Katera Update : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

Katera Update: ದರ್ಶನ್ ಅವರ ಕ್ರಾಂತಿ ಸಿನಿಮಾ ರಾಜ್ಯದ ಒಂದಿಷ್ಟು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಾ ಇದೆ. ಒಳ್ಳೆಯ ರೀತಿಯಲ್ಲೇ ಕ್ರಾಂತಿ ಸಿನಿಮಾ ಪ್ರದರ್ಶನ ಕಂಡಿದೆ ಹಾಗೂ ಕಾಣುತ್ತಲಿದೆ. ಡಿ ಬಾಸ್ ದರ್ಶನ್ ಅವರ ಕಾಟೇರ ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತ ಇದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನ ಕಾಟೇರ ಟೈಟಲ್ ರಿವೀಲ್ ಆಯಿತು. ಅಲ್ಲಿಯವರೆಗೂ ಡಿ 56 ಎನ್ನುವ ಹೆಸರಿನಲ್ಲಿ ಅಪ್ ಡೇಟ್ಸ್ ಹೊರ ಬೀಳುತ್ತಾ ಇತ್ತು. ಆದರೆ ಇದಿಕ್ಕೆ ಅಧಿಕೃತವಾದಂತಹ ಮುದ್ರೆ ಬಿದಿದ್ದು ಡಿ ಬಾಸ್ ಅವರ ಹುಟ್ಟುಹಬ್ಬದ ದಿನ.

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ

WhatsApp Group Join Now
Telegram Group Join Now

ಅಂದು ಕಾಟೇರ ಎನ್ನುವ ಹೆಸರು ರಿವೀಲ್ ಆಯಿತು. ಕಾಟೇರ ಚಿತ್ರದ ನಿರ್ಮಾಪಕರು ರಾಕ್ ಲೈನ್ ವೆಂಕಟೇಶ್ ಆಗಿದ್ದು, ತರುಣ್ ಸುಧೀರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಹೀಗಿರಬೇಕಾದರೆ ಒಂದು ಮಾಹಿತಿಯ ಪ್ರಕಾರ 3ನೇ ಹಂತದ ಚಿತ್ರೀಕರಣ ಮುಗಿದಿದೆ ಅಂತ ಹೇಳಲಾಗುತ್ತ ಇದೆ. ಹಾಗೆ ಈ ಚಿತ್ರದಲ್ಲಿ 2 ಅತ್ಯದ್ಭುತ ಆದಂತಹ ಮೈ ರೋಮಾಂಚನಗೊಳಿಸುವಂತಹ ಸಾಹಸಮಯ ದೃಶ್ಯಗಳಿರುತ್ತೆ ಅಂತ ಹೇಳಲಾಗಿದೆ. ಅಷ್ಟೇ ಅಲ್ಲದೆ ಹೊಡಿಬಡಿ ದೃಶ್ಯಗಳಿಗೆ ಅತ್ಯಾಧುನಿಕ 3ಡಿ ಕ್ಯಾಮರಾ ಮತ್ತು ರೋಬಟ್ ಕ್ಯಾಮರ ಗಳನ್ನ ಬಳಸಲಾಗುತ್ತೆ ಎನ್ನುವಂತಹ ಒಂದು ಮಾಹಿತಿ ಕೂಡ ಇದೆ. ಹಾಗಾದರೆ 2 ಫೈಟಿಂಗ್ ದೃಶ್ಯಾವಳಿಗಳು ಯಾವ ಮಟ್ಟದಲ್ಲಿ ಮೂಡಿ ಬರಬಹುದು. ಇದಕ್ಕೆ ಸಿನಿಮಾ ರಿಲೀಸ್ ಆದ ಬಳಿಕವೇ ಉತ್ತರ ಸಿಗಲಿದೆ. ಹಾಗೆಯೇ ಮನಸ್ಸಿಗೆ ರೋಮಾಂಚನವಾಗಲಿದೆ.

ಮತ್ತೊಂದು ಮಾಹಿತಿ ಏನೆಂದರೆ, ಕಾಟೇರ ಬಳಗಕ್ಕೆ ತಮಿಳಿನ ಖ್ಯಾತ ನಟರಾದಂತಹ ಸೇತುಪತಿ ಅವರು ಸೇರಲಿದ್ದಾರೆ ಎನ್ನುವ ಮಾಹಿತಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇದೆ. ಇದು ಒಂದು ರೀತಿಯಲ್ಲಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ತಮಿಳಿನ ಖ್ಯಾತ ನಟರು ಸಹ ನಮ್ಮ ಕನ್ನಡ ಚಿತ್ರರಂಗಕ್ಕೆ ಬರುವಂತಾಗಿದೆ. ಇದರಲ್ಲೇ ತಿಳಿಯುತ್ತೆ ನಮ್ಮ ಕನ್ನಡ ಚಿತ್ರರಂಗ ಎಷ್ಟು ಎತ್ತರಕ್ಕೆ ಬೆಳೆದಿದೆ ಹಾಗೂ ಬೆಳೆಯುತ್ತಾ ಇದೆ ಎಂದು.

WhatsApp Group Join Now
Telegram Group Join Now

ಬಹಳ ಇಂಟೆರೆಸ್ಟಿಂಗ್ ನ್ಯೂಸ್ : ಕಬ್ಜ ಸಿನಿಮಾ ಟ್ರೈಲರ್ ನೋಡಿ ದರ್ಶನ್ ಅವರ ಪ್ರತಿಕ್ರಿಯೆ ಏನು.? । Darshan Thoogudeepa

ಸೇತುಪತಿ ಅವರು ಕಾಟೇರ ಸಿನಿಮಾದಲ್ಲಿ ನಟಿಸುವ ಬಗ್ಗೆ ಚಿತ್ರ ತಂಡವೇ ರಿವೀಲ್ ಮಾಡುವ ಮಾಹಿತಿ ಕೇಳಿಬರುತ್ತಿದೆ. ಇನ್ನೂ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾನೋ ಅಥವಾ ಕನ್ನಡದ ಸಿನಿಮಾನೋ ಯಾವುದಕ್ಕೂ ಕೂಡ ಉತ್ತರ ಇಲ್ಲ. ಈ ಸಿನಿಮಾದ ಮೋಶನ್ ಪೋಸ್ಟರ್ ನೋಡುತ್ತಿದ್ದರೆ, ಇದೊಂದು ಪಕ್ಕ ಮಾಸ್ ರಗಡ್ ಸಿನಿಮಾ ಅನ್ನೋದರಲ್ಲಿ ಸಂಶಯವೇ ಇಲ್ಲಾ. ಈಗಾಗಲೇ ಒಂದಿಷ್ಟು ಕುತೂಹಲವನ್ನ ಈ ಚಿತ್ರದ ಮೋಶನ್ ಪೋಸ್ಟರ್ ಅಂದರೆ ದರ್ಶನ್ ಅವರ ಹುಟ್ಟುಹಬ್ಬದಂದು ರಿವೀಲ್ ಆದಂತಹ ಟೈಟಲ್ ನಲ್ಲಿ ಬರುವಂತಹ ಮೋಶನ್ ಪೋಸ್ಟರ್ ನಲ್ಲಿ ಪೇಕ್ಷಕರಿಗೆ ಕುತೂಹಲದ ಕಿಚ್ಚನ್ನ ಹಚ್ಚಿದ್ದಾರೆ ನಿರ್ದೇಶಕರಾದಂತಹ ತರುಣ್ ಸುಧೀರ್ ಅವರು. ಆದಷ್ಟು ಬೇಗ ಚಿತ್ರೀಕರಣವನ್ನ ಮುಗಿಸಿ ತೆರೆಗೆ ಅಪ್ಪಳಿಸಲಿ ಕಾಟೇರ.

WhatsApp Group Join Now
Telegram Group Join Now

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೂ ಸಹ ಹೊಸ ಇತಿಹಾಸವನ್ನ ಕಾಟೇರ ನಿರ್ಮಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ. ಕಾಟೇರ ಸಿನಿಮಾ ಹೊಸ ಇತಿಹಾಸವನ್ನ ನಿರ್ಮಿಸಲಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply