾರಾ.? ನಟ ದರ್ಶನ್ ಹೇಳಿದ್ದೇನು.?

Whatsapp Group Join
Telegram channel Join

ನಿನ್ನೆ ಆರ್ ಆರ್ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಅರಣ್ಯಾಧಿಕಾರಿಗಳು ಆಗಮಿಸಿ ಮನೆಯ ಪರಿಶೀಲನೆ ನಡೆಸಿದ್ದರು. ಬೆಂಗಳೂರು ನಗರ ಆರ್ ಎಫ್ ಸೇರಿದಂತೆ ಇಬ್ಬರು ಅಧಿಕಾರಿಗಳು ಆಗಮಿಸಿದ್ದಾರೆ. ದರ್ಶನ್ ಅವರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಕೂಡ ಓದಿ : Tiger Claw : ನಟ ಜಗ್ಗೇಶ್ ಮನೆಯಲ್ಲಿ ಕೊಳೆತ ಪೆಂಡೆಂಟ್ ವಶ.? ಜಗ್ಗೇಶ್ ಗೂ ಉರುಳಾಗುತ್ತಾ ಹುಲಿ ಉಗುರಿನ ಪೆಂಡೆಂಟ್.!

Whatsapp Group Join
Telegram channel Join

ಅರಣ್ಯಾಧಿಕಾರಿಗಳು ಬಂದ ಹಿನ್ನೆಲೆ ಸ್ಥಳೀಯ ಪೊಲೀಸರು ಕೂಡ ದರ್ಶನ್ ಅವರ ಮನೆಗೆ ಆಗಮಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಹುಲಿ ಉಗುರು ಬಳಸುವುದು ಅಪರಾಧವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನ ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು.

ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಆರೋಪ ಸಾಬೀತಾದರೆ ದರ್ಶನ್ ಅವರ ಬಂಧನ ಕೂಡ ಗ್ಯಾರಂಟಿ ಎನ್ನುವ ಮಾತು ಕೇಳಿಬರುತ್ತಿದೆ. ದರ್ಶನ್ ಅವರ ಮನೆಯಲ್ಲಿ ಹುಲಿ ಉಗುರಿನ ಲಾಕೆಟ್ ಸೇರಿದಂತೆ ಇನ್ನು ಕೆಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಲಾಕೆಟ್ ಅನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಕೂಡ ಓದಿ : Darshan Thoogudeepa : ಹುಲಿ ಉಗುರು ಆರೋಪದಡಿ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಆಗಿ ಹೇಳಿದ್ದೇನು.?

ಅದು ಒರಿಜಿನಲ್ ಹುಲಿ ಉಗುರು ಅಂತ ಸಾಬೀತಾದರೆ, ದರ್ಶನ್ ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ದರ್ಶನ್ ಅವರು, ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯ. ರಾತ್ರಿ ವಿಚಾರಣೆಯಲ್ಲಿ ಭಾವಹಿಸಿದ್ದೆ. ಮತ್ತೆ ಕರೆದರೂ ಕೂಡ ಹೋಗುತ್ತೇನೆ ಎಂದಿದ್ದಾರೆ ನಟ ದರ್ಶನ್.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply