Whitening Tips : ಮುಖ ಬೆಳ್ಳಗಾಗಲು ಮನೆಮದ್ದು / ರಾತ್ರಿ 1 ಬಾರಿ ಹಚ್ಚಿದರೆ ಸಾಕು ನಿಮ್ಮ ಮುಖ ಬೆಳ್ಳಗಾಗುತ್ತದೆ. 100% ಗ್ಯಾರಂಟಿ!

Whitening Tips : ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬರು ಕೂಡ ಅವರು ಸುಂದರವಾಗಿ ಕಾಣಬೇಕು. ಅವರ ಮುಖ ಬೆಳ್ಳಗಾಗಿರಬೇಕು ಮತ್ತು ಮುಖದಲ್ಲಿ ಕಾಂತಿ ಹೆಚ್ಚಾಗಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ರೋಡಿನ ಮೇಲೆ ಇರುವಂತಹ ದೂಳಿನ ಕಣಗಳು, ಬಿಸಿಲು, ತೇವಾಂಶದ ಕಾರಣದಿಂದ ನಮ್ಮ ತ್ವಚೆ ಬಹಳ ಬೇಗನೆ ಹಾಳಾಗುತ್ತದೆ.

ಅದರಲ್ಲೂ ಮುಖದ ಕಾಂತಿ ಹೆಚ್ಚಾಗಲು ನಾವು ಏನು ಮಾಡಬೇಕು ಅನ್ನೋದರ ಬಗ್ಗೆ ಸಾಕಷ್ಟು ಚಿಂತೆಯನ್ನು ಮಾಡುತ್ತಿರುತ್ತೇವೆ ಮತ್ತು ಯಾವುದೇ ರೀತಿಯಾದ ರಾಸಾಯನಿಕ ವಸ್ತುಗಳನ್ನು ಬಳಸದೆ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು, ನಾವು ಯಾವೆಲ್ಲ ರೀತಿಯಾದಂತಹ ಮನೆಮದ್ದುಗಳನ್ನು ಉಪಯೋಗ ಮಾಡಿಕೊಳ್ಳಬಹುದು ಅನ್ನವುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ದಯವಿಟ್ಟು ಇದನ್ನು ನೋಡಿ ಮತ್ತು ಆರೋಗ್ಯ ಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ನೀವು ನಮ್ಮ ವೆಬ್ ಸೈಟ್ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಇದನ್ನೂ ಕೂಡ ಓದಿ : Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

ಕಡಲೆ ಹಿಟ್ಟು, ಅರಿಶಿನ ಹಾಗೂ ಹಾಲನ್ನು ತೆಗೆದುಕೊಂಡು ಮಿಕ್ಸ್ ಮಾಡಬೇಕು. ಈ ಹಾಲು ತೆಗೆದುಕೊಳ್ಳುವಾಗ ಹಾಲು ಬಿಸಿಯಾಗಿರಬಾರದು. ಹಾಲು ಹಸಿಯಾಗಿರಬೇಕು. ಇದನ್ನು ಪೇಸ್ಟ್‌ನಂತೆ ಕಲಸಬೇಕು ಮತ್ತು ಸ್ವಲ್ಪ ದಪ್ಪ ಆಗಿದ್ದರು ಕೂಡ ಒಳ್ಳೆಯದು. ಇದನ್ನು ಮುಖಕ್ಕೆ ಹಚ್ಚಿಕೊಂಡು 10 ರಿಂದ ಹದಿನೈದು ನಿಮಿಷಗಳ ಕಾಲ ಇಡಬೇಕು. ಅಥವಾ ಇದು ನಿಮ್ಮ ಮುಖದಲ್ಲಿ ಒಣಗುವ ತನಕ ಬಿಟ್ಟು, ನಂತರ ಶುದ್ಧವಾದ ನೀರಿನಿಂದ ನಿಮ್ಮ ಮುಖವನ್ನು ತೊಳೆಯಬೇಕು.

ಹೀಗೆ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಿಧಾನವಾಗಿ ನಿಮ್ಮ ಮುಖದ ಮೇಲೆ ತ್ವಚೆಯ ಬದಲಾವಣೆಯನ್ನು ನೀವೇ ಕಾಣಬಹುದು. ಯಾವುದೇ ರೀತಿಯಾದ ರಾಸಾಯನಿಕ ಬಳಸದೇ ಮಾಡುವ ನ್ಯಾಚುರಲ್ ವಿಧಾನ ಇದಾಗಿರುವುದರಿಂದ ಇದನ್ನು ನೀವು ಟ್ರೈ ಮಾಡಬಹುದು. ಇದರಿಂದ ನಿಮಗೆ ಯಾವುದೇ ರೀತಿಯಾದ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ.

ಇನ್ನು ನಿಮ್ಮ ಮುಖದ ಮೇಲೆ ಏನಾದರೂ ಮೊಡವೆಗಳು ಇದ್ದರೆ ಅದಕ್ಕೆ ನೀವು ಕಡಲೆ ಹಿಟ್ಟು, ಅರಿಶಿನ ಹಾಗೂ ಶ್ರೀಗಂಧದ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರು ಅಥವಾ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗೆ ಇರುವಂತಹ ನೀರಿನಲ್ಲಿ ತೊಳೆಯುವುದರಿಂದ ನಿಮ್ಮ ಮುಖ ಬೆಳ್ಳಗಾಗುತ್ತದೆ ಮತ್ತು ಕಾಂತಿ ಕೂಡ ಹೆಚ್ಚಾಗುತ್ತದೆ.

ಇದನ್ನೂ ಕೂಡ ಓದಿ : ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada

ಇನ್ನು ಇನ್ನೊಂದು ಮನೆಮದ್ದು ಏನಂದ್ರೆ, ಸ್ವಲ್ಪ ಎಳ್ಳನ್ನು ತೆಗೆದುಕೊಂಡು, ಅದನ್ನು ಹಾಲು ಅಥವಾ ನೀರಿನಲ್ಲಿ ರಾತ್ರಿ ಪೂರ್ತಿ ಅದನ್ನು ನೆನೆಸಿಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಮಿಕ್ಸಿ ಮಾಡಿಕೊಂಡು ಅದನ್ನು ನಿಮ್ಮ ದೇಹಕ್ಕೆ ಅಥವಾ ಮುಖಕ್ಕೆ ಹಚ್ಚುವುದರಿಂದ, ನಿಮ್ಮ ಚರ್ಮವು ಹೊಳೆಯುತ್ತದೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ಲಕ್ಷಣ ಕೂಡ ನೀಡುತ್ತದೆ.

ಇನ್ನು ನಿಮ್ಮ ಮುಖದ ಮೇಲೆ ತುಂಬಾನೇ ಒಯ್ಲಿ ಸ್ಕಿನ್ ಆಗಿದ್ದರೆ, ಅದಕ್ಕಾಗಿ ನೀವು ಲೋಳೆಸರವನ್ನು ಉಪಯೋಗ ಮಾಡಬಹುದು. ಲೋಳೆಸರವು ನಮ್ಮ ತ್ವಚೆಗೆ ತುಂಬಾನೇ ಉತ್ತಮವಾದದ್ದು. ಅದಕ್ಕಾಗಿ ನೀವು ಫ್ರೆಶ್ ಆಗಿರುವಂತಹ ಲೋಳೆಸರವನ್ನು ತೆಗೆದುಕೊಂಡು, ಅದರಲ್ಲಿ ಇರುವಂತಹ ಜೆಲ್ ಅನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಂಡು ನಂತರ 15 ನಿಮಿಷ ಆದ ನಂತರ ನೀವು ಅದನ್ನು ತೊಳೆಯುವುದರಿಂದ ಮುಖದಲ್ಲಿರುವಂತಹ. ಒಯ್ಲಿ ಸ್ಕಿನ್ ಕೂಡ ಹೋಗುತ್ತದೆ. ಮತ್ತು ನಿಮ್ಮ ಮುಖದ ಕಾಂತಿ ಕೂಡ ಹೆಚ್ಚಾಗಲು ನೆರವಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply