7th Pay Commission : ತುಟ್ಟಿಭತ್ಯೆ ಲೆಕ್ಕ ಶೂನ್ಯಕ್ಕೆ ಇಳಿಕೆ.! ಸರಕಾರಿ ನೌಕರರಿಗೆ ಬಿಗ್ ಶಾಕ್.!

7th Pay Commission : ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಹೊಸ ಅಪ್ಡೇಟ್ ಬಂದಿದ್ದು, ನೌಕರರಿಗೆ ಬಿಗ್ ಶಾಕ್ ಕಾದಿದೆ. ಹೌದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಗಣಿತವು 2024 ರಲ್ಲಿ ಬದಲಾಗಲಿದೆ. ಸದ್ಯ ಈಗ ನೌಕರರು ಜನವರಿ ಒಂದರಿಂದ ಅನ್ವಯವಾಗುವಂತೆ ಶೇಕಡ 50%ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ನಿಯಮದ ಪ್ರಕಾರ ನೌಕರರು 50% ರಷ್ಟು ತುಟ್ಟಿ ಭತ್ತೆ ಪಡೆದ ನಂತರ ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುತ್ತದೆ.

ಅದರ ನಂತರ ತುಟ್ಟಿಭತ್ಯೆ ಲೆಕ್ಕಾಚಾರವೂ ಶೂನ್ಯದಿಂದ ಪ್ರಾರಂಭವಾಗುತ್ತದೆ. ಆದರೆ ಕಾರ್ಮಿಕ ಬ್ಯುರೋ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲವಾದ್ದರಿಂದ ತುಟ್ಟಿಭತ್ಯ ಲೆಕ್ಕಚಾರವು ಶೇಕಡಾ 50% ಕ್ಕಿಂತ ಹೆಚ್ಚು ಮುಂದುವರೆಯುತ್ತದೆ. ಈ ಹಿಂದೆ ಅಂದರೆ 2016 ರಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸುವಾಗ ಸರ್ಕಾರ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಿತ್ತು. ಮತ್ತು ನೌಕರರು ಶೇಕಡಾ 50%ರ ಪ್ರಕಾರ ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗುತ್ತಿತ್ತು.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

ತುಟ್ಟಿ ಭತ್ಯೆ ಶೇಕಡಾ ಐವತ್ತರ ನಂತರ ಏಕೆ ಶೂನ್ಯಕ್ಕೆ ಇಳಿಸಲಾಗುತ್ತದೆ. ನೌಕರರ ಹೊಸ ವೇತನ ಶ್ರೇಣಿಯನ್ನು ಜಾರಿಗೆ ತಂದಾಗ ನೌಕರರು ಪಡೆಯುವ ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನಿಯಮದಂತೆ ನೌಕರರು ಪಡೆಯುವ ಶೇಕಡಾ ನೂರಕ್ಕೆ ಡಿಎ ಯನ್ನು ಮೂಲ ವೇತನಕ್ಕೆ ಸೇರಿಸಬೇಕು. ಆದರೆ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ಹಣಕಾಸಿನ ಪರಿಸ್ಥಿತಿ ಅಡ್ಡಿ ಉಂಟು ಮಾಡುತ್ತದೆ. ಈ ತುಟ್ಟಿಭತ್ತೆಯನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಹೆಚ್ಚಿಸಲಾಗುತ್ತದೆ. ಈಗ ಜನವರಿಯಲ್ಲಿ ಒಂದು ಬಾರಿ ಹೆಚ್ಚಿಸಿದ್ದು, ಮುಂದಿನ ಪರಿಷ್ಕರಣೆ ಜುಲೈ 24 ರಿಂದ ಜಾರಿಗೆ ಬರಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply