RajaMarthanda : ಕೋಪ ಮರೆತು ಧ್ರುವ ಸರ್ಜಾ ಬೆಂಬಲಕ್ಕೆ ಬಂದ ಡಿಬಾಸ್ ದರ್ಶನ್.! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡಿಬಾಸ್!

RajaMarthanda : ನಟ ದರ್ಶನ್ ಹಾಗು ಧ್ರುವ ಸರ್ಜಾ ಅವರ ನಡುವಿನ ಭಾಂದವ್ಯ ಇತ್ತೀಚಿಗೆ ಸರಿಯಿಲ್ಲ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಹೌದು, ಮೊನ್ನೆ ನಡೆದ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ ಧ್ರುವ ಸರ್ಜಾ ಅವರು ನಟ ದರ್ಶನ್ ಅವರ ಪಕ್ಕದಲ್ಲಿದ್ದರೂ ಕೂಡ ಒಂದು ಮಾತು ಕೂಡ ಮಾತನಾಡದೇ ಹೊರತು ಹೋದರು. ಇದರಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾನೇ ಬೇಸರವಾಗಿತ್ತು. ಆದರೆ ಇದೀಗ ದರ್ಶನ್ ಅವರು ತಮ್ಮೆಲ್ಲಾ ಕೋಪ, ಬೇಸರವನ್ನ ಮರೆತು ಧ್ರುವ ಸರ್ಜಾ ಅವರ ಪರ ನಿಂತಿದ್ದಾರೆ. ಹಾಗಾದ್ರೆ ಆಗಿದ್ದೇನು ಗೊತ್ತಾ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Darshan Thoogudeepa : ಅಭಿಷೇಕ್ ಅಂಬರೀಷ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ದರ್ಶನ್ ಹಾಗು ವಿಜಯಲಕ್ಷ್ಮಿ.!

ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು ಹೃದಯಾಘಾತದಿಂದ ನಿಧನರಾದರು. ಚಿರು ಚಿರನಿದ್ರೆಗೆ ಜಾರಿ ಮೂರು ವರ್ಷಗಳು ಉರುಳಿವೆ. ಇದೀಗ ಅವರ ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಇಂದು ಅಕ್ಟೋಬರ್ 6 ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದ್ದು, ವಿಶೇಷವೇನಂದ್ರೆ, ಶುರು ಸರ್ಜಾ ಅವರಿಗೆ ಸಹೋದರ ನಟ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.

Whatsapp Group Join
Telegram channel Join

ಅಂದ ಹಾಗೆ ಧ್ರುವ ಸರ್ಜಾ ನೋವಿನಲ್ಲಿಯೇ ಈ ಸಿನಿಮಾಗೆ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ನಿರ್ಮಾಪಕರಿಗೂ ಒಂದು ಸೂಚನೆಯನ್ನು ನಟ ದರ್ಶನ್ ಅವರು ನೀಡಿದ್ದರಂತೆ. ಈ ಸಿನಿಮಾದ ನಿರ್ಮಾಪಕರಿಗೆ ದರ್ಶನ್ ಅವರು ಒಂದು ಮಾತು ಹೇಳಿದ್ದರು. ಯಾವುದೇ ಕಾರಣಕ್ಕೂ ಡಬ್ಬಿಂಗ್ ಮಾಡುವ ವಿಚಾರದಲ್ಲಿ ಧ್ರುವ ಸರ್ಜಾ ಅವರಿಗೆ ಒತ್ತಡ ಹಾಕಬೇಡಿ. ಈ ರೀತಿಯ ಪರಿಸ್ಥಿಯಲ್ಲಿ ಡಬ್ಬಿಂಗ್ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆತ ಎಷ್ಟಾದರೂ ಸಮಯ ತೆಗೆದುಕೊಳ್ಳಲಿ. ಲೇಟ್ ಆಗುತ್ತಾ ಆಗಲಿ. ನೀವು ಕಾಯಿರಿ ಎಂದು ದರ್ಶನ್ ಅವರು ಹೇಳಿದ್ದರು.

ಇದನ್ನೂ ಕೂಡ ಓದಿ : Pension Scheme : ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಈ ಕೆಲಸ ಕಡ್ಡಾಯ / ಇಲ್ಲಾಂದ್ರೆ ಎಲ್ಲಾ ಪಿಂಚಣಿ ಹಣ ಬಂದ್.!

ಧ್ರುವ ಸ್ರಜಾ ಅವರು ತುಂಬಾ ಸಮಯ ತೆಗೆದುಕೊಂಡು ಈ ಸಿನಿಮಾ ಡಬ್ ಮಾಡಿದ್ದಾರೆ. ಇದೀಗ ಇಂದು ಚಿರು ಸಿನಿಮಾ ರಿಲೀಸ್ ಆಗಿದ್ದು. ದರ್ಶನ್ ಅವರು ಕೂಡ ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲರೂ ಚಿರು ಅವರ ರಾಜಮಾರ್ತಾಂಡ ಸಿನಿಮಾವನ್ನು ನೋಡಿ. ನಿಮ್ಮೆಲ್ಲರ ಪ್ರೀತಿ ಇರಲಿ ಎಂದು ಕೇಳಿಕೊಂಡಿದ್ದಾರೆ. ಈ ವಿಷಯ ಕೇಳಿ ಧ್ರುವ ಸರ್ಜಾ ಅವರು ಕೂಡ ಖುಷಿಯಾಗಿದ್ದಾರೆ. ಧ್ರುವ ಸರ್ಜಾ ಹಾಗು ದರ್ಶನ್ ಅಭಿಮಾನಿಗಳು ಈ ವಿಡಿಯೋವನ್ನ ಎಲ್ಲಾ ಕಡೆ ಶೇರ್ ಮಾಡುತ್ತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply