ಮುಂಗಾರುಮಳೆ ಸಿನಿಮಾದ ನಾಯಕನ ಪಾತ್ರ ಮೊದಲು ಯಾರು ಮಾಡಬೇಕಿತ್ತು ಗೊತ್ತೆ.? | Puneeth Rajkumar | Ganesh

ಮುಂಗಾರು ಮಳೆ 2006ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ 500 ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ 125 ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸು ಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಈ ಒಂದು ಕಾರಣಕ್ಕೆ ರಚಿತಾ ರಾಮ್ ಇನ್ನು ಮದುವೆನೇ ಆಗಿಲ್ಲ.! ಅಷ್ಟಕ್ಕೂ ಕಾರಣ ಏನು ಗೊತ್ತಾ.?

ಯೋಗರಾಜ್ ಭಟ್ ಅವರು ಈ ಸಿನಿಮಾದ ಕತೆ ಬರೆದಿದ್ದು ಪುನೀತ್ ಅವರಿಗಾಗಿ. ಆದರೆ ಪವರ್ ಸ್ಟಾರ್ ಈ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲವಂತೆ. ಈ ಸಿನಿಮಾಗೆ ಪುನೀತ್ ಹೀರೋ ಆಗಬೇಕೆಂದು ಕನಸು ಕಂಡಿದ್ದ ಯೋಗರಾಜ್ ಭಟ್ಟರ ಆಸೆ ಕೈಗೂಡಲಿಲ್ಲ. ನಂತರ ಯೋಗರಾಜ ಭಟ್ ಅವರು ಈ ಕಥೆ ತೆಗೆದುಕೊಂಡು ವಿಜಯ್ ರಾಘವೇಂದ್ರ ಬಳಿ ಹೋಗಿದ್ದು, ವಿಜಯ್ ರಾಘವೇಂದ್ರ ಕೂಡ ಡೇಟ್ ಸಮಸ್ಯೆಯಿಂದ ಈ ಸಿನಿಮಾ ಕೈಬಿಟ್ಟಿದ್ದು ಎಲ್ಲಾ ಗೊತ್ತಿರುವ ವಿಚಾರ. ನಂತರ ಯೋಗರಾಜ್ ಭಟ್, ಗಣೇಶ್ ಅವರಿಗೆ ಈ ಸಿನಿಮಾ ಮಾಡಿ ದೊಡ್ಡ ಮಟ್ಟದ ಯಶಸ್ಸು ಕಂಡರು. 

Whatsapp Group Join
Telegram channel Join

ಗಾಳಿಪಟ ಸಿನಿಮಾ ಕೂಡ ಪುನೀತ್ ಗಾಗಿ ಸಿದ್ಧವಾದ ಕಥೆ. ಯೋಗರಾಜ್ ಭಟ್ ಅವರ ಮೊದಲ ಆಯ್ಕೆ ಪವರ್ ಸ್ಟಾರ್ ಪುನೀತ್ ಆಗಿದ್ದರು. ಆದರೆ ಆಗಲೂ ಪವರ್ ಸ್ಟಾರ್ ಗೆ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಬಳಿಕ ಮತ್ತೆ ಗಾಳಿಪಟ ಸಿನಿಮಾದಲ್ಲಿ ಗಣೇಶ್ ನಾಯಕನಾಗಿ ಮಿಂಚಿದರು. ಆ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು.

ಇದನ್ನೂ ಕೂಡ ಓದಿ : ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನ ಕೇವಲ 2 ಗಂಟೆಯಲ್ಲೇ ಧೂಳಿಪಟ ಮಾಡಿದೆಯಂತೆ ಯುವ ಸಿನಿಮಾದ ಟೀಸರ್.!

ಎರಡು ಭಾರಿ ಯೋಗರಾಜ್ ಭಟ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕೆಲಸ ಮಾಡುವ ಅವಕಾಶ ಕೈತಪ್ಪಿತ್ತು. ಆದರೆ ಪರಮಾತ್ಮ ಸಿನಿಮಾ ಮೂಲಕ ಭಟ್ರು ಮತ್ತು ಪವರ್ ಸ್ಟಾರ್ ಒಂದಾದರು. ಸಂದರ್ಶನವೊಂದರಲ್ಲಿ ಗಣೇಶ್ ಅವರು ಮುಂಗಾರು ಮಳೆ ಮತ್ತು ಗಾಳಪಟ ಸಿನಿಮಾ ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು, ಯೋಗರಾಜ್ ಭಟ್ ಪುನೀತ್ ಗಾಗಿ ಕಥೆ ಮಾಡಿದ್ದು ಎಂದು ಬಹಿರಂಗ ಪಡಿಸಿದ್ದರು. 

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply