Darshan: ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

Darshan : ತೂಗುದೀಪ ಶ್ರೀನಿವಾಸ ಅವರು 1973ರಲ್ಲಿ ಮೀನಾ ಎಂಬುವವರನ್ನು ವಿವಾಹವಾಗುತ್ತಾರೆ. ಆ ಸಂದರ್ಭದಲ್ಲಿ ತೂಗುದೀಪ ಶ್ರೀನಿವಾಸ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರನ್ನು ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.

ತೂಗುದೀಪ ಶ್ರೀನಿವಾಸ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು, ಏಕೆಂದರೆ ಬಹುತೇಕ ಸಿನಿಮಾಗಳು ಬೆಂಗಳೂರಿನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದ್ದರಿಂದ ಕುಟುಂಬದ ಜೊತೆ ಮಕ್ಕಳ ಜೊತೆ ಮೈಸೂರಿನಲ್ಲಿ ಸಮಯವನ್ನು ಕಳೆಯಲು ತೂಗುದೀಪ ಶ್ರೀನಿವಾಸ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಇಡೀ ಕುಟುಂಬದ ಜವಾಬ್ದಾರಿಯನ್ನು ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಮೀನಾ ತೂಗುದೀಪ್ ಶ್ರೀನಿವಾಸ್.

ಇದನ್ನೂ ಕೂಡ ಓದಿ : Darshan: ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಮೀನಾ ತೂಗುದೀಪ್ ತಮ್ಮ ಗಂಡ ತರುತ್ತಿದ್ದ ಹಣದಿಂದ ಒಂದೊಂದು ರೂಪಾಯಿಯನ್ನು ಶೇಖರಣೆ ಮಾಡಿ ಮೊದಲು ಮೈಸೂರಿನ ಸಿದ್ದಾರ್ಥ ಲೇಔಟ್ ಅಲ್ಲಿ ಸೈಟ್ ಖರೀದಿ ಮಾಡುತ್ತಾರೆ, ತದನಂತರ ಮನೆಯನ್ನು ಕೂಡ ನಿರ್ಮಾಣ ಮಾಡುತ್ತಾರೆ. 

ತೂಗುದೀಪ ಶ್ರೀನಿವಾಸ ಅವರಿಗೆ 2 ಕಿಡ್ನಿಯು ವೈಫಲ್ಯ ಆಗುತ್ತದೆ, ಆಗ ಯಾರಾದರೂ ಒಬ್ಬರು ಒಂದು ಕಿಡ್ನಿಯನ್ನು ಅವರಿಗೆ ನೀಡಬೇಕಾಗುತ್ತದೆ, ಇಲ್ಲವಾದರೆ ಅವರನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ಮೀನಾ ತೂಗುದೀಪ ಅವರು ತಮ್ಮ ಒಂದು ಕಿಡ್ನಿಯನ್ನು ತಮ್ಮ ಗಂಡನಿಗೆ ನೀಡಲು ನಿರ್ಧಾರ ಮಾಡುತ್ತಾರೆ. ಮೀನಾ ತೂಗುದೀಪ ಅವರು ಅಂದುಕೊಂಡಂತೆ ಒಂದು ಕಿಡ್ನಿಯನ್ನು ತಮ್ಮ ಗಂಡನಿಗೆ ದಾನ ಮಾಡುತ್ತಾರೆ.

1993ರ ನಂತರ ತೂಗುದೀಪ ಶ್ರೀನಿವಾಸ ಅವರು ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಹಾಸಿಗೆಯನ್ನು ಹಿಡಿದಿದ್ದರು. ಕಿಡ್ನಿಯನ್ನು ನೀಡಿದ ನಂತರವೂ ಹೆಚ್ಚು ದಿನ ತೂಗುದೀಪ ಶ್ರೀನಿವಾಸ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅಂತಿಮವಾಗಿ 1995ರಲ್ಲಿ ತೂಗುದೀಪ ಶ್ರೀನಿವಾಸ ಅವರು ವಿಧಿವಶರಾಗುತ್ತಾರೆ. 

ಇಂದು ದರ್ಶನ್ ಅವರು ಎತ್ತರದ ಸ್ಥಾನದಲ್ಲಿ ನಿಲ್ಲಲು ಮೀನಾ ತೂಗುದೀಪ ಅವರು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.

ಇದನ್ನೂ ಕೂಡ ಓದಿ : Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply