Vijaya Raghavendra : ಪತ್ನಿ ಸ್ಪಂದನ ನಿಧಾನವಾಗಿ ಎರಡು ತಿಂಗಳ ಬಳಿಕ ಮಗನಿಗಾಗಿ ಉರುಳಿ ಸೇವೆ ಮಾಡಿದ್ರಾ ವಿಜಯ ರಾಘವೇಂದ್ರ.!

Vijaya Raghavendra : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿ ಸರಿಸುಮಾರು ಎರಡು ತಿಂಗಳುಗಳೇ ಕಳೆದುಹೋದರೂ ಕೂಡ ನಟ ವಿಜಯ ರಾಘವೇಂದ್ರ ದುಃಖದಿಂದ ಹೊರ ಬಂದಿಲ್ಲ.ಸ್ಪಂದನ ನೆನಪುಗಳು ರಾಘುವನ್ನು ಬಿಟ್ಟುಬಿಡದೇ ಕಾಡುತ್ತಿದೆ.ಸ್ಪಂದನ ಅಕಾಲಿಕ ನಿಧಾನ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನ ಬಾರದ ಲೋಕಕ್ಕೆ ತೆರಳಿದ್ದಾರೆ.

ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

ಅವರ ನೆನಪುಗಳೊಂದಿಗೆ ವಿಜಯ ರಾಘವೇಂದ್ರ ಮುಂದಿನ ಜೀವನವನ್ನು ಕಳೆಯುವ ಯೋಚನೆಯಲ್ಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದೇ ಇಲ್ಲವೇನು ಅಂದುಕೊಂಡಿದ್ದ ವಿಜಯ ರಾಘವೇಂದ್ರ ಅವರು, ಇದೀಗ ಮತ್ತೆ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಎಳಂದೂರು ತಾಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಚಲನಚಿತ್ರ ಚಿತ್ರೀಕರಣ ನಿಮಿತ್ತ ಬಂದಿದ್ದ ನಟ ವಿಜಯ ರಾಘವೇಂದ್ರ ಹಾಗು ಸಹ ಕಲಾವಿದರು ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಕೂಡ ಓದಿ : Dhruva Sarja : ಧ್ರುವ ಸರ್ಜಾ ಅವರ ಗಂಡು ಮಗು ಸೇಮ್ ಚಿರು ಹಾಗೆ ಇದೆ ಅಂದಿದ್ದಕ್ಕೆ ಧ್ರುವ ಸರ್ಜಾ ಏನು ಹೇಳಿದ್ದಾರೆ ನೋಡಿ

ದೇವಾಲಯದಲ್ಲಿ ಪೂಜೆ ಮಾಡಿ ಪುತ್ರ ಶೌರ್ಯನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ ವಿಜಯ ರಾಘವೇಂದ್ರ. ಅಷ್ಟೇ ಅಲ್ಲದೇ ಮಗನ ಮುಂದಿನ ಭವಿಷ್ಯ ಚೆನ್ನಾಗಿರಲಿ, ಶೌರ್ಯನಿಗೆ ಯಾವುದೇ ಕಷ್ಟ ಬಾರದಿರಲಿ ಎಂದು ಮಗನ ಹೆಸರಿನಲ್ಲಿ ಉರುಳು ಸೇವೆ ಕೂಡ ಮಾಡಿದ್ದಾರೆ ನಟ ವಿಜಯ ರಾಘವೇಂದ್ರ. ಬಳಿಕ ದಾಸೋಹ ಭವನದಲ್ಲಿ ವಿಜಯ ರಾಘವೇಂದ್ರ ಪ್ರಸಾದ ಸೇವಿಸಿದ್ದು, ನೆಚ್ಚಿನ ನಟನ ಜೊತೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ನಿಂತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply