Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

Itching : ನಮಸ್ಕಾರ ಸ್ನೇಹಿತರೇ, ತುರಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಅದರಲ್ಲೂ ಗುಪ್ತಾಂಗದ ಜಾಗದಲ್ಲಿ ತುರಿಕೆ ಏಕೆ ಆಗುತ್ತದೆ.? ಅದಕ್ಕೆ ಕಾರಣವೇನು ಹಾಗು ಅದಕ್ಕೆ ಪರಿಹಾರವೇನು? ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ.

ಒಂದಿಷ್ಟು ಗಾಳಿಯಾಡದಂತ ಜಾಗ ಅಂದ್ರೆ ಅದು ಗುಪ್ತಾಂಗದ ಜಾಗ. ಇಲ್ಲಿ ಗಾಳಿಯಾಡದಿದ್ದರೆ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಗುಪ್ತಾಂಗದ ತುರಿಕೆಯೂ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕಿದರೆ, ಗಂಡಸರಲ್ಲಿ ಇನ್ನೊಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಕೆಲವೊಂದು ಸಲ ಗಂಡಸರಿಗೆ ಯಾಕಾದರೂ ಈ ಕಷ್ಣಗಳು ಇವೆ ಎನಿಸುವಂತೆ ತುರಿಕೆ ಕಾಡುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಇದು ಮುಜುಗರ ಕೂಡ ಉಂಟು ಮಾಡುತ್ತದೆ. ಈ ತುರಿಕೆ ಉಂಟು ಮಾಡಲು ಕಾರಣವೇನು? ಅದರ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾವು ಯಾವುದೇ ಒಂದು ಕೆಲಸವನ್ನು ಮಾಡಿದ ನಂತರ ಅಥವಾ ಜಿಮ್, ವ್ಯಾಯಾಮ ಮಾಡಿದ ನಂತರ, ತ್ವಚೆಯ ರಂಧ್ರಗಳು ತೆರೆದು ಬೆವರನ್ನು ಹೊರ ಹಾಕಲು ನೋಡುತ್ತವೆ. ಈ ಸಂದರ್ಭದಲ್ಲಿ ನೀವು ಬಿಗಿಯಾದ ಅಂಡರ್ ವೇರ್ ಹಾಕಿದ್ದಲ್ಲಿ ಅಲ್ಲಿ ಗಾಳಿ ಆಡುವುದಿಲ್ಲ.

ಈ ಜಾಗದಲ್ಲಿ ಬೆವರು ಹೆಚ್ಚಿದ್ದಾಗ ಫಂಗಸ್ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಆಗುತ್ತದೆ. ನಾವು ವ್ಯಾಯಾಮ ಮಾಡಿದ ಮೇಲೆ ಅಥವಾ ಶ್ರಮದ ಎಲ್ಲ ಕೆಲಸ ಮಾಡಿದ ನಂತರ ನಮ್ಮ ದೇಹವು ನೈಸರ್ಗಿಕ ವಾಗಿ ತಾನೇ ತ್ವಚೆ ರಂಧ್ರಗಳ ಮೂಲಕ ಬೆವರನ್ನು ಹೊರ ಹಾಕುತ್ತದೆ. ಈ ಸಂದರ್ಭದಲ್ಲಿ ಅಲ್ಲಿ ಗಾಳಿಯಾಡದೇ ಇದ್ದರೆ, ಅಲ್ಲಿ ಕೀಟಾಣುಗಳು ಆಗಿ ನಮಗೆ ತುರಿಕೆ ಹೆಚ್ಚಾಗುತ್ತದೆ.

ಇದನ್ನೂ ಕೂಡ ಓದಿ : ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ

ಒಂದು ವೇಳೆ ನಿಮಗೆ ಸಕ್ಕರೆ ಕಾಯಿಲೆಯಿದ್ದರಂತೂ ಇದು ನಿಮಗೆ ಇನ್ನಷ್ಟು ಕಷ್ಟ ಉಂಟು ಮಾಡುತ್ತದೆ. ಏಕೆಂದರೆ ನಮ್ಮ ಬೆವರಿನಲ್ಲಿ ಹೆಚ್ಚು ಪ್ರಮಾಣದ ಸಕ್ಕರೆಗಳು ಇದ್ದು ಇದು ಫಂಗಸ್ ಗೆ ಒಳ್ಳೆಯ ಆಹಾರ ಆಗುತ್ತದೆ. ಮತ್ತು ನಿಮ್ಮ ಪ್ರತಿ ರಕ್ಷಣಾ ವ್ಯವಸ್ಥೆಯು ಇತರ ಸಮಯಕ್ಕಿಂತ ಕಡಿಮೆ ಬಲ ಹೊಂದಿರುವ ಕಾರಣ ಸಾಮಾನ್ಯ ತ್ವಚೆಯ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಈಗ ಮುಖ್ಯವಾದ ವಿಷಯ ಕ್ಕೆ ಬರೋಣ.

ಈಗ ಗುಪ್ತಾಂಗದ ತುರಿಕೆಯನ್ನು ನಿವಾರಣೆ ಮಾಡುವುದು ಹೇಗೆ?

ಕೆಲಸ ಮಾಡಿ ಮನೆಗೆ ಬಂದ ನಂತರ ಸ್ನಾನ ಮಾಡಿ ಅದನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಬೇಕು. ಹಾಗು ನೀವು ಲೂಸ್ ಆಗಿರುವ ಕಾಟನ್ ಒಳ ಉಡುಪುಗಳನ್ನು ಧರಿಸಬೇಕು. ಕಾಟನ್ ಹೊರತು ಬೇರೆ ವಸ್ತುಗಳನ್ನು ಧರಿಸುವುದನ್ನು ನೀವು ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು. ಹಾಗು ಜಿಮ್ ಮತ್ತು ವ್ಯಾಯಾಮ ಮಾಡಿದ ನಂತರ ಕಡ್ಡಾಯವಾಗಿ ನಿಮ್ಮ ಒಳ ಉಡುಪುಗಳನ್ನು ತಪ್ಪದೇ ಬದಲಾಯಿಸಬೇಕು ಹಾಗು ತೇವಾಂಶವನ್ನು ಹೀರಿಕೊಳ್ಳುವ ಪೌಡರ್ ಅನ್ನು ಬಳಸಬಹುದು.

Whatsapp Group Join
Telegram channel Join

ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ಇದು ಮೆಡಿಕಲ್ ಸ್ಟೋರ್ ಗಳಲ್ಲಿ ಮತ್ತು ಜನರಲ್ ಸ್ಟೋರ್ ಗಳಲ್ಲಿ ಸಿಗುತ್ತದೆ ಕೇಳಿ ನೋಡಿ. ಮತ್ತು ಅದನ್ನು ಸೋಪಿನಿಂದ ತೊಳೆದ ನಂತರ ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಅಂಡರ್‌ವೇರ್ ‌ನಲ್ಲಿ ಯಾವುದೇ ರೀತಿಯಾಗಿ ಸೋಪಿನ ಅಂಶ ಇರದಂತೆ ನೋಡಿಕೊಳ್ಳಬೇಕು ಮತ್ತು ಮೈಗೆ ಹಚ್ಚಿಕೊಳ್ಳುವ ಸೋಂಕು ಕೂಡ ಆದಷ್ಟು ಸೌಮ್ಯವಾದ ಹೆಚ್ಚು ಸುಗಂಧಗಳಿಲ್ಲದ ಸೋಪುಗಳನ್ನು ಬಳಸುವುದು ಒಳ್ಳೆಯದು. ಸಾಧ್ಯವಾದರೆ ವಾರದಲ್ಲಿ ಒಂದೆರಡು ಸಲ ಎಣ್ಣೆಯ ಸ್ಥಾನವನ್ನು ಮಾಡಿ ಮತ್ತು ಗುಪ್ತಾಂಗದ ಕಡೆ ಹಾಗು ಕೃಷ್ಣ ಗಳ ಕೆರೆತ ಹೆಚ್ಚಾಗಿದ್ದರೆ ಒಂದು ವಾರಗಳ ಕಾಲ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು 15 ನಿಮಿಷಗಳ ನಂತರ ಸ್ನಾನ ವನ್ನು ಮಾಡಿ. ಗುಪ್ತಾಂಗದ ತುರಿಕೆ ಆದಷ್ಟು ಬೇಗನೇ ಕಡಿಮೆಯಾಗುತ್ತದೆ.

ಒಂದು ವೇಳೆ ನೀವು ಹಲವು ವಾರಗಳ ಆದರೂ ಕೂಡ ಏನು ಬದಲಾವಣೆ ಕಾಣಲಿಲ್ಲ ಎಂದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಈ ಲೇಖನದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ ಹಾಗು ಶೇರ್ ಮಾಡಿ. ಇದೇ ರೀತಿ ಇನ್ನಷ್ಟು ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳಲು ವಾಟ್ಸ್ ಅಪ್ ಗ್ರೂಪ್ ಜಾಯಿನ್ ಆಗಿ.

Leave a Reply