ಭಾರತದ ಈ ಜನಪ್ರಿಯ ತಿಂಡಿಗಳು ಭಾರತದ್ದೇ ಅಲ್ಲ! ಹಾಗಾದರೆ ಇವು ಎಲ್ಲಿಂದ ಬಂದವು ? 

ಭಾರತದ ಕೆಲವೊಂದು ಜನಪ್ರಿಯ ತಿಂಡಿಗಳು ಭಾರತದ್ದೇ ಅಲ್ಲ ಎಂದು ನಿಮಗೆ ತಿಳಿದಿದೆಯೇ? ಭಾರತೀಯ ಕೆಲವು ಜನಪ್ರಿಯ ಆಹಾರಗಳ ಭಾರತಕ್ಕೆ ಹೇಗೆ ಬಂದವು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸಮೋಸ:

ಭಾರತೀಯ ಮನೆಗಳಲ್ಲಿ, ಹೋಟೆಲ್​​ಗಳಲ್ಲಿ ಸಮೋಸವು ಬಹಳಷ್ಟು ಜನಪ್ರಿಯತೆಯನ್ನು ಹೊಂದಿದೆ. ಆದರೆ ಈ ತಿಂಡಿಯ ಮೂಲ ಪರ್ಷಿಯನ್(ಇಂದಿನ ಇರಾನ್). ಪರ್ಷಿಯನ್ ಪದದ ಸಾಂಬುಸಕ್ ನಿಂದ ಹಿಂದಿಯಲ್ಲಿ ಸಮೋಸಾ ಎಂಬ ಪದ ಹುಟ್ಟಿಕೊಂಡಿದೆ. ಇದು ಪ್ರಾರಂಭದಲ್ಲಿ ಮಾಂಸಹಾರ ತಿಂಡಿಯಾಗಿದ್ದರೂ ಕೂಡ ಭಾರತದಲ್ಲಿ ಇದನ್ನು ಆಲೂಗಡ್ಡೆ, ಚೀಸ್, ಬಟಾಣಿ, ಶುಂಠಿ, ಬೆಳ್ಳುಳ್ಳಿ, ಟೊಮ್ಯಾಟೊ, ಈರುಳ್ಳಿ ಮತ್ತು ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ.

ಗುಲಾಬ್ ಜಾಮೂನ್:

ಯಾವುದೇ ವಿಶೇಷ ದಿನಗಳಲ್ಲಿ ಗುಲಾಬ್ ಜಾಮೂನ್ ಇದ್ದೇ ಇರುತ್ತದೆ. ಆದರೆ ಇದರ ಮೂಲ ಪರ್ಷಿಯಾದಿಂದ ಬಂದಿದೆ. ಗುಲಾಬ್ ಜಾಮೂನ್’ ಎಂಬ ಪದವು ಪರ್ಷಿಯನ್ ಪದಗಳಾದ ‘ಗೋಲ್’ ಮತ್ತು ‘ಅಬ್’ ನಿಂದ ಬಂದಿದೆ, ಇದನ್ನು ‘ಪರಿಮಳಯುಕ್ತ ರೋಸ್ ವಾಟರ್’ ಎಂದು ಅನುವಾದಿಸಲಾಗಿದೆ. ಅಪ್ಪಟ ಗುಲಾಬ್ ಜಾಮೂನ್ ಸಕ್ಕರೆ ಪಾಕಕ್ಕಿಂತ ಹೆಚ್ಚಾಗಿ ಜೇನುತುಪ್ಪದಿಂದ ತಯಾರಿಸಲಾಗುತ್ತದೆ.

ಜಲೇಬಿ:

ಬಂಗಾಳದಲ್ಲಿ ಜಿಲಾಪಿ ಮತ್ತು ಅಸ್ಸಾಂನಲ್ಲಿ ಜೆಲೆಪಿ ಎಂದೂ ಕರೆಯಲ್ಪಡುವ ಈ ಸಕ್ಕರೆ ಪಾಕದಿಂದ ತಯಾರಿಸಲಾಗುವ ತಿಂಡಿಯು ಭಾರತದ ಅತ್ಯಂತ ಜನಪ್ರಿಯ. ಅರೇಬಿಯನ್ ಅಡುಗೆಪುಸ್ತಕ “ಕಿತಾಬ್ ಅಲ್ ತಬಿಖ್” ಮಧ್ಯಪ್ರಾಚ್ಯದಲ್ಲಿ ಝಲಾಬಿಹ್ ಎಂಬ ಇದೇ ರೀತಿಯ ಭಕ್ಷ್ಯವನ್ನು ಉಲ್ಲೇಖಿಸುತ್ತದೆ.

ಚಹಾ:

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ. ಒಂದು ಕಪ್ ಬೆಡ್ ಟೀ ಇಲ್ಲದ್ದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವವರು ಸಾಕಷ್ಟಿದ್ದಾರೆ. ಆದರೆ ಚಹಾ ಹುಟ್ಟಿದ್ದು ಚೀನಾದಲ್ಲಿ ಎಂಬುದು ನಿಮಗೆ ತಿಳಿದಿದೆಯೇ? ಹಾನ್ ರಾಜವಂಶದ ಚೀನೀ ಚಕ್ರವರ್ತಿಯ ಸಮಾಧಿಯಲ್ಲಿ ಅತ್ಯಂತ ಹಳೆಯ ಚಹಾ ಅವಶೇಷಗಳನ್ನು ಪುರಾತತ್ತ್ವಜ್ಞರು ಕಂಡುಹಿಡಿದಿದ್ದಾರೆ. ಟ್ಯಾಂಗ್ ರಾಜವಂಶದ ಆಳ್ವಿಕೆಯಲ್ಲಿ ಚೀನೀ ರಾಜಮನೆತನದವರಲ್ಲಿ ಇದು ಜನಪ್ರಿಯ ಪಾನೀಯವಾಗಿತ್ತು.

ಬಿರಿಯಾನಿ:

ಸ್ವಿಗ್ಗಿ ಮತ್ತು ಜೊಮಾಟೊದ ಇತ್ತೀಚಿನ ಸಂಶೋಧನೆಯ ಪ್ರಕಾರ ಬಿರಿಯಾನಿಯು ಭಾರತೀಯ ಮನೆಗಳಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್​​ ಎಂದು ಪರಿಗಣಿಸಲಾಗಿದೆ. ಆದರೆ ಭಾರತದಲ್ಲಿ ಮೊಘಲರು ಬಿರಿಯಾನಿ ಪರಿಚಯಿಸಿದರು ಎಂದು ಹೇಳಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply