Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

Dr Bro : ನಿಮಗೆ ತಿಳಿದಿರುವಂತೆ ಭಾರತದ ಅನೇಕ ಯೂಟ್ಯೂಬರ್‌ಗಳು ತಿಂಗಳಿಗೆ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಯೂಟ್ಯೂಬ್ ಚಾನೆಲ್ ರಚಿಸುವುದು ದೊಡ್ಡ ವಿಷಯವಲ್ಲ. ಇಲ್ಲಿ ನಿಯಮಿತವಾಗಿ ಕೆಲಸ ಮಾಡುವುದು ಮುಖ್ಯ. ಮೊದಲಿಗೆ, YouTube ನಲ್ಲಿ ಪ್ರತಿದಿನ ಸಾವಿರಾರು ಜನರು ಚಾನಲ್ ಅನ್ನು ರಚಿಸುತ್ತಾರೆ ಮತ್ತು ಕೆಲವು ದಿನಗಳವರೆಗೆ ಕೆಲಸ ಮಾಡಿದ ನಂತರ ಅವರು ಯಾವುದೇ ವೀಕ್ಷಣೆಗಳನ್ನು ಪಡೆಯದೇ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸುತ್ತಾರೆ ಆದರೆ ನೀವು ಯಶಸ್ವಿ ಯೂಟ್ಯೂಬರ್ ಆಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಯೂಟ್ಯೂಬ್‌ನಲ್ಲಿ ಕೆಲಸ ಮಾಡುವುದು ಕಚೇರಿಯಲ್ಲಿ ಕೆಲಸ ಮಾಡಿದಂತೆ, ಅಲ್ಲಿ ನೀವು ಶಿಸ್ತಿನಿಂದ ನಿಯಮಿತವಾಗಿ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಕೂಡ ಓದಿ : Ration Card : ಅತ್ತೆಗೂ ರೇಷನ್ ಕಾರ್ಡ್, ಸೊಸೆಗೂ ರೇಷನ್ ಕಾರ್ಡ್.! / ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ಮುಟ್ಟುತ್ತಿಲ್ವಾ.?

ಸಾಮಾನ್ಯವಾಗಿ, ನೀವು ಜೀವನದಲ್ಲಿ ಸಾಧಿಸುವ ಬಯಕೆಯನ್ನು ಹೊಂದಿದ್ದರೆ, ನಿಮ್ಮ ಜೀವನವನ್ನು ನೀವು ಬಯಸಿದಂತೆ ಸಾಗಿಸಬಹುದು. ಹೆಚ್ಚಿನ ಜನರು ಜೀವನದಲ್ಲಿ ಯಶಸ್ಸು ಮತ್ತು ಹಣದ ಆಸೆಯಿಂದ ದಾರಿ ತಪ್ಪುತ್ತಾರೆ. ಹೌದು, ಆದರೆ ಅದರಿಂದ ಗಳಿಸಿದ ಹೆಸರು-ಕೀರ್ತಿ ಅಲ್ಪಕಾಲಿಕ. ಆದರೆ ನ್ಯಾಯದ ಹಾದಿಯಲ್ಲಿ ಶ್ರಮಿಸುವವರು ಮಾತ್ರ ಯಶಸ್ಸು ಸಾಧಿಸುತ್ತಾರೆ ಮತ್ತು ಅದೇ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂಬುದು ಸತ್ಯ. ಅವರಿಗೆ ವಯಸ್ಸಾಗಬೇಕಿಲ್ಲ ಮತ್ತು ಹೆಸರು ಮಾಡಲು ಅನುಭವ ಬೇಕಾಗಿಲ್ಲ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಹಣ ಇನ್ನೂ ಸಿಕ್ಕಿಲ್ವಾ.? ಈ ನಾಲ್ಕು ದಾಖಲೆಗಳನ್ನು ರೆಡಿ ಮಾಡಿದ್ರೆ ಗ್ಯಾರಂಟಿ ಮುಂದಿನ ತಿಂಗಳು ಹಣ ಬರುತ್ತೆ.!

ಏನನ್ನಾದರೂ ಸಾಧಿಸುವ ಹಂಬಲವಿದ್ದರೆ ಸಾಕು. ಹೌದು, ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಡಾ. ಬ್ರೋ. ಹೌದು ಯೂ ಟ್ಯೂಬ್ ನೋಡುವವರಿಗೆ ಸೋಶಿಯಲ್ ಮೀಡಿಯಾ ಆಸಕ್ತರಿಗೆ ಡಾ ಬ್ರೋ ಗೊತ್ತಿರಲೇ ಬೇಕು. ಚಿಕ್ಕ ವಯಸ್ಸಿನಲ್ಲೇ ದೇಶ ಸುತ್ತುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಈತ ಯಾರು? ಎಲ್ಲಿಯವನು? ಅಷ್ಟೊಂದು ಶ್ರೀಮಂತನಾ? ಈತನಿಗೆ ಯಾರ ಬೆಂಬಲ ಇದೆ? ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಹೌದು, ಯಾಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿ ದೇಶ-ವಿದೇಶ ಸುತ್ತುವುದು ಸಾಮಾನ್ಯವಲ್ಲ. ಈತನ ಹೆಸರು ಗಗನ್. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವರು. ಅವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.

ತಂದೆ ಶ್ರೀನಿವಾಸ್ ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಪದ್ಮಾ ಮನೆಕೆಲಸ ನೋಡಿಕೊಳ್ಳುತ್ತಿದ್ದು, ಎರಡನೇ ತರಗತಿ ಓದುತ್ತಿರುವಾಗಲೇ ಈ ಗಗನ್ ಪೌರೋಹಿತ್ಯ ಓದುತ್ತಿದ್ದ. ಹೌದು, ತಂದೆ ಇಲ್ಲದಿದ್ದಾಗ ಅವರೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಇನ್ನೂ ಶಾಲೆಗೆ ಹೋಗುತ್ತಿದ್ದರೂ ಗಗನ್ ಓದುವುದರಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದ. ಹೌದು, ಓದಿನಲ್ಲಿ ಆಸಕ್ತಿ ಇಲ್ಲದಿದ್ದರೂ ಹಾಡು, ಕುಣಿತ, ನಾಟಕ ಪ್ರಸ್ತುತಿಯಲ್ಲಿ ಸದಾ ಮುಂದು.

ಇದನ್ನೂ ಕೂಡ ಓದಿ : LPG Gas : ನೀವು ಉಚಿತ ‘LPG’ ಗ್ಯಾಸ್ ಪಡೆದಿಲ್ವಾ.? ಪಿಎಂ ಉಜ್ವಲ ಯೋಜನೆಯಡಿ ಉಚಿತ ‘LPG’ ಗಾಗಿ ಅರ್ಜಿ ಅಹ್ವಾನ.!

ಎಸ್.ಎಸ್.ಎಲ್.ಸಿ ಪಾಸಾದ ನಂತರ ವಿಜ್ಞಾನ ವಿಷಯ ತೆಗೆದುಕೊಂಡು ಅದರಲ್ಲಿ ಅನುತ್ತೀರ್ಣನಾದ. ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಬ್ರಾಹ್ಮಣ ಸ್ಟೋರ್ಸ್ ಇಟ್ಟುಕೊಂಡಿದ್ದ. ಹೌದು, ಹದಿನಾರನೇ ವಯಸ್ಸಿನಲ್ಲಿ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಲು ಆರಂಭಿಸಿದ ಆತ, ಇದ್ಯಾವುದೂ ಗಗನ್ ಗೆ ಮಾನಸಿಕ ನೆಮ್ಮದಿ ನೀಡಲಿಲ್ಲ.

ಭರತನಾಟ್ಯ ಕಲಿತು ಅದರ ತರಗತಿಗಳನ್ನು ನಡೆಸಿದ ಅವರು ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನೂ ಕಲಿತರು. 2016 ರಲ್ಲಿ, ಅವರು ಡಾ. ಬ್ರೋ ಎಂಬ ತಮ್ಮದೇ ಆದ YouTube ಚಾನಲ್ ಅನ್ನು ಪ್ರಾರಂಭಿಸಿದರು. ಆರಂಭದಲ್ಲಿ ಕಾಮಿಡಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿ ಮತ್ತೆ ಬರು ಬರುತ್ತಾ ಸಿನಿಮಾ ನಟ ನಟಿಯರ ಸಂದರ್ಶನ ಮಾಡುತ್ತಿದ್ದರು.

ಇದನ್ನೂ ಕೂಡ ಓದಿ : ತಾಯಿಯನ್ನು ಉಳಿಸಲು ಈ ಪುಟ್ಟ ಕಂದಮ್ಮ ಮಾಡಿರುವ ಸಾಹಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.!

ಆದರೆ ಹೀಗೆ ಮಾಡಿದರೆ ಸಾಲದು ಎಂಬ ಭಾವನೆ ಆತನಲ್ಲಿ ಮೂಡಿದ್ದರಿಂದ ರಾಜ್ಯದ ವಿವಿಧೆಡೆ ಸಂಚರಿಸಿ ವಿವರ ನೀಡತೊಡಗಿದರು. ರಾಜ್ಯ, ಅಂತರರಾಜ್ಯ ನಂತರ ದೇಶ ವಿದೇಶಗಳಿಗೆ ಹೋದ ನಂತರ. ಪಾಕಿಸ್ತಾನ ರಷ್ಯಾಕ್ಕೂ ಹೋಗಿದ್ದ. ಹಿಂದಿ, ಇಂಗ್ಲಿಷ್ ಸರಿಯಾಗಿ ಬಾರದಿದ್ದರೂ 22ರ ಹರೆಯದಲ್ಲೇ ದೇಶದೆಲ್ಲೆಡೆ ಫೇಮಸ್.
ಆದರೆ ಇಷ್ಟೆಲ್ಲ ಮಾಡಲು ಗಗನ್ ತನ್ನ ತಂದೆ-ತಾಯಿಯಿಂದಾಗಲಿ, ಬೇರೆಯವರಿಂದಾಗಲಿ ಒಂದು ರೂಪಾಯಿಯನ್ನೂ ಪಡೆದಿರಲಿಲ್ಲ. ಹೌದು, ಸ್ವಂತ ದುಡಿಮೆಯ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply