Nagamani : 100 ವರ್ಷಗಳು ಬದುಕುವ ನಾಗರಹಾವುಗಳು ತಮ್ಮ ವಿಷವನ್ನು ಹೊರಗೆ ಹಾಕದೆ ಯಾರಿಗೂ ಕಚ್ಚದೇ ಇದ್ದರೆ, ಆಗ ಅಂತ ಹಾವುಗಳಿಗೆ ನಾಗಮಣಿ ಉತ್ಪತ್ತಿ ಮಾಡುವ ಶಕ್ತಿ ಬರುತ್ತದೆ. ಇದು ಹೇಗೆ ಸಾಧ್ಯ ಅಂದರೆ ಸ್ವಾತಿ ನಕ್ಷತ್ರದಲ್ಲಿ ಮಳೆ ಬರುವ ಸಮಯದಲ್ಲಿ ಇಂತಹ ನಾಗರಹಾವುಗಳ ಬಾಯಿಯಿಂದ ಬರುವ ನೀರು ಮಳೆ ನೀರಿನೊಂದಿಗೆ ನಾಗಮಣಿಯಾಗಿ ರೂಪಾಂತರಗೊಳ್ಳುತ್ತೆ ಅಂತ ಹೇಳಲಾಗುತ್ತದೆ. 1 ಲಕ್ಷ ಹಾವುಗಳಲ್ಲಿ ಒಂದೇ ಒಂದು ನಾಗರಹಾವಿಗೆ ಮಾತ್ರ ನಾಗಮಣಿಯನ್ನು ಹೊರ ಹಾಕುವ ಶಕ್ತಿಯನ್ನು ಭಗವಂತ ಶಿವ ಪರಮಾತ್ಮ ನೀಡಿರುತ್ತಾರೆ.
ಇದನ್ನೂ ಕೂಡ ಓದಿ : Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?
ಇದೇ ನಾಗಮಣಿ ಹಾಗು ನಾಗರಹಾವು ಒಟ್ಟಿಗೆ ಸೇರಿದರೆ ಈ ಹಾವುಗಳಿಗೆ ಅದ್ಬುತ ಶಕ್ತಿ ದೊರಕುತ್ತದೆ. ಹಲವು ಭಯಂಕರ ಶಕ್ತಿಗಳು ನಾಗರಮಣಿ ಹಾವುಗಳಲ್ಲಿ ಇರುತ್ತದೆ. ತಮ್ಮ ಶರೀರವನ್ನು ದೊಡ್ಡದಾಗಿ ಹಾಗು ಚಿಕ್ಕದಾಗಿ ಮಾಡಿಕೊಳ್ಳುವ ಶಕ್ತಿ ಇಂತ ಹಾವುಗಳಿಗೆ ಇರುತ್ತದೆ. ನಾಗಮಣಿ ಕಗ್ಗತ್ತಲು ರಾತ್ರಿಯಲ್ಲೂ ಪ್ರಕಾಶಮಾನವಾಗಿ ಮಿಂಚುತ್ತಾ ಇರುತ್ತೆ. ಈ ನಾಗಮಣಿಯ ಬೆಳಕನ್ನು ಹಲವಾರು ಕಿಲೋಮೀಟರ್ ದೂರದಿಂದ ನಾವುಗಳು ನೋಡಬಹುದು. ಇಚ್ಚಾದಾರಿ ನಾಗರಹಾವುಗಳು ತಮ್ಮ ವೈರಿಗಳಿಂದ ತಮ್ಮ ನಾಗಮಣಿಯನ್ನು ಮುಚ್ಚಿ ಇಡುತ್ತವೆ. ಒಂದು ವೇಳೆ ಯಾರಾದರೂ ಈ ನಾಗಮಣಿಯನ್ನು ಕದ್ದು ಬಿಟ್ಟರೆ, ಇಚ್ಚಾದಾರಿ ನಾಗರಹಾವುಗಳ ದ್ವೇಷ ಅಂತೂ ಅವರ ಮೇಲೆ ಶುರುವಾಗುತ್ತೆ.
ಆಂಧ್ರ ಪ್ರದೇಶದ ಒಂದು ಹಳ್ಳಿಯಲ್ಲಿ ಶಂಕರ್ ಮತ್ತು ಸೌರವ್ ಎಂಬ ಇಬ್ಬರು ರೈತರ ಕುಟುಂಬಕ್ಕೆ ಸೇರಿದ ಸ್ನೇಹಿತರು. ಒಂದು ದಿನ ತಮ್ಮ ಮೇಕೆಗಳನ್ನು ಹೊಲದಲ್ಲಿ ಮೇಯಿಸುತಿದ್ದರು. ಶಂಕರ್ ಗೆ ಸೇರಿದ ಒಂದು ಮೇಕೆ ಹೊಲದ ಪಕ್ಕದಲ್ಲಿದ್ದ ಕಾಡಿಗೆ ತಪ್ಪಿಸಿಕೊಂಡು ಹೋಗಿತ್ತು. ಆಗ ಶಂಕರ್ ತನ್ನ ಮಿಕ್ಕ ಮೇಕೆಗಳನ್ನು ಮನೆಗೆ ತಗೆದುಕೊಂಡು ಹೋಗು ನಾನು ಕಾಡಿನ ಒಳಗೆ ಹೋಗಿ ಮೇಕೆಯನ್ನ ಹುಡುಕಿಕೊಂಡು ಬರುತ್ತೀನಿ ಎಂದು ಸೌರವ್ ಗೆ ಹೇಳಿ ಕಾಡಿನ ಒಳಗೆ ಮೇಕೆಯನ್ನ ಹುಡುಕಲು ಶಂಕರ್ ಹೋದ. ಕಾಡಿನ ಒಳಗೆ ಮೇಕೆಗಾಗಿ ಹುಡುಕಾಡುತ್ತಿದ್ದಾಗ ಒಂದು ಮರದ ಕೆಳಗೆ ಏನೋ ಒಂದು ಪಳ ಪಳ ಅಂತ ಮಿಂಚುತ್ತಿರುವುದು ಶಂಕರ್ ಗೆ ಕಾಣಿಸಿತು.
ಇದನ್ನೂ ಕೂಡ ಓದಿ : Kiccha Sudeep : ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಗೆ ಏನೆಂದು ಹೇಳಿದ್ರು ಗೊತ್ತಾ.?
ಹತ್ತಿರ ಬಂದು ನೋಡಿದಾಗ ಮರದ ಕೆಳಗೆ ಭೂಮಿಯಿಂದ ಈ ಬೆಳಕು ಬರುತ್ತಿರುವುದನ್ನು ಶಂಕರ್ ನೋಡಿದ. ಕುತೂಹಲ ಗೊಂಡ ಶಂಕರ್ ತಾನು ತಂದಿದ್ದ ಹಾರೆಗೋಲಿನಿಂದ ಬೆಳಕು ಬರುತ್ತಿದ್ದ ಜಾಗದಲ್ಲಿ ಮಣ್ಣು ಅಗೆಯಲು ಶುರುಮಾಡಿದ. ಸ್ವಲ್ಪ ಮಣ್ಣು ಅಗೆದು ನೋಡಿದಾಗ ಶಂಕರ್ ಗೆ ನಾಗಮನಿಯನ್ನು ಕಾಪಾಡುತ್ತಾ ಒಂದು ಇಚ್ಚಾದಾರಿ ನಾಗರಹಾವು ಕೂತಿರುವುದು ಕಾಣಿಸಿತು. ಶಂಕರ್ ನ ನೋಡಿದ ನಾಗರಹಾವು ಆತನಿಗೆ ಕಚ್ಚಲು ಬಂತು, ಆಗ ಶಂಕರ್ ತನ್ನ ಹಾರೆಗೋಲಿನಿಂದ ಹೊಡೆದು ಹೊಡೆದು ಸಾಯಿಸಿದನು. ಅಲ್ಲಿದ್ದ ಮಣಿ ವಜ್ರದ ರೀತಿ ಪಳ ಪಳ ಹೊಳೆಯುತ್ತ ಇತ್ತು. ಆಗ ಮಣಿಯನ್ನು ಕೈನಲ್ಲಿ ಎತ್ತಿ ನೋಡಿದ ಶಂಕರ್ ಗೆ ಇದು ಅಭೂತ ಪೂರ್ವ ಶಕ್ತಿ ಇರುವಂತಹ ನಾಗರಮಣಿಯೇ ಎಂದು ಗೊತ್ತಾಯಿತು.
ಆ ಕೂಡಲೇ ನಾಗಮಣಿಯನ್ನ ತನ್ನ ಜೇಬಿಗೆ ಹಾಕಿಕೊಂಡ ಶಂಕರ್ ನಂತರ ಇಚ್ಚಾದಾರಿ ಗಂಡು ನಾಗರಹಾವು ಬದುಕಿದ್ಯಾ ಅಥವಾ ಸತ್ತುಹೋಗಿದ್ಯಾ ಎಂದು ಪರೀಕ್ಷಿಸಿ ನೋಡಿದ ಆಗ ಆ ಹಾವು ಸತ್ತು ಹೋಗಿತ್ತು. ಕೂಡಲೇ ಆ ಮಣಿನಾ ತನ್ನ ಜೇಬಿನಲ್ಲಿ ಭದ್ರವಾಗಿ ಇಟ್ಟುಕೊಂಡು ಮನೆಗೆ ಓಡಿಕೊಂಡು ಬಂದು ಬಿಟ್ಟ. ಭೇಟೆಗೆ ಹೋಗಿದ್ದ ಹೆಣ್ಣು ನಾಗರಹಾವು ವಾಪಸ್ ತನ್ನ ಗುಡಿಗೆ ಬಂದು ನೋಡಿದಾಗ ತನ್ನ ಪ್ರಿಯತಮ ಇಚ್ಚಾದಾರಿ ಗಂಡು ನಾಗರಹಾವು ಸತ್ತು ಬಿದ್ದಿರುವುದನ್ನು ನೋಡಿ ಹೆಣ್ಣು ಹಾವು ಅಳಲು ಪ್ರಾರಂಭಿಸಿತು. ನಾಗಮನಿಯನ್ನು ಕದ್ದಿರುವುದು ಯಾರು ಎಂದು ಗಂಡು ನಾಗರಹಾವಿನ ಕಣ್ಣಿನಲ್ಲಿ ನೋಡಿ ಹೆಣ್ಣು ನಾಗರಹಾವು ತಿಳಿದುಕೊಂಡಿತು. ಶಂಕರ್ ಒಂದು ದೊಡ್ಡ ತಪ್ಪು ಮಾಡಿಬಿಟ್ಟಿದ್ದ. ನಾಗಮಣಿ ಕದಿಯುವಾಗ ಆ ಹಾವುವನ್ನು ಸಾಯಿಸಿದ ನಂತರ ಆ ಹಾವನ್ನು ಬೆಂಕಿಯಿಟ್ಟು ಸುಡಬೇಕಿತ್ತು. ಆದರೆ ಶಂಕರ್ ಈ ರೀತಿ ಮಾಡಲಿಲ್ಲ. ಇದರಿಂದ ಗಂಡು ಹಾವಿನ ಕಣ್ಣನ್ನು ನೋಡಿ ಹೆಣ್ಣು ಹಾವು ಶಂಕರ್ ಹಾವನ್ನು ಸಾಯಿಸಿ ನಾಗಮನಿಯನ್ನು ತಗೆದುಕೊಂಡು ಹೋಗಿದ್ದಾನೆ ಎಂದು ಅರ್ಥ ಮಾಡಿಕೊಂಡಿತು. ಶಂಕರ್ ಈಗ ಒಂದು ದೊಡ್ಡ ಅಪಾಯದಲ್ಲಿ ಸಿಕ್ಕಿಹಾಕಿಕೊಂಡ.
ಇದನ್ನೂ ಕೂಡ ಓದಿ :ಬಿಲ್ಲ ರಂಗ ಭಾಷಾ ಹೊಂಬಾಳೆ ಜೊತೆಗೆ ಕಿಚ್ಚ ಸುದೀಪ್ ಹೊಸ ಸಿನಿಮಾ । Kiccha Sudeep
ಅಂದಿನಿಂದಲೇ ಹೆಣ್ಣು ಹಾವು ಶಂಕರ್ ನನ್ನೇ ಹುಡುಕಾಟ ಮಾಡಲು ಶುರುಮಾಡಿತು. ಶಂಕರ್ ನಾಗಮಣಿ ಸಹಾಯದಿಂದ ದೊಡ್ಡ ಶ್ರೀಮಂತನಾದ. ಪುರಾಣದ ಪ್ರಕಾರ ನಾಗಮಣಿ ಇಟ್ಟುಕೊಂಡಿರುವ ವ್ಯಕ್ತಿಗೆ ವಿಷದಿಂದ ಅಥವಾ ಕಾಯಿಲೆಗಳಿಂದ ಸಾವು ಬರುವುದಿಲ್ಲ. ನಾಗಮಣಿ ಶಕ್ತಿಯಿಂದ ನಮ್ಮ ಎದುರಾಳಿಗಳನ್ನು ನಿರ್ಮೂಲನೆ ಮಾಡಬಹುದು. ಇದೇ ನಾಗಮಣಿ ಶಕ್ತಿಯಿಂದ ಮೇಕೆ ಮೇಯಿಸುತ್ತಾ ಇದ್ದ ಶಂಕರ್ ಆ ಊರಿಗೆ ದೊಡ್ಡ ಹಣವಂತನಾಗಿ ಬದಲಾದ. ಮತ್ತೊಂದು ಕಡೆ ಸೇಡು ತೀರಿಸಿಕೊಳ್ಳಲು ಶಂಕರ್ ಗಾಗಿ ಆ ಹೆಣ್ಣು ನಾಗರಹಾವು ಕಾಯುತ್ತ ಇತ್ತು. ಶಂಕರ್ ಬಳಿ ನಾಗಮಣಿ ಇರುವರೆಗೂ ತನ್ನಿಂದ ಅವನಿಗೆ ಏನು ಮಾಡಲು ಆಗುವುದಿಲ್ಲ ಎಂದು ಹೆಣ್ಣು ಹಾವಿಗೆ ಚೆನ್ನಾಗಿ ಗೊತ್ತಿತ್ತು. ಮೊದಲು ಶಂಕರ್ ಬಳಿಯಿರುವ ನಾಗಮಣಿನ ಕದಿಯಬೇಕು ಎಂದು ಹೆಣ್ಣು ಹಾವು ಒಂದು ಪ್ಲಾನ್ ಮಾಡಿತು.
ಒಂದು ದಿನ ಶಂಕರ್ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ, ಆಗ ಇಚ್ಚಾದಾರಿ ನಾಗರಹಾವು ಒಬ್ಬಳು ಸುಂದರ ಹುಡುಗಿಯ ರೀತಿಯಲ್ಲಿ ರೂಪ ಬದಲಿಸಿಕೊಂಡು ಶಂಕರ್ ಬರುತ್ತಿದ್ದ ದಾರಿಯಲ್ಲಿ ಅಳುತ್ತಾ ನಿಂತಿತ್ತು. ಹುಡುಗಿ ಒಬ್ಬಳು ರಸ್ತೆಯಲ್ಲಿ ಅಳುತ್ತಾ ನಿಂತಿರುವುದನ್ನು ಗಮನಿಸಿದ ಶಂಕರ್ ಕಾರು ನಿಲ್ಲಿಸಿ ಕಾರಿನಿಂದ ಕೆಳಗೆ ಇಳಿದು ಆ ಹೆಣ್ಣು ಹಾವಿನ ಬಳಿ ಬಂದು. ಎ ಹುಡುಗಿ ಯಾರು ನೀನು ಯಾರು ಇಲ್ಲದ ಈ ಪ್ರದೇಶದಲ್ಲಿ ಯಾಕೆ ಅಳುತ್ತ ನಿಂತಿದ್ದೀಯಾ? ಎಂದು ಶಂಕರ್ ಕೇಳಿದ. ಆಗ ಆ ಹೆಣ್ಣುಹಾವು ನನ್ನ ಹೆಸರು ಗೀತಾ ನಾನು ಪಕ್ಕದ ಊರಿನಲ್ಲಿ ವಾಸ ಮಾಡುತ್ತ ಇದ್ದೀನಿ ನನ್ನ ಗಂಡ ಬೇರೊಂದು ಹುಡುಗಿಯನ್ನ ಮದುವೆ ಮಾಡಿಕೊಂಡು ನನಗೆ ಮೋಸ ಮಾಡಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಅಳುತ್ತ ನಾಗ ಕನ್ಯೆ ಶಂಕರ್ ಗೆ ಹೇಳಿದಳು. ಆಗ ಶಂಕರ್, ಅಳಬೇಡ ನಿನಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿ ತನ್ನ ಕಾರಿನಲ್ಲಿ ಆಕೆಯನ್ನು ಕೂರಿಸಿಕೊಂಡು ಮನೆಗೆ ಕರೆದುಕೊಂಡು ಬಂದ.
ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ
ಆ ಅಮಾಯಕ ಹುಡುಗಿ ತಾನೊಬ್ಬಳು ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರುವ ನಾಗರಹಾವು ಎಂಬುವುದು ಶಂಕರ್ ಗೆ ಗೊತ್ತಿರುವುದಿಲ್ಲ. ಆ ಹುಡುಗಿ ಅಂದಿನಿಂದ ಶಂಕರ್ ಮನೆಯಲ್ಲೇ ಇರುತ್ತಾಳೆ. ಕೆಲವೇ ದಿನಗಳಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರಾದರು, ಸ್ನೇಹ ಪ್ರೀತಿಯಾಗಿ ಬದಲಾಯಿತು. ಶಂಕರ್ ಆ ಹುಡುಗಿಯನ್ನ ತುಂಬ ಗಾಢವಾಗಿ ಪ್ರೀತಿಸಲು ಶುರುಮಾಡಿದ. ಆಕೆಗಾಗಿ ತನ್ನ ಪ್ರಾಣವನ್ನೇ ಕೊಡಲು ಶಂಕರ್ ಸಿದ್ದವಾಗಿದ್ದ. ಸರಿಯಾದ ಸಮಯಕ್ಕಾಗಿ ಕಾಯುತ್ತ ಇದ್ದ ನಾಗಕನ್ನಿಕೆ ಗೀತಾ ಒಂದು ದಿನ ಶಂಕರ್ ಕುತ್ತಿಗೆಗೆ ಹಾಕಿದ್ದ ನಾಗಮಣಿಯನ್ನ ನೋಡಿ ಅದರ ಬಗ್ಗೆ ಏನು ಗೊತ್ತಿಲ್ಲದವಳಂತೆ ಕೇಳುತ್ತಾಳೆ. ಏನು ಇದು ಎಷ್ಟೊಂದು ಹೊಳೆಯುತ್ತ ಇದೆಯಲ್ಲ ಎಂದು ಕೇಳಿದಳು. ಆಗ ಶಂಕರ್ ಇದು ಸಾಮಾನ್ಯವಾಗಿ ಸಮುದ್ರದಲ್ಲಿ ಸಿಗುವ ಮಣಿ ಅಷ್ಟೇ ಎಂದು ಹೇಳಿ ಮಾತುಬದಲಿಸಿದ. ಆ ಮಣಿ ಕೊಡು ನಾನು ಹಾಕಿಕೊಂಡರೆ ಹೇಗೆ ಕಾಣಿಸುತ್ತೇನೆ ನೋಡೋಣ ಎಂದು ನಾಗಮಣಿನ ಕೊಡುವಂತೆ ಗೀತಾ ಕೇಳಿದಳು. ಆಗ ಶಂಕರ್ ಬೇಡ ಬೇಡ ಅದೊಂದು ಮಣಿ ಬಿಟ್ಟು ಬೇರೆ ಏನು ಬೇಕಾದರೂ ಕೇಳು ಕೊಡುತ್ತೇನೆ ಎಂದು ಶಂಕರ್ ಹೇಳಿದ.
ಈ ಮಾತು ಕೇಳಿದ ಮುನಿಸಿ ಕೊಂಡ ಗೀತಾ ನಾನು ನಿಮ್ಮನ್ನು ಮನಸಾರೆ ಪ್ರೀತಿಸುತ್ತ ಇದ್ದೀನಿ ನಿಮಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದಳಿದ್ದೀನಿ, ಆದರೆ ನೀವು ಈ ಸಾಧಾರಣ ಮಣಿನ ಕೊಡೋದಿಲ್ಲ ಅಂತ ಹೇಳುತ್ತಾ ಇದ್ದೀರಾ? ಸರಿ ನಿಮಗೂ ನನಗೂ ಹೊಂದಾಣಿಕೆ ಆಗೋದಿಲ್ಲ ನಿಮ್ಮ ದಾರಿ ನೀವು ನೋಡಿಕೊಳ್ಳಿ, ನನ್ನ ದಾರಿ ನಾನು ನೋಡಿಕೊಳ್ಳುತೇನೆ ಎಂದು ಗೀತಾ ಕೋಪದಿಂದ ಕಿರುಚಿ ಕೂಗಾಡಿಡಳು. ಗೀತಾಳನ್ನು ಸಮಾಧಾನ ಮಡಿದ ಶಂಕರ್ ನಾನು ಮಣಿ ಕೊಡುತ್ತೇನೆ ನೀನು ನನ್ನಿಂದ ಯಾವತ್ತೂ ದೂರ ಆಗಬೇಡ ಎಂದು ಹೇಳಿ. ತನ್ನ ಕುತ್ತಿಗೆಯಲ್ಲಿ ಇದ್ದ ನಾಗಮಣಿ ಸರವನ್ನು ಬಿಚ್ಚಿ ಗೀತಾಳಿಗೆ ಕೊಟ್ಟ. ನಾಗಮಣಿ ತನ್ನ ಕೈಗೆ ಬಂದ ಕೂಡಲೇ ಗೀತಾ ತನ್ನ ನಿಜ ಸ್ವರೂಪವನ್ನ ನಾಗರಹಾವಾಗಿ ಬದಲಾದಳು. ನನ್ನ ಪ್ರೀಯತಮ ಗಂಡು ನಾಗರಹಾವನ್ನು ಸಾಯಿಸಿದ ನಿನಗೆ ನಾನು ಕೊಡುವ ಶಿಕ್ಷೆ ಇದೆ ಎಂದು ಶಂಕರ್ ನ ಕಚ್ಚಿ ಕಚ್ಚಿ ಸಾಯಿಸಿ ತನ್ನ ಗಂಡನನ್ನು ಸಾಯಿಸಿದ ದ್ವೇಷವನ್ನು ಶಂಕರ್ ಮೇಲೆ ಆ ಹೆಣ್ಣು ಹಾವು ತೀರಿಸಿಕೊಂಡಿತು.
ನೋಡಿ ಅಚಾನಕ್ಕಾಗಿ ನಾಗರಮಣಿ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಆಗ ನಾವುಗಳು ದುರಾಸೆಯಿಂದ ನಾಗಮಣಿಯನ್ನು ಕಾಯುತ್ತ ಇರುವ ನಾಗರಹಾವವನ್ನು ಕೊಂದು ನಾಗಮಣಿಯನ್ನು ಎತ್ತಿಕೊಳ್ಳಬಾರದು. ನಾಗಮಣಿ ಯಾವತ್ತೂ ಕೂಡ ಹಾವುಗಳಿಗೆ ಸ್ವಂತ.
ಇದನ್ನೂ ಕೂಡ ಓದಿ : Darshan | ಡಿ ಬಾಸ್ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದು ಹೀಗೆ.!
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..