Annabhagya Yojane : ಅನ್ನಭಾಗ್ಯ ಹಣ ಜಮಾವಣೆ.! ಹಣ ಇದುವರೆಗೂ ಬರದೇ ಇರುವವರು ಹೀಗೆ ಮಾಡಿ

Annabhagya Yojane : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಉಚಿತ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿ ಹಾಗು ಇನ್ನುಳಿದ ಐದು ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲಾಗುತ್ತಿದೆ. ಮಾರ್ಚ್ ತಿಂಗಳ ಹಣವನ್ನು ಈಗಾಗಲೇ ಜಮಾವಣೆ ಮಾಡಿ ಅನ್ನಭಾಗ್ಯ ಯೋಜನೆದಾರರಿಗೆ ಹಬ್ಬದ ಸಮಯದಲ್ಲಿ ಗುಡ್‌ನ್ಯೂಸ್ ನೀಡಿದೆ.

ಅನ್ನಭಾಗ್ಯ ಯೋಜನೆಯಡಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿಗೆ 120 ರೂಪಾಯಿಯನ್ನು ಜಮಾವಣೆ ಮಾಡಲಾಗುತ್ತಿದೆ. ಮನೆ ಸದಸ್ಯರ ಸಂಖ್ಯೆಗಳಿಗುಣವಾಗಿ ಈ ಮೊತ್ತ ಜಮಾವಣೆ ಆಗುತ್ತದೆ. ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಪಡಿತರ ಕಾರ್ಡ್ ಬಳಕೆದಾರರಿಗೂ ಈ ಹಣ ಜಮಾವಣೆಯಾಗುತ್ತದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಯ ಅರ್ಹ ಫಲಾನುಭವಿಗಳಿಗೂ ಈ ಅನ್ನಭಾಗ್ಯ ಯೋಜನೆಯ ಹಣ ಜಮಾವಣೆಯಾಗಿದ್ದು, ನೀವು ನಿಮ್ಮ ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ತೆರಳಿ ಖಾತೆಯನ್ನು ಪರಿಶೀಲಿಸಿಕೊಳ್ಳಿ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

ಇನ್ನು ಅನ್ನಭಾಗ್ಯ ಯೋಜನೆಯ ಹಣದ ಕಂತು ಇದುವರೆಗೂ ಬರದೇ ಇರುವವರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿ ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಹೊಸ ಸೇವಿಂಗ್ಸ್ ಖಾತೆ ತೆರೆಯುವ ಮೂಲಕವು ನೀವು ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾವಣೆ ಮಾಡಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply