Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಎರಡೆರಡು ಲವ್ ಸ್ಟೋರಿ.! ದೊಡ್ಮನೆಯ ಅಸಲಿ ಆಟ ಶುರುವಾಯ್ತಾ.?

Bigg Boss Kannada : ಪ್ರತೀ ಬಾರಿಯ ಹಾಗೆ ಈ ಬಾರಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರೇಮ್ ಕಹಾನಿ ಶುರುವಾಗಿದೆ. ವಿಶೇಷ ಅಂದ್ರೆ ಕೇವಲ ಬಿಗ್ ಬಾಸ್ ಶುರುವಾಗಿ ಮೂರು ದಿನಕ್ಕೆ ಎರಡೆರಡು ಲವ್ವಿ ಡವ್ವಿ ಶುರುವಾಗಿದ್ದು, ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ದೊಡ್ಮನೆಯ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಈ ಸೀಸನ್ ನಲ್ಲೂ ಕೂಡ ಪ್ರೀತಿ ಚಿಗುರುವ ಮುನ್ಸೂಚನೆ ಸಿಕ್ಕಿದೆ. ಚಾರ್ಲಿ ಸುಂದರಿ ಸಂಗೀತ ಮೇಲೆ ಕಾರ್ತಿಕ್ ಗೆ ಲವ್ ಆಗಿದೆಯಾ.? ಎನ್ನುವ ಅನುಮಾನ ಮೂಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್.! ಪ್ರತಾಪ್ ಗೆ ಅವಮಾನ ಮಾಡಿದ್ದು ಯಾರು ನೋಡಿ.?

ದೊಡ್ಮನೆ ವೇದಿಕೆ ಮೇಲೆ ಮನೆಗೆ ಸೊಸೆಯನ್ನ ಕರೆದುಕೊಂಡು ಬರುತ್ತೀನಿ ಅಂತ ಕಾರ್ತಿಕ್ ಹೇಳಿದ್ದರು. ಅದೇ ಹಾದಿಯಲ್ಲಿ ಇದೀಗ ನಟ ಹೆಜ್ಜೆಯಿಡುತ್ತಿದ್ದಾರೆ. ಬಿಗ್ ಬಾಸ್ ಮನೆ ಅಂದ್ಮೇಲೆ ಲವ್, ರೋಮ್ಯಾನ್ಸ್ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸ್ಪರ್ಧಿಗಳು ಹೈಲೈಟ್ ಆಗುತ್ತಾರೆ. ಇಲ್ಲಿನ ಗೆಳೆತನ ದೊಡ್ಮನೆಯಿಂದ ಹೊರ ಬಂದ ಮೇಲೆ ಮದುವೆಯಾದ ಉದಾಹರಣೆಗಳು ಇವೆ. ಒಂದು ಕಡೆ ಇಶಾನಿ, ಸ್ನೇಹಿತ್ ಲವ್ವಿ ಡವ್ವಿ ನಡೆಯುತ್ತಾ ಇದ್ದರೆ, ಇನ್ನೊಂದು ಕಡೆ ಸಂಗೀತಾ, ಕಾರ್ತಿಕ್ ಲವ್ ಸ್ಟೋರಿ ಶುರುವಾದಂತಿದೆ. ಸಂಗೀತಾ ಹೋದೆಲ್ಲೆಲ್ಲಾ ಕಾರ್ತಿಕ್ ಇರುತ್ತಾರೆ.

Whatsapp Group Join
Telegram channel Join

ಇದೆಲ್ಲಾ ಫ್ಯಾನ್ಸ್ ಗಮನಕ್ಕೆ ಬಂದಿದೆ. ದಿವ್ಯ-ಅರವಿಂದ್, ಚಂದನ್-ನಿವೇದಿತಾ ಅವರಂತೆಯೇ ಕಾರ್ತಿಕ್-ಸಂಗೀತಾ ಕೂಡ ಗುಡ್ ನ್ಯೂಸ್ ಕೊಡುತ್ತಾರಾ ಹೇಗೆ.? ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ. ಇದೀಗ ಈ ಸುದ್ಧಿಗೆ ಪುಷ್ಟಿ ನೀಡುವಂಥ ಘಟನೆ ಕೂಡ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ನಡೆದಿದೆ. ಬಿಗ್ ಬಾಸ್ ದೊಡ್ಮನೆಯಲ್ಲಿ ನಾಮಿನೇಟ್ ಮಾಡುವ ಪ್ರಕ್ರಿಯೆಯನ್ನ ಸ್ಪರ್ಧಿಗಳು ನೀಡಿದ್ದರು. ಈ ವೇಳೆ ಅಸಮರ್ಥ ತಂಡದಲ್ಲಿರುವ ಸಂಗೀತಾ ನೆಲದ ಮೇಲೆ ಕೂರುವ ಬದಲು ಸೋಫಾ ಮೇಲೆ ಕುಳಿತಿದ್ದರು. ಸಂಗೀತಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ವಿನಯ್ ನಾಮಿನೇಟ್ ಮಾಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಈ ವೇಳೆ ಸಂಗೀತಾ ಜೊತೆಯಾಗಿ ಕಾರ್ತಿಕ್ ನಿಂತಿದ್ದರು. ಕೂಲಾಗಿರಿ ಎಂದು ಬೆಂಬಲಿಸಿದ್ದರು. ಇದನ್ನೆಲ್ಲಾ ನೋಡಿ ಪ್ರೇಕ್ಷಕರು, ಇವರಿಬ್ಬರು ಪಕ್ಕಾ ಅಂತಿದ್ದಾರೆ. ಇದು ನೂರು ದಿನಗಳ ಆಟ ಅಲ್ಲವೇ.? ಷೋ ಮುಗಿಯುವುದರಲ್ಲಿ ಇಬ್ಬರೂ ಪ್ರೇಮ-ಪಕ್ಷಿಗಳಾಗಿ ಹೆಜ್ಜೆಯಿಡುತ್ತಾರಾ.? ಕಾದುನೋಡಬೇಕಿದೆ. ಈ ಬಾರಿಯ ಬಿಜಿ ಬಾಸ್ ಸೀಸನ್ ನಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾರು ಅಂತ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply