Crop Compensation : ರೈತರಿಗೆ ಮಾರ್ಚ್ 31 ಇದನ್ನು ಮಾಡಲು ಕೊನೆಯ ದಿನ

Crop Compensation : ಬರದಿಂದ ಕಂಗೆಟ್ಟ ಬೆಳೆ ನಷ್ಟ ಹೊಂದಿದ ರೈತರಿಗೆ ಅಲ್ಪಸ್ವಲ್ಪ ಬರ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ಮಹತ್ವದ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಂಚ ಆಸರೆಯಾಗಿ ನಿಂತಿದೆ.

ಇದನ್ನೂ ಕೂಡ ಓದಿ : Aadhar Link to Pahani : ಎಲ್ಲಾ ರೈತರಿಗೆ ಬಿಗ್ ಶಾಕ್.! ಈ ಕೆಲಸ ಕಡ್ಡಾಯ – ಜಮೀನು ಇರುವ ರೈತರು ತಪ್ಪದೆ ನೋಡಿ

ಹೌದು, ರೈತರ ಬಡ್ಡಿ ಮನ್ನಾ, ಸರ್ಕಾರದ ಆದೇಶದಂತೆ ರೈತರು ರಾಜ್ಯದ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಮತ್ತು ಪ್ರಾಥಮಿಕ ಸಹಕಾರ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳಿಂದ ಸಾಲ ಪಡೆದು ದಿನಾಂಕ 31-12-2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ, 29-02-2024 ರೊಳಗೆ ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಮರು ಪಾವತಿಸಿದಲ್ಲಿ, ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಮನ್ನಾ ಆದ ಈ ಬಡ್ಡಿಯ ಮೊತ್ತವನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಇದನ್ನೂ ಕೂಡ ಓದಿ : Ration Card : ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್ – ಏಪ್ರಿಲ್ 1 ರಿಂದ ಬಂಪರ್ – ಹೊಸ ಕಾರ್ಡ್

ದಿನಾಂಕ 29-02-2024 ರವರೆಗೆ 29,456 ರೈತರು 281.88 ಕೋಟಿಗಳ ಸುಸ್ತಿ ಸಾಲ ಮರುಪಾವತಿಸಿದ್ದು. ಇದರ ಸರ್ಕಾರದ ಬಡ್ಡಿ 214.55 ಕೋಟಿಗಳಾಗಿರುತ್ತವೆ. ದೀರ್ಘಾವಧಿ ಕೃಷಿಗೆ ಸಂಬಂಧಿಸಿದ ಸಾಲಗಳ ಕಂತುಗಳ ಅಸಲನ್ನು ಪಾವತಿಸುವ ದಿನಾಂಕವನ್ನು ಹಿಂದಿನದನ್ನು ಬದಲಿಸಿ 31-03-2024 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ರೈತರು ಸಹಕಾರಿ ಬ್ಯಾಂಕ್‌ ಅಸಲನ್ನು ತುಂಬಿದಲ್ಲಿ, ಸರ್ಕಾರ ಬಡ್ಡಿಯನ್ನು ಭರಿಸಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply