Beauty Tips | ತ್ವಚೆಯ ಹೊಳಪಿಗೆ ಉತ್ತಮ ಟಿಪ್ಸ್ ಗಳು | Best tips for glowing skin

Beauty Tips ಕಡಿಮೆ ಖರ್ಚಿನಲ್ಲಿ ಮುಖವನ್ನು ಚೆನ್ನಾಗಿ ಹೊಳೆಯುವಂತೆ ಮಾಡುವ ಕೆಲವು ಟಿಪ್ಸ್ ಗಳು (Best tips for glowing skin)

ದಟ್ಟವಾದ ಹುಬ್ಬುಗಳಿಗೆ : ಹಲವರಿಗೆ ಅವರ ಹುಬ್ಬುಗಳು ತೆಳ್ಳಗಿದೆ ಅನ್ನುವ ಸಮಸ್ಯೆ ಇದೆ. ಅಂತಹವರು ಪ್ರತಿದಿನ ಹೀಗೆ ಮಾಡಿ. ಒಂದು ಬಟ್ಟಲಿಗೆ ಒಂದು ಚಮಚ ಹರಳೆಣ್ಣೆ, ಒಂದು ವಿಟಮಿನ್ ಇ ಕಾಪ್ಸಲ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿಡಿ. ಇದನ್ನು ಪ್ರತಿದಿನ ರಾತ್ರಿ ಮುಖ ತೊಳೆದು ನಂತರ ಹುಬ್ಬುಗಳಿಗೆ ಹಚ್ಚಿ ಬೆಳಿಗ್ಗೆ ತೊಳೆಯಿರಿ.

Whatsapp Group Join
Telegram channel Join

ಡಾರ್ಕ್ ಸರ್ಕಲ್ : ಡಾರ್ಕ್ ಸರ್ಕಲ್ ಸಮಸ್ಯೆ ಇರುವವರ ಕಣ್ಣಿನ ಸುತ್ತ ಕಪ್ಪಾಗಿ ಇರುತ್ತದೆ. ಇಂತಹ ಸಮಸ್ಯೆ ಇದ್ದವರು ಮನೆಯಲ್ಲಿಯೇ ಒಂದು ಕ್ರೀಮ್ ತಯಾರಿಸಿ ಹಚ್ಚಿದರೆ ಸಾಕು, ಬೇಗನೇ ನಿವಾರಣೆಯಾಗುತ್ತದೆ. ಕ್ರೀಮ್ ತಯಾರಿಸುವ ವಿಧಾನ :- ಒಂದು ಬಟ್ಟಲಿಗೆ ಒಂದು ಚಮಚ ಅಲೋವೆರಾ ಜೆಲ್, ಒಂದು ವಿಟಮಿನ್ ಇ ಕಾಪ್ಸಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕ್ರೀಮ್ ರೆಡಿ. ಒಂದು ಡಬ್ಬದಲ್ಲಿ ಹಾಕಿ ಇಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿ ಬೆಳಿಗ್ಗೆ ತೊಳಿಯಿರಿ. ಹೀಗೆ ಮಾಡುತ್ತ ಬಂದರೆ ಡಾರ್ಕ್ ಸರ್ಕಲ್ ಕಡಿಮೆ ಆಗುತ್ತದೆ. ಜೊತೆಗೆ ಕಣ್ಣಿನ ಕೆಳಗೆ ನೆರಿಗೆ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

ಇದನ್ನೂ ಓದಿ :- ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

Whatsapp Group Join
Telegram channel Join
Best tips for glowing skin | Beauty Tips

ಮೊಡವೆ ಹಾಗು ಮೊಡವೆ ಕಲೆಗಳಿಗೆ : ಅಂತವರು ಹೀಗೆ ಮಾಡಿ ಒಂದು ಬಟ್ಟಲಿಗೆ ಒಂದು ಚಮಚ ಬೇವಿನ ಎಲೆಯ ಪುಡಿಯನ್ನ ಹಾಕಿ ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಕಾಲು ಚಮಚ ಅರಿಶಿನ ಪುಡಿ ಎರಡು ಚಮಚ ರೋಝ್ ವಾಟರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರಾತ್ರಿ ಮುಖ ತೊಳೆದು ನಂತರ ಮೊಡವೆ ಅಥವಾ ಮೊಡವೆ ಕಲೆ ಇರುವ ಜಾಗಕ್ಕೆ ಹಚ್ಚಿ ಬೆಳಿಗ್ಗೆ ಮುಖ ತೊಳೆದು ಕೊಳ್ಳಿ. ಈ ರೀತಿ ಮಾಡುತ್ತಾ ಬಂದರೆ ಮೊಡವೆಗಳು ಬೇಗನೆ ಕಡಿಮೆ ಆಗುತ್ತದೆ. ಹಾಗು ಮೊಡವೆಯ ಕಲೆಗಳು ನಿವಾರಣೆ ಆಗುತ್ತದೆ.

ಮುಖ ಮತ್ತು ಕತ್ತು ಕಪ್ಪಾಗಿದ್ದರೆ : ಒಂದು ಬಟ್ಟಲಿಗೆ ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಮೊಸರು, ಒಂದು ಚಮಚ ಲಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ ಹಾಗು ಕತ್ತಿನ ಭಾಗವನ್ನು ಚೆನ್ನಾಗಿ ತೊಳೆದು ಈ ಪ್ಯಾಕ್ ಅನ್ನು ಹಚ್ಚಿ 20 ನಿಮಿಷ ಹಾಗೇ ಬಿಡಿ ನಂತರ ತೊಳೆದು ಕೊಳ್ಳಿ. ಹೀಗೆ ವಾರದಲ್ಲಿ ಮೂರು ಬಾರಿ ಮಾಡಿದ್ರೆ ಬೇಗನೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಇದನ್ನೂ ಓದಿ :- ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

ಮುಖದಲ್ಲಿರುವ ಅನಗತ್ಯ ಕೂದಲಿಗೆ : ಮುಖದಲ್ಲಿ ಬೇಡವಾದ ಕೂದಲಿನಿಂದ ಮುಖದ ಅಂದವನ್ನೇ ಹಾಳು ಮಾಡುತ್ತದೆ. ಅದನ್ನು ಹೋಗಲಾಡಿಸಲು ಹೀಗೆ ಮಾಡಿ. ಎರಡು ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಅರಿಶಿನ ಪುಡಿ, ಎರಡು ಚಮಚ ತೆಂಗಿನ ಎಣ್ಣೆ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅನಗತ್ಯ ಕೂದಲಿರುವ ಜಾಗಕ್ಕೆ ವಿರುದ್ಧ ದಿಕ್ಕಿನಲ್ಲಿ ಈ ಪ್ಯಾಕ್ ಅನ್ನು ಹಚ್ಚಿ ಒಣಗಲು ಬಿಡಿ, ನಂತರ ನೀರು ತಾಗಿಸದೇ ಈ ಪ್ಯಾಕ್ ಅನ್ನು ವಿರುದ್ಧ ದಿಕ್ಕಿನಲ್ಲಿ ಮಸಾಜ್ ಮಾಡಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply