Bigg Boss Kannada : ಬಿಗ್ ಬಸ್ ಮನೆಯಲ್ಲಿ ರೊಚ್ಚಿಗೆದ್ದ ರಕ್ಷಕ್ ಬುಲೆಟ್.! ಕಿರುಚಾಡಿದ ಕಾರ್ತಿಕ್.! ಸೈಲೆಂಟ್ ಆದ್ರ ವಿನಯ್, ಪ್ರತಾಪ್.!

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ನಿಧಾನವಾಗಿ ಗ್ರೂಪಿಸಂ ಶುರುವಾಗುತ್ತಿದೆ. ಕೆಲವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವರು ಸುಖಾಸುಮ್ಮನೆ ಕಿರುಚಾಡಲು ಆರಂಭಿಸಿದ್ದಾರೆ. ಮಾತಿನ ಚಕಾಮಕಿ ತಾರಕಕ್ಕೇರಿದೆ. ಮನೆಯೊಂದು ಮೂರು ಭಾಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10, ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಬಳಿಕ ಎರಡನೇ ವಾರದ ಆಟ ಕುತೂಹಲದ ಘಟ್ಟ ತಲುಪಿದೆ.

Whatsapp Group Join
Telegram channel Join

ಬಹಳ ಕಷ್ಟದ ಟಾಸ್ಕ್ ಗಳು ಸ್ಪರ್ಧಿಗಳಿಗೆ ಎದುರಾಗುತ್ತಿದೆ. ಈ ಹಾದಿಯಲ್ಲಿ ಕಿರುಚಾಟ, ಕಿತ್ತಾಟ ಹೆಚ್ಚಾಗುತ್ತಿದೆ. ಮನೆಯಲ್ಲಿನ ಸದಸ್ಯರನ್ನು ಎರಡು ತಂಡಗಳಾಗಿ ಮಾಡಿ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ವೇಳೆ ವಿನಯ್, ಪ್ರತಾಪ್, ರಕ್ಷಕ್, ಕಾರ್ತಿಕ್ ಬಹಳ ಜೋರಾಗಿ ಜಗಳವಾಡಿದ್ದಾರೆ. ಅದರ ಪ್ರೊಮೋ ರಿಲೀಸ್ ಆಗಿದೆ. ಎರಡನೇ ವಾರದಲ್ಲಿ ಎರಡು ತಂಡಗಳಾಗಿ ಸ್ಪರ್ಧಿಗಳು ಆಟವಾಡಲು ಆರಂಭಿಸಿದ್ದಾರೆ. ಒಂದು ತಂಡವನ್ನು ವಿನಯ್ ಗೌಡ ಮುನ್ನಡೆಸುತ್ತಿದ್ದರೆ, ಮತ್ತೊಂದು ತಂಡದ ನಾಯಕತ್ವವನ್ನು ಕಾರ್ತಿಕ್ ವಹಿಸಿಕೊಂಡಂತೆ ಕಾಣುತ್ತಿದೆ.

ಇದನ್ನೂ ಕೂಡ ಓದಿ : Pension Scheme : 60 ವರ್ಷ ಮೇಲ್ಪಟ್ಟ ಅಜ್ಜ-ಅಜ್ಜಿಯರು ಇನ್ನು ಪೆನ್ಷನ್ ಬಂದಿಲ್ಲ ಅಂದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಿಕೊಳ್ಳಬೇಕು.

Whatsapp Group Join
Telegram channel Join

ಸಗಣಿ ನೀರನ್ನು ಮೈಮೇಲೆ ಸುರಿದುಕೊಳ್ಳುವ ಟಾಸ್ಕ್ ಬಿಗ್ ಬಾಸ್ ಕೊಟ್ಟಿದ್ದು, ಸೋತವರಿಗೆ ಶಿಕ್ಷೆಯು ಸಿಕ್ಕಿದೆ. ಆ ಬಳಿಕ ಆಟದ ಬಗ್ಗೆ ಸ್ಪರ್ಧಿಗಳ ನಡುವೆ ಜಗಳ ನಡೆದಿದೆ. ಕನ್ನಿಂಗ್ ಗೇಮ್ ಬೇಡ ಎಂದು ಡ್ರೋನ್ ಪ್ರತಾಪ್ ಗೆ ವಿನಯ್ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಇಡೀ ತಂಡದ ಬಗ್ಗೆ ಡ್ರೋನ್ ಪ್ರತಾಪ್ ಮಾತನಾಡಿದ್ದು, ಸಂತೋಷ್ ವರ್ತೂರು ಗರಂ ಆಗಿದ್ದಾರೆ. ಬಳಿಕ ಟಾಸ್ಕ್ ರೂಲ್ಸ್ ಬಗ್ಗೆ ಮಾತನಾಡಲು ರಕ್ಷಕ್ ಬುಲೆಟ್ ಮುಂದಾಗಿದ್ದಾರೆ. ಆಗ ಕಾರ್ತಿಕ್ ಕೆಂಡಾಮಂಡಲವಾಗಿದ್ದಾರೆ. ರೂಲ್ಸ್ ಹೇಳುವ ರೀತಿ ಇರುತ್ತದೆ. ಕುಳಿತುಕೊಂಡು ಮಾತನಾಡು, ಜೋರಾಗಿ ಮಾತನಾಡಬೇಕು ಅಂದರೆ ನನಗೂ ಮಾತನಾಡಲು ಬರುತ್ತೆ. ಅದು ಯಾವನಾದರೂ ಆಗಲಿ ಎಂದು ಕಿರುಚಾಡಿದ್ದಾರೆ.

ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

ಪ್ರೊಮೋ ನೋಡಿದವರು ಕಾರ್ತಿಕ್ ಸುಖಾಸುಮ್ಮನೆ ಕೂಗಾಡುತ್ತಿದ್ದಾರೆ, ಇದೆಲ್ಲಾ ಅತಿಯಾಯ್ತು ಎನ್ನುತ್ತಿದ್ದಾರೆ. ರಕ್ಷಕ್ ಅವರು ಆಟದ ಬಗ್ಗೆ ಹಾಗು ಬಿಗ್ ಬಾಸ್ ನಿಯಮಗಳ ಬಗ್ಗೆ ಮಾತನಾಡುವಾಗ ನಟ ಕಾರ್ತಿಕ್ ಅವರು ರೊಚ್ಚಿಗೆದ್ದಿದ್ದರು. ನಂತರದಲ್ಲಿ ಇಡೀ ಬಿಜಿ ಬಾಸ್ ಮನೆಯಲ್ಲಿ ಜಗಳದ ವಾತಾವರಣ ಉಂಟಾಗಿತ್ತು. ಇನ್ನು ಇವರ ಜೊತೆಗೆ ಡ್ರೋನ್ ಪ್ರತಾಪ್ ಅವರು ಪ್ರತಿ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ಈ ವೇಳೆ ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್ ವಿರುದ್ಧ ಸಿಡಿದೆದ್ದಿದ್ದಾರೆ. ಒಟ್ಟಾರೆಯಾಗಿ ಇವತ್ತಿನ ಬಿಗ್ ಬಾಸ್ ಶೋನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ನಿಮ್ಮ ಪ್ರಕಾರ ಬಿಗ್ ಬಾಸ್ ನಿಮ್ಮ ನೆಚ್ಚಿನ ಬಿಗ್ ಬಾಸ್ ಸ್ಪರ್ಧಿ ಯಾರು ಅಂತ ಕಾಮೆಂಟ್ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply