Darshan Thoogudeepa : ಬೆಂಗಳೂರು : ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ ಹುಟ್ಟುಹಬ್ಬವನ್ನ ನಿನ್ನೆ ತಾನೇ ಅದ್ಧೂರಿಯಾಗಿ ಆಚರಿಸಲಾಗಿದೆ. ಡಿಬಾಸ್ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ ಅವರು ಅಭಿಷೇಕ್ ಅಂಬರೀಷ್ ಅವರ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದು, ಭರ್ಜರಿ ಉಡುಗೊರೆ ಕೂಡ ಕೊಟ್ಟಿದ್ದಾರೆ. ಹಾಗಾದ್ರೆ, ದರ್ಶನ್ ಹಾಗು ವಿಜಯಲಕ್ಷ್ಮಿ ದಂಪತಿಗಳು ಕೊಟ್ಟ ಉಡುಗೊರೆ ಏನು.? ಅನ್ನುವುದನ್ನ ನೋಡೋಣ…
ಇದನ್ನೂ ಕೂಡ ಓದಿ : Dhruva Sarja : ಧ್ರುವ ಸರ್ಜಾ ಮಗಳ ಬರ್ತ್ ಡೇ ಹೇಗಿತ್ತು ಗೊತ್ತಾ.? ಮೇಘನಾ ರಾಜ್ ಕೊಟ್ಟ ಧ್ರುವ ಮಗಳಿಗೆ ಇಟ್ಟ ಹೆಸರೇನು.?.
ನಟ ಅಭಿಷೇಕ್ ಅಂಬರೀಷ್ ಅಭಿನಯದ ಬ್ಯಾಡ್ ಮ್ಯಾನರ್ ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಇದರ ಜೊತೆಗೆ ಕಾವೇರಿ ವಿವಾದದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದರು. ನಟ ಅಭಿಷೇಕ್ ಅಂಬರೀಷ್ ಅವರು ಪತ್ನಿ ಅವಿವಾ ಅವರ ಜೊತೆ ಇದೇ ವರ್ಷ ಜೂನ್ ತಿಂಗಳು ಹಸೆಮಣೆ ಏರಿದ್ದರು. ಇವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲಿಯೇ ನಿರ್ದೇಶಕ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ ಚಿತ್ರ ರಿಲೀಸ್ ಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಸಿನಿಮಾದ ಪೋಸ್ಟರ್, ಟೀಸರ್ ಎಲ್ಲಾ ರಿವೀಲ್ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಕೂಡ ಓದಿ : Pension Scheme : ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಈ ಕೆಲಸ ಕಡ್ಡಾಯ / ಇಲ್ಲಾಂದ್ರೆ ಎಲ್ಲಾ ಪಿಂಚಣಿ ಹಣ ಬಂದ್.!
ಅಕ್ಟೋಬರ್ ೩, ನಿನ್ನೆ ಜೂನಿಯರ್ ರೆಬೆಲ್ ಸ್ಟಾರ್ ಅವರ ಹುಟ್ಟುಹಬ್ಬ. ಮದುವೆ ನಂತರ ಮೊದಲನೇ ಬಾರಿ ತಮ್ಮ ಜನ್ಮ ದಿನವನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ನಟ ದರ್ಶನ್ ಅವರು ಖಾಸಗಿ ಹೋಟೆಲ್ ವೊಂದರಲ್ಲಿ ಅಭಿಷೇಕ್ ಅಂಬರೀಷ್ ಅವರ ಬರ್ತ್ ಡೇಯನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಬರ್ತ್ ಡೇ ಪಾರ್ಟಿಯಲ್ಲಿ ಸುಮಲತ ಅಂಬರೀಷ್, ದರ್ಶನ್, ವಿಜಯಲಕ್ಷ್ಮಿ ಹಾಗು ಕೆಲ ಕುಟುಂಬದ ಆಪ್ತರಷ್ಟೇ ಭಾಗವಹಿಸಿದ್ದಾರೆ. ಅಭಿಷೇಕ್ ಅಂಬರೀಷ್ ಅವರ ಬರ್ತ್ ಡೇಗೆ ಹಿರಿಯ ಸಹೋದರ ಎನಿಸಿಕೊಂಡಿರುವ ಡಿಬಾಸ್ ದರ್ಶನ್ ಅವರು ಕೋಟಿ ಬೆಲೆಯ ಕಾರೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
[…] […]