ಗರಂ ಆದ ಭೂಮಿ ಶೆಟ್ಟಿ ಹೇಳಿದ್ದೇನು? ಕಷ್ಟ ಹೇಳಿಕೊಂಡಿದ್ದು ಹೀಗೆ | Bhoomi Shetty

ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ಆಗಿರುವ ಭೂಮಿ ಶೆಟ್ಟಿ(Bhoomi shetty) ಕೂಡ ಬೈಕರ್ ಆಗಿದ್ದು ಯಾವ ರೀತಿಯ ಚಾಲೆಂಜ್‌ಗಳನ್ನು ಎದುರಿಸುತ್ತಾರೆಂದು ಹಂಚಿಕೊಂಡಿದ್ದಾರೆ.

ನನ್ನ ಹುಟ್ಟೂರಿಗೆ ಬೈಕ್‌ನಲ್ಲಿ ಪ್ರಯಾಣ ಮಾಡುವಾಗ ಒಂದು ಮಾರ್ಗದಲ್ಲಿ ಎಳ್ನೀರು ಕುಡಿಯಲು ನಿಲ್ಲಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಗೂಡ್ಸ್‌ ಗಾಡಿ ಡ್ರೈವರ್‌ ನಾನು ಬೈಕ್ ಸ್ಟಾರ್ಟ್‌ ಮಾಡಲು ಕಾಯುತ್ತಿದ್ದರು. ನಾನು ಮುಂದೆ ಸಾಗಿದ ನಂತರ ನನ್ನನ್ನು ಓವರ್ ಟೇಕ್ ಮಾಡಲು ಆರಂಭಿಸಿದ್ದರು. ಬೈಕ್‌ನಿಂದ ನನ್ನನ್ನು ಬೀಳಿಸಲು ಏನ್ ಏನೋ ಪ್ರಯತ್ನ ಪಟ್ಟರು ಆದರೆ ನಾನು ಒಂದು ನಿಮಿಷ ಪಕ್ಕದಲ್ಲಿ ಬೈಕ್ ನಿಲ್ಲಿಸಿಕೊಂಡು ಆನಂತರ ಜರ್ನಿ ಶುರು ಮಾಡಿದೆ’ ಎಂದು ಭೂಮಿ ಶೆಟ್ಟಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಇದನ್ನೂ ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಮಹಿಳಾ ಬೈಕರ್ ಅಗಿ ನಾನು ಕೂಡ ಕೆಲವೊಂದು ಚಾಲೆಂಜ್‌ಗಳನ್ನು ಎದುರಿಸಿರುವೆ. ಹೈವೇಗಳಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಘಟನೆಗಳು ನಡೆದಾಗ ಏನು ಮಾಡಬೇಕು ಗೊತ್ತಾಗುವುದಿಲ್ಲ. ಒಬ್ಬರೇ ಇದ್ದಾಗ ಈ ಸಂದರ್ಭವನ್ನು ಮ್ಯಾನೇಜ್ ಮಾಡುವುದು ತುಂಬಾನೇ ಕಷ್ಟವಾಗುತ್ತದೆ. ಹೀಗಾಗಿ ಅನೇಕ ಬೈಕರ್‌ಗಳು ತಮ್ಮ ಹೆಲ್ಮೆಟ್‌ಗಳಿಗೆ Go Pro ಹಾಕಿಸಿಕೊಂಡಿರುತ್ತಾರೆ. ಈ ರೀತಿ ಏನೇ ಘಟನೆ ನಡೆದರೂ ಅದರಲ್ಲಿ ರೆಕಾರ್ಡ್‌ ಆಗುತ್ತದೆ ಎಂದು. ಇದು ಸೋಷಿಯಲ್ ಮೀಡಿಯಾ ಕಾಲ ನೆಟ್‌ವರ್ಕ್‌ ಇದ್ದರೆ ಲೈವ್‌ ಮಾಡುವ ಮೂಲಕ ಘಟನೆಯನ್ನು ತಿಳಿಸಬಹುದು’ ಎಂದು ಭೂಮಿ ಹೇಳಿದ್ದಾರೆ.

ಬೈಕ್ ರೈಡ್ ಮಾಡುವಾಗ ನಾವು ಬಾತ್‌ರೂಮ್‌ನ ಹುಡುಕುವುದೇ ದೊಡ್ಡ ಸಮಸ್ಯೆ ಆಗುತ್ತದೆ. ಜರ್ನಿ ಅರಂಭಿಸುವ ಮುನ್ನ ನಾವು ನಮ್ಮ ಜರ್ನಿ ಹೇಗಿದೆ? ಎಲ್ಲಿ ಸ್ಟಾಪ್ ಕೊಡಬೇಕು ಎಲ್ಲಿ ಊಟ ಸಿಗುತ್ತದೆ ಎಲ್ಲಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತೀವಿ. ಲಾಂಗ್‌ ಜರ್ನಿ ಮಾಡುವಾಗ ಮಹಿಳೆಯರಿಗೆ ತುಂಬಾ ಚಾಲೆಂಜ್‌ಗಳಿರುತ್ತದೆ. ಮಹಿಳೆಯರು ಬೈಕ್ ಖರೀದಿ ಮಾಡುತ್ತಾರೆ ಅಂದ್ರೆ ಜನರು ನೋಡುವ ರೀತಿ ಬೇರೆ ಆಗಿರುತ್ತದೆ. ಕೆಲವರು ಮಾತ್ರ ಸರಿ ಮಾಡು ಓಕೆ ಹುಷಾರು ಎಂದು ಧೈರ್ಯ ಕೊಡುತ್ತಾರೆ ಆದರೆ ಎಲ್ಲರೂ ಅಷ್ಟೇ ಪಾಸಿಟಿವ್ ಆಗಿರುವುದಿಲ್ಲ. ಸೇಫ್ಟ್‌ ತುಂಬಾ ಮುಖ್ಯವಾಗುತ್ತದೆ. ಮುನ್ನೆಚ್ಚರಿಗೆ ಕ್ರಮಗಳನ್ನು ತೆಗೆದುಕೊಂಡು ಪ್ರಯಾಣ ಮಾಡುವುದು. ಆರಂಭದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಆದರೆ ಜರ್ನಿ ಸಾಗುತ್ತಿದ್ದಂತೆ ಕಲಿಯುತ್ತಾರೆ’ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಕೂಡ ಓದಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply