22K Carat vs 24K Carat Gold Differences / 22 ಕ್ಯಾರೆಟ್ ಹಾಗು 24 ಕ್ಯಾರೆಟ್ ಚಿನ್ನದ ವ್ಯತ್ಯಾಸಗಳೇನು..?

22K Carat vs 24K Carat Gold Differences : ನೀವು ಚಿನ್ನ ಖರೀದಿಸಬೇಕಾ. ಒಂದು ವೇಳೆ ನೀವು ಚಿನ್ನ ಖರೀದಿಸಬೇಕೆಂದಿದ್ದರೆ ಯಾವ ರೀತಿಯ ಚಿನ್ನ ಖರೀದಿಸಬೇಕು 24K ಕ್ಯಾರೆಟ್ ಚಿನ್ನನಾ, 22K ಕ್ಯಾರೆಟ್ ಚಿನ್ನನಾ, 18K ಕ್ಯಾರೆಟ್ ಚಿನ್ನನ ಅಥವಾ 14K ಕ್ಯಾರೆಟ್ ಚಿನ್ನ ಖರೀದಿಸಬೇಕಾ.? ಯಾವ ಕ್ಯಾರೆಟ್ ಚಿನ್ನಒಳ್ಳೆಯದು, ಇಂದಿಗೂ ನಾಳೆಗೂ ಯಾವ ಚಿನ್ನ ನಿಮ್ಮ ಉಪಯೋಗಕ್ಕೆ ಬರುತ್ತೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ ನೋಡಿ.

ಈಗಂತೂ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಒಳ್ಳೆಯ ರೀತಿಯ ಬೆಲೆ ಇದೆ. ಯಾಕಂದರೆ ಸ್ಟಾಕ್ ಮಾರ್ಕೆಟ್ ಬಿದ್ದಾಗಲೆಲ್ಲಾ ಜನರು ಸ್ಟಾಕ್ ಮಾರ್ಕೆಟ್ ನಿಂದ ಹಣವನ್ನು ತಗೆದು ಚಿನ್ನಕ್ಕೆ ಹೂಡಿಕೆ ಮಾಡುತ್ತಾರೆ. ಆ ಟೈಮ್ ನಲ್ಲಿ ಚಿನ್ನದ ಬೆಲೆ ಜಾಸ್ತಿಯಾಗುತ್ತಾ ಇರುತ್ತೆ. ಸಾಮಾನ್ಯವಾಗಿ ಸ್ಟಾಕ್ ಮಾರ್ಕೆಟ್ ಜಾಸ್ತಿಯಿದ್ದಾಗ ಒಳ್ಳೆಯ ಬೂಮ್ ನಲ್ಲಿದ್ದಾಗ ಒಳ್ಳೆಯ ರೀತಿಯ ರಿಟರ್ನ್ಸ್ ಕೊಡುತ್ತಿದ್ದಾಗ ಚಿನ್ನದ ಬೆಲೆ ಕಡಿಮೆ ಇರುತ್ತೆ. ಅವಾಗ ನಾವು ಏನು ಮಾಡಬೇಕು ಅಂದರೆ ಇಂತಹ ಪರಿಸ್ಥಿತಿಯಲ್ಲಿ ನಾವು ಚಿನ್ನವನ್ನ ಖರೀದಿಸಬೇಕಾಗುತ್ತೆ. ಸ್ಪೆಶಲಿ ಸ್ಟಾಕ್ ಮಾರ್ಕೆಟ್ ಚೆನ್ನಾಗಿದ್ದಾಗ ನಾವು ಚಿನ್ನದಲ್ಲಿ ಇನ್ವೆಸ್ಟ್ ಮಾಡುವುದು ಒಳ್ಳೆಯದು. ಅವಾಗ ನೀವು 24 ಕ್ಯಾರೆಟ್ ಚಿನ್ನ ಅಥವಾ 22ಕ್ಯಾರೆಟ್ ಚಿನ್ನ ಇವುಗಳಲ್ಲಿ ಯಾವ ರೀತಿಯ ಚಿನ್ನದ ಮೇಲೆ ಇನ್ವೆಸ್ಟ್ ಮಾಡುವುದು ಒಳ್ಳೆಯದು ಅಂತ ನೋಡುವುದಾದರೆ ಈ ಮಾಹಿತಿಯನ್ನ ಪೂರ್ತಿ ಓದಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Nagamani : ನಾಗಮಣಿ ಕದ್ದ ವ್ಯಕ್ತಿಗೆ ಹೆಣ್ಣು ನಾಗರಹಾವು ಮಾಡಿದ್ದೇನು ಗೊತ್ತಾ.? ಭಯ ಪಡ್ತೀರಾ.!

ಕ್ಯಾರೆಟ್(Carat) ಎಂದರೆ ಏನು.?

ಇದು ಒಂದು ಚಿನ್ನದ ಮಾಪನ, ಚಿನ್ನದ ಗುಣಮಟ್ಟವನ್ನ ಮಾಪನ ಮಾಡಲು ಬಳಸುವ ಪದ ಆಗಿದೆ. ಚಿನ್ನವನ್ನ ಸೊನ್ನೆಯಿಂದ 24 ಕ್ಯಾರೆಟ್ ವರೆಗೆ ಮಾಪನ ಮಾಡಲಾಗುತ್ತದೆ. ಕಾರಣ ಒಂದು ಚಿನ್ನದ ಗುಣಮಟ್ಟವನ್ನ ಪತ್ತೆಹಚ್ಚಲು, ಹೆಚ್ಚಿನ ಪ್ರಮಾಣದ ಚಿನ್ನವು 24 ಕ್ಯಾರೆಟ್ ಚಿನ್ನದಲ್ಲಿ 99.99% ಚಿನ್ನ ಪೂರ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಚಿನ್ನದಲ್ಲಿ ಯಾವುದೇ ರೀತಿಯ ಮಿಶ್ರಣ ಮಾಡಿರುವುದಿಲ್ಲ. ಹಾಗು ಈ ಚಿನ್ನ ಗಟ್ಟಿ ಇರುವುದಿಲ್ಲ, ತುಂಬಾ ಮೃದುವಾಗಿರುತ್ತೆ. ಯಾಕಂದರೆ ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಚಿನ್ನವಿದ್ದು, ಯಾವುದೇ ರೀತಿಯ ಬೆಳ್ಳಿ, ತಾಮ್ರದ ಮಿಶ್ರಣ ಇರುವುದಿಲ್ಲ. ಇಂತಹ 24 ಕ್ಯಾರೆಟ್ ಚಿನ್ನವನ್ನ ದಿನಬಳಕೆ ಆಭರಣವಾಗಿ ಬಳುಸುವುದು ಸೂಕ್ತವಲ್ಲ. ಈ 24 ಕ್ಯಾರೆಟ್ ಚಿನ್ನವನ್ನು ಇನ್ವೆಸ್ಟ್ ಮಾಡಲು ಬಳಸುತ್ತಾರೆ. ಕಾಯಿನ್, ಬಿಸ್ಕತ್ ಈ ರೀತಿಯ ವಿಧಾನಗಳಲ್ಲಿ ಜನಗಳು ಹೂಡಿಕೆ ಮಾಡುವಲ್ಲಿ ಬಳಸುತ್ತಾರೆ.

Whatsapp Group Join
Telegram channel Join

22 ಕ್ಯಾರೆಟ್ ಚಿನ್ನ :-

ಈಗ 22 ಕ್ಯಾರೆಟ್ ಚಿನ್ನದ ಬಗ್ಗೆನೋಡುವುದಾದ್ರೆ. 22 ಕ್ಯಾರೆಟ್ ಚಿನ್ನಯೆಂದು ಹೇಗೆ ಮಾಪನ ಮಾಡುತ್ತಾರೆ ಗೊತ್ತಾ?ಹೇಗೆಂದರೆ ಸೊನ್ನೆಯಿಂದ 24 ಕ್ಯಾರೆಟ್ ಚಿನ್ನ ಎಂದು ಹೇಗೆ ಮಾಪನ ಮಾಡುತ್ತಾರೋ ಹಾಗೆಯೆ ಇದರಲ್ಲಿ 2% ಬೆಳ್ಳಿ ಅಥವಾ ತಾಮ್ರದ ಮಿಶ್ರಣ ಮಾಡಲಾಗುತ್ತದೆ. ಹೀಗೆ ಮಿಶ್ರಣ ಮಾಡಿದ ಚಿನ್ನವನ್ನ22 ಕ್ಯಾರೆಟ್ ಚಿನ್ನ ಎನ್ನಲಾಗುತ್ತದೆ. ಈ 22 ಕ್ಯಾರೆಟ್ ಚಿನ್ನದಲ್ಲಿ 91.6% ರಷ್ಟು ಚಿನ್ನವನ್ನ ಹೊಂದಿರುತ್ತದೆ. ಇಂತಹ ಚಿನ್ನ ಸ್ವಲ್ಪ ಮಟ್ಟಿಗೆ ಗಟ್ಟಿಯಾಗಿರುತ್ತದೆ. ಮತ್ತು ಚಿನ್ನವನ್ನ ದಿನಬಳಿಕೆ ಆಭರಣ ರೂಪದಲ್ಲಿ ಬಳಸಬಹುದು.

18 ಕ್ಯಾರೆಟ್ ಚಿನ್ನ :-

ಇನ್ನು 18 ಕ್ಯಾರೆಟ್ ಚಿನ್ನವನ್ನನೋಡುವುದಾದರೆ. ಸೊನ್ನೆಯಿಂದ 24 ಕ್ಯಾರೆಟ್ ಹೇಗೆ ಮಾಪನದಲ್ಲಿ ಬಳಸಲಾಗುತ್ತದೆಯೋ ಹಾಗೆಯೇ ಇದರಲ್ಲಿ 18 ಭಾಗ ಚಿನ್ನವನ್ನೇ ಹೊಂದಿದ್ದು, ಉಳಿದಿರುವ 6 ಭಾಗ ಬೇರೆ ಬೆಳ್ಳಿ ಅಥವಾ ತಾಮ್ರದ ಮಿಶ್ರಣ ಮಾಡಲಾಗಿರುತ್ತದೆ. ಇಂತಹ ಚಿನ್ನದಲ್ಲಿ ಆಭರಣವನ್ನ ಮಾಡಲಾಗುತ್ತದೆ. ಇಂತಹ ಚಿನ್ನವನ್ನ 18 ಕ್ಯಾರೆಟ್ ಚಿನ್ನ ಎಂದು ಕರೆಯುತ್ತಾರೆ. 24 ಕ್ಯಾರೆಟ್ ಚಿನ್ನ ಹಾಗು 22 ಕ್ಯಾರೆಟ್ ಚಿನ್ನಕ್ಕೆ ಹೋಲಿಸಿದರೆ 18 ಕ್ಯಾರೆಟ್ ಚಿನ್ನ ಹೆಚ್ಚಿನ ಪ್ರಮಾಣದಲ್ಲಿ ಗಟ್ಟಿಯಾಗಿರುತ್ತದೆ. ಯಾಕಂದರೆ ಈ 18 ಕ್ಯಾರೆಟ್ ಚಿನ್ನದಲ್ಲಿ 75% ಚಿನ್ನವಿದ್ದು, ಉಳಿದ ಭಾಗ ಬೆಳ್ಳಿ ಅಥವಾ ತಾಮ್ರದ ಮಿಶ್ರಣವಿರುತ್ತದೆ. ಹೀಗಿರುವಾಗ ಎಂತಹ ಚಿನ್ನವನ್ನ ಖರೀದಿಸಬೇಕು ಎಂದು ನೋಡುವುದಾದರೆ, 24 ಕ್ಯಾರೆಟ್ ಚಿನ್ನ, 22 ಕ್ಯಾರೆಟ್ ಚಿನ್ನ, 18 ಕ್ಯಾರೆಟ್ ಚಿನ್ನ ಇವುಗಳಲ್ಲಿ ನಿಮಗೆ ಅನುಕೂಲವಾದಂತಹ ಚಿನ್ನವನ್ನ ಖರೀದಿಸಿ.

ಇದನ್ನೂ ಕೂಡ ಓದಿ : Gold Rate Today : ಇಳಿಕೆಯತ್ತ ತಿರುಗಿದ ಚಿನ್ನದ ನೋಟ! ಚಿನ್ನ-ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.?

Whatsapp Group Join
Telegram channel Join

24 ಕ್ಯಾರೆಟ್ ಚಿನ್ನ :-

ಒಂದು ವೇಳೆ ನೀವು ಹಣವನ್ನ ಚಿನ್ನದ ರೂಪದಲ್ಲಿ ಹೂಡಿಕೆ ಮಾಡುತ್ತಿದ್ದರೆ, 24 ಕ್ಯಾರೆಟ್ ಚಿನ್ನ ಖರೀದಿಸುವುದು ಉತ್ತಮ. ಕಾಯಿನ್ಸ್, ಬಿಸ್ಕತ್ ರೂಪದಲ್ಲಿ ಹೂಡಿಕೆ ಮಾಡುವುದು ಇನ್ನು ಒಳ್ಳೆಯದು. ಮುಂದೊಂದು ದಿನ ನೀವು 24 ಕ್ಯಾರೆಟ್ ಕಾಯಿನ್ಸ್ ಅಥವಾ ಬಿಸ್ಕತ್ ಅನ್ನ ಪೂರ್ಣ ಪ್ರಮಾಣದಲ್ಲಿ ಕರಗಿಸಿದಾಗ ನಿಮಗೆ 99.99% ನಿಮಗೆ ಚಿನ್ನ ಸಿಗುತ್ತೆ.

ನಿಮಗೆ ಆಭರಣ ಮಾಡಿಸಬೇಕು ಅಂತಿದ್ದರೆ, ನೀವು 22 ಕ್ಯಾರೆಟ್, 20 ಕ್ಯಾರೆಟ್ ಅಥವಾ 18 ಕ್ಯಾರೆಟ್ ಚಿನ್ನವನ್ನ ಆಭರಣದ ರೂಪದಲ್ಲಿ ದಿನಬಳಕೆಗೆ ಬೇಕಾದರೆ ಬಳಸಬಹುದು. ನೀವು ಇವತ್ತು ಒಂದು 10 ರೂಪಾಯಿ ಬಂಡವಾಳ ಹಾಕಿದರೆ, ನಾಳೆ ನಿಮಗೆ ಅದೇ 10 ರೂಪಾಯಿ ಬಂಡವಾಳ ವಾಪಾಸ್ ಬರುವುದಿಲ್ಲ. ಅಂದರೆ ನೀವು 22 ಕ್ಯಾರೆಟ್, 18 ಕ್ಯಾರೆಟ್ ಇಂತಹ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಬಂಡವಾಳ ವಾಪಾಸ್ ಬರುವುದಿಲ್ಲ. ಅದೇ ನೀವು 24 ಕ್ಯಾರೆಟ್ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಮುಂದೊಂದು ದಿನ ನಿಮಗೆ ಒಳ್ಳೆಯ ರೀತಿಯ ರಿಟರ್ನ್ಸ್ ಕೊಡುತ್ತೆ. ನಿಮಗೆ ಈ ಮಾಹಿತಿ ಇಷ್ಟವಾಗಿದ್ರೆ ಶೇರ್ ಮಾಡಿ. ಆಲೋಚಿಸಿ ಚಿನ್ನವನ್ನ ಖರೀದಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply