Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್.! ಪ್ರತಾಪ್ ಗೆ ಅವಮಾನ ಮಾಡಿದ್ದು ಯಾರು ನೋಡಿ.?

Bigg Boss Kannada : ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ಇದೀಗ ಹತ್ತನೇ ಸೀಸನ್ ಗೆ ಕಾಲಿಟ್ಟಿದ್ದು, ಗ್ರಾಂಡ್ ಓಪನಿಂಗ್ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರ ಪೈಕಿ ಈಗಾಗಲೇ ಕಿರು ಪರಿಚಯದ ಜೊತೆಗೆ ಮಾತಿನ ಕಿಚ್ಚು ಕೂಡ ಜೋರಾಗಿಯೇ ಆರಂಭಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಕುರಿತು ಹಾಸ್ಯ ಶುರುವಾಗಿದ್ದು, ತುಕಾಲಿ ಸಂತೋಷ್, ವಿನಯ್, ರಕ್ಷಕ್ ಸೇರಿದಂತೆ ಎಲ್ಲರೂ ಊಟದ ಟೇಬಲ್ ಬಳಿ ಕುಳಿತು ಪ್ರತಾಪ್ ಮನೆಯೊಳಗೇ ಇದ್ದ ಕೆಲ ಪ್ರಸಂಗಗಳನ್ನು ಮುಂದಿಟ್ಟು ಕಾಮಿಡಿ ಮಾಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಈ ವೇಳೆ ಮನೆಯವರನ್ನು ನಗೆ ಪಾತಳಿಗೆ ದೂಡಿದ ತುಕಾಲಿ ಸಂತು, ಅವನು ಡ್ರೋನ್ ಕಡೆ ಗಮನ ಹರಿಸುತ್ತಿಲ್ಲ, ರೊಟ್ಟಿ ಕಡೆ ಗಮನ ಹರಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್, ಸ್ನೇಹಿತ್ ಮತ್ತು ವಿನಯ್ ಎಲ್ಲರು ಸೇರಿ ಹಾಸ್ಯ ಮಾಡುತ್ತಿದ್ದಾರೆ. ಮನೆಯ ಮೂಲೆಯಲ್ಲಿ ನಿಂತು ಪ್ರತಾಪ್ ನಕ್ಕಿದ್ದಾರೆ. ತುಕಾಲಿ ಸಂತೋಷ್ ಕಾಮಿಡಿಗೆ ಸಿಲುಕಿದ ಡ್ರೋನ್ ಪ್ರತಾಪ್, ರೊಟ್ಟಿ ಪ್ರತಾಪ್ ಆದ್ರಾ ಎನ್ನುವುದನ್ನು ಪೂರ್ತಿಯಾಗಿ ಇಂದಿನ ಸಂಚಿಕೆಯಲ್ಲಿ ತಿಳಿಯಬಹುದು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Vijaya Raghavendra : ಮಗನಿಗಾಗಿ ವಿಶೇಷ ಪ್ರಾರ್ಥನೆ ಮಾಡಿದ ನಟ ವಿಜಯ ರಾಘವೇಂದ್ರ.! ಚಿತ್ರೀಕರಣದಲ್ಲಿ ಬ್ಯುಸಿಯಾದ ನಟ

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ವಿಚಾರವಾಗಿ ನಡೆದ ಮಾತುಕತೆ ವಿಕೋಪಕ್ಕೆ ಹೋಗಿದೆ. ಸ್ನೇಹಿತ್ ಗೌಡ, ವರ್ತೂರ್ ಸಂತೋಷ್ ಹಾಗು ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ವೈಯುಕ್ತಿಕವಾಗಿ ಟೀಕೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿದ್ದಾರ.? ಹೀಗೊಂದು ಪ್ರಶ್ನೆ ನೋಡುಗರಿಗೆ ಕಾಣುತ್ತಿದೆ. ಪ್ರತಾಪ್ ಮೇಲೆ ಸುಖಾಸುಮ್ಮನೆ ಎಲ್ಲರೂ ಮುಗಿಬೀಳುತ್ತಿದ್ದಾರೆ. ಎಲ್ಲದಕ್ಕೂ ಅವರನ್ನು ಎಳೆದು ತಂದು ಟೀಕೆ ಮಾಡುತ್ತಿದ್ದಾರೆ. ಹಾಗೆಯೇ ಟೀಕೆ ಮಾಡಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಲೇ ಅವರೆಲ್ಲರ ಮಾತಿಗೆ ತಲೆಯಾಡಿಸುತ್ತಲೇ ಬಂದಿದ್ದ ಡ್ರೋನ್ ಪ್ರತಾಪ್ ಸ್ನೇಹಿತ್ ಆಡಿದ ಮಾತಿಗೆ ಮೌನವನ್ನು ಮುರಿದು ಬಾಯಿಬಿಟ್ಟಿದ್ದಾರೆ. ವೈಯುಕ್ತಿಕ ತೇಜೋವದೆ ಮಾಡಿದ ಸ್ನೇಹಿತ್ ಜೊತೆಗೆ ಮಾತಿಗಿಳಿದಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply