Pension Scheme : ನಮಸ್ಕಾರ ಸ್ನೇಹಿತರೇ, 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ-ಅಜ್ಜಿಯರಿಗೆ ಹಾಗು ವಿಧವೆಯರಿಗೆ ಹಾಗು ಅಂಗವಿಕಲರಿಗೆ ಇದೇ ತಿಂಗಳು ಈ ಕೆಲಸ ಕಡ್ಡಾಯವಾಗಿ ಮಾಡದೇ ಹೋದರೆ, ಮುಂದಿನ ತಿಂಗಳಿನಿಂದ ನಿಮಗೆ ಪಿಂಚಣಿ ಹಣ ಸಿಗಲ್ಲ. ಪ್ರತೀ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನ ಇದೇ ತಿಂಗಳೊಳಗಾಗಿ ಕಡ್ಡಾಯವಾಗಿ ಮಾಡಲೇಬೇಕು.
ಇದೇ ತಿಂಗಳು ಅಂದರೆ, ಅಕ್ಟೋಬರ್ 31ರೊಳಗಾಗಿ ಪ್ರತೀ ತಿಂಗಳ ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಪ್ರತೀ ತಿಂಗಳು ಪಿಂಚಣಿ ಪಡೆಯುವವರು ಈ ಕೆಲಸ ಮಾಡಿಸಿಕೊಳ್ಳಲೇ ಬೇಕು ಎಂದು ರಾಜ್ಯ ಸರ್ಕಾರ ಅಧೀಕೃತ ಆದೇಶ ಹೊರಡಿಸಿದೆ. ಕೆಲವೊಬ್ಬರಿಗೆ ಇತ್ತೀಚಿಗೆ ಪಿಂಚಣಿ ಹಣ ಬರುವುದು ನಿಂತಿರುತ್ತದೆ. ಇನ್ನು ಇತ್ತೀಚಿಗೆ ಹೊಸ ಅರ್ಜಿ ಸಲ್ಲಿಸಿದರೂ ಕೂಡ ಹಣ ಬಂದಿರುವುದಿಲ್ಲ. ರಾಜ್ಯದಲ್ಲಿ ಮಾಶಾಸನ ಪಡೆಯುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಈ ತಿಂಗಳು ಮುಗಿಯುವುದರ ಒಳಗಾಗಿ ಈ ಕೆಲಸವನ್ನ ಎಲ್ಲರೂ ಕೂಡ ಮಾಡಿಕೊಳ್ಳತಕ್ಕದ್ದು.
ಇದನ್ನೂ ಕೂಡ ಓದಿ : Business Loan : ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ / ನಿರುದ್ಯೋಗಿ ಯುವಕ-ಯುವತಿಯರಿಗೆ
ರಾಜ್ಯ ಸರ್ಕಾರದಿಂದ ಅಧೀಕೃತ ಆದೇಶವನ್ನ ಪ್ರಕಟಿಸಲಾಗಿದ್ದು, ಇಂದೇ ನೇರವಾಗಿ ಭೇಟಿ ನೀಡಿ ಈ ಕೆಲಸ ಮಾಡಿಕೊಳ್ಳಿ. ನಿಮ್ಮ ಮನೆಯಲ್ಲಿಟಿಯೂ ಕೂಡ 60 ವರ್ಷ ಮೇಲ್ಪಟ್ಟ ವಯಸ್ಸಾಗಿರುವವರು ಇದ್ದರೆ, ಅಥವಾ ವಿಧವೆಯರು, ಅಂಗವಿಕಲರು ಹಾಗು ಸರ್ಕಾರದ ಇತರೇ ಯಾವುದೇ ರೀತಿಯಲ್ಲಿ ಪ್ರತೀ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿ ಹಣವನ್ನ ಪ್ರತೀ ತಿಂಗಳು ಪಡೆದುಕೊಳ್ಳುತ್ತಿರುವವರು ಇದ್ದರೆ ಈ ಕೆಲಸವನ್ನ ಮಾಡಿಸಿಕೊಳ್ಳಿ.
ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಮಾಶಾಸನ ಫಲಾನುಭವಿಗಳಿಗೆ ಮುಖ್ಯ ಮಾಹಿತಿ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ, ಪಿಂಚಣಿ ರದ್ದು. ಸಾಮಾಜಿಕ ಭದ್ರತಾ ಯೋಜನೆಯ ಅಡಿ ಬರುವ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಮೈತ್ರಿ ಮನಸ್ವಿನಿ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ ಫಲಾನುಭವಿಗಳ ಪಿಂಚಣಿ ಪಡೆಯುತ್ತಿರುವ ಅಂಚೆ ಕಚೇರಿ ಖಾತೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮತ್ತು ಏನ್ ಪಿಸಿಐ(NPCI) ಮ್ಯಾಪಿಂಗ್ ಮಾಡಿಸಬೇಕಾಗುತ್ತದೆ.
ಇದನ್ನೂ ಕೂಡ ಓದಿ : Annabhagya Yojane : ಇನ್ನೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ವಾ.? ಈ ಕೆಲಸವನ್ನ ತಪ್ಪದೇ ಮಾಡಿ
ಸರಕಾರವು ಫಲಾನುಭವಿಯ ಮಾಶಾಸನವನ್ನ ಆಧಾರ್ ಕಾರ್ಡ್ ಆಧಾರಿತ ಡಿಬಿಟಿ(DBT) ಪಿಂಚಣಿಯನ್ನ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಪಾವತಿ ಮಾಡಿರುವುದರಿಂದ ಆಧಾರ್ ಕಾರ್ಡ್ ಲಿಂಕ್ ಮತ್ತು ಏನ್ ಪಿಸಿಐ(NPCI) ಮ್ಯಾಪಿಂಗ್ ಮಾಡಿಸದ ಫಲಾನುಭವಿಗಳ ಮಾಶಾಸನ ರದ್ದಾಗುವುದು. ಅದರಿಂದ ಎಲ್ಲಾ ಫಲಾನುಭವಿಗಳು ಮಾಶಾಸನ ಪಡೆಯುತ್ತಿರುವ ಆಯಾ ಬ್ಯಾಂಕ್ ಹಾಗು ಅಂಚೆ ಕಚೇರಿಗೆ ಖುದ್ದಾಗಿ ಸಂಪರ್ಕಿಸಿ. ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಹಾಗು ಏನ್ ಪಿಸಿಐ ಮ್ಯಾಪಿಂಗ್ ಮಾಡಿಸಬೇಕು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..