Health Tips : ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ.! ಯಾಕೆ ಗೊತ್ತಾ.? – ಆರೋಗ್ಯ ಮಾಹಿತಿ

Health Tips : ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ.

ಹಣ್ಣು ಸೇವನೆ :- ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ ಎಚ್ಚರವಿರಲಿ.

ಇದನ್ನೂ ಕೂಡ ಓದಿ : 47 ಸಾವಿರ ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸ್… ಅದಕ್ಕೆ ಆಟೋ ಚಾಲಕ ಮಾಡಿದ್ದೇನು ಗೊತ್ತಾ.?

ನಿದ್ರೆ :- ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಕಣ್ಣು ನಿದ್ರಾ ದೇವಿಯತ್ತ ಸೆಳೆಯುವುದು ಸಹಜ. ಆದರೆ ನಿದ್ರೆ ಮಾಡಿದಾಗ ನಮ್ಮ ಜೀರ್ಣ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಅಥವಾ ಜೀರ್ಣ ಪ್ರಕ್ರಿಯೆ ನಿಧಾನವಾಗುತ್ತದೆ. ಇದು

ಅಪಾಯಕಾರಿ. ಇದರಿಂದಲೂ ಅಜೀರ್ಣದ ಸಮಸ್ಯೆ ಬರಬಹುದು. ಅಷ್ಟೇ ಅಲ್ಲ, ಬೊಜ್ಜು ಬೆಳೆಯುವುದಕ್ಕೂ ಇದು ಕಾರಣವಾಗಬಹುದು. ಹಾಗಾಗಿ ಊಟವಾದ ತಕ್ಷಣ ಇವೆರಡೂ ಕೆಲಸಗಳನ್ನೂ ಖಂಡಿತಾ ಮಾಡಬೇಡಿ.


ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply