ಮಲಗುವ ಮುನ್ನ ಅಪ್ಪಿತಪ್ಪಿಯೂ ಸಂಗಾತಿ ಜೊತೆ ಈ ತಪ್ಪು ಮಾಡಲೇಬೇಡಿ

ಪತ್ನಿ ಅಥವಾ ಗೆಳತಿ ಪ್ರತಿಯೊಂದು ಸಂಬಂಧದಲ್ಲೂ ಕೆಲವೊಂದು ವಿಷಯಗಳಿಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ನೀವು ಮಾಡುವ ಒಂದು ಸಣ್ಣ ತಪ್ಪು ಇಡೀ ಸಂಬಂಧಕ್ಕೆ ಕಪ್ಪು ಚುಕ್ಕೆಯಾಗುವ ಸಾಧ್ಯತೆ ಇರುತ್ತದೆ. ಕೆಲಸದ ಒತ್ತಡದಿಂದಾಗಿ ಇಡೀ ದಿನ ಬ್ಯುಸಿಯಾಗಿರುವ ಜನರಿಗೆ ರಾತ್ರಿ ಅಲ್ಪ ಸ್ವಲ್ಪ ಸಮಯ ಸಿಗುತ್ತೆ. ಇಂತಹ ಸಮಯದಲ್ಲಿ ಪುರುಷರು ಅಪ್ಪಿತಪ್ಪಿಯೂ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು.

Whatsapp Group Join
Telegram channel Join

ರಾತ್ರಿ ಮಲಗುವ ಮೊದಲು ಮೊಬೈಲ್ ಅಥವಾ ಲ್ಯಾಪ್ ಟಾಪ್ ಯೂಸ್ ಮಾಡುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ. ನಿದ್ರೆ ಬರುವವರೆಗೂ ಅನೇಕರು ಮೊಬೈಲ್ ನಲ್ಲಿರ್ತಾರೆ. ಇಂತಹ ತಪ್ಪನ್ನು ಇಷ್ಟು ದಿನ ನೀವೂ ಮಾಡ್ತಾ ಇದ್ದಲ್ಲಿ ಇಂದೇ ಇದನ್ನು ಬಿಡಿ. ರಾತ್ರಿ ಸಮಯದಲ್ಲಿ ಸಾಧ್ಯವಾದಷ್ಟು ಪತ್ನಿ ಅಥವಾ ಸಂಗಾತಿ ಜತೆ ಕಳೆಯಿರಿ. ನಿಮ್ಮಿಬ್ಬರ ಮಧ್ಯೆ ಇರುವ ಅಂತರ ಕಡಿಮೆ ಮಾಡಿ ಪ್ರೀತಿ ಹೆಚ್ಚಾಗಲು ಇದು ಕಾರಣವಾಗುತ್ತದೆ.

ಬೆಡ್ ರೂಮ್ ನಲ್ಲಿ ನಿಮ್ಮ ಕಛೇರಿಯ ಅಥವಾ ಸಂಬಂಧಿಕರ ವಿಚಾರ ಪ್ರಸ್ತಾಪ ಮಾಡುವುದು ಬೇಡ. ಇದು ನಿಮ್ಮ ಸಂಗಾತಿಗೆ ಕಿರಿ ಕಿರಿಯುಂಟು ಮಾಡಬಹುದು. ಈ ಅಮೂಲ್ಯ ಸಮಯವನ್ನು ಪರಸ್ಪರ ಪ್ರೀತಿಯ ಮಾತಿನಲ್ಲಿ ಕಳೆಯಿರಿ.
ರಾತ್ರಿ ಮಲಗುವಂತಹ ಸಮಯದಲ್ಲಿ ನಿಮ್ಮ ಸಂಗಾತಿ ಇಡೀ ದಿನ ಮಾಡಿದ ತಪ್ಪಿನ ಬಗ್ಗೆ ಚರ್ಚೆ ಮಾಡಬೇಡಿ. ಇದು ಸಂಗಾತಿಯ ಬೇಸರಕ್ಕೆ ಕಾರಣವಾಗಬಹುದು. ಜೊತೆಗೆ ನಿಮ್ಮ ಮೇಲೆ ಸಂಗಾತಿ ಮುನಿಸಿಕೊಂಡು ಗಲಾಟೆ ಮಾಡುವುದರಿಂದ ಇಡೀ ರಾತ್ರಿ ಹಾಳಾಗಬಹುದು.

Whatsapp Group Join
Telegram channel Join

ರಾತ್ರಿ ಏನೂ ಹೇಳದೆ ಹಾಸಿಗೆಗೆ ತಲೆಕೊಟ್ಟ ತಕ್ಷಣ ಸಂಗಾತಿ ನಿದ್ರೆ ಮಾಡ್ತಾನೆ ಎಂಬ ದೂರು ಅನೇಕ ಹುಡುಗಿಯರದ್ದು. ರಾತ್ರಿ ಮಲಗುವ ಮೊದಲು ಗುಡ್ ನೈಟ್ ಮುತ್ತು ಕೊಡುವುದನ್ನು ಮರೀಬೇಡಿ.
ರಾತ್ರಿ ಸಂಗಾತಿಗೆ ಬೆನ್ನು ಹಾಕಿ ಮಲಗೋದು ಬಹುತೇಕ ಹುಡುಗಿಯರಿಗೆ ಇಷ್ಟ ಆಗೋದಿಲ್ಲ. ಸಂಗಾತಿ ತಬ್ಬಿ ಮಲಗಬೇಕೆಂಬುದು ಅವರ ಆಸೆ. ಇದನ್ನು ಪುರುಷನಾದವನು ನೆನೆಪಿಟ್ಟುಕೊಳ್ಳುವ ಅವಶ್ಯಕತೆ ಇದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply