*ಮೇಘಾ ಶೆಟ್ಟಿ, ಪವಿತ್ರ ಗೌಡ ಬಗ್ಗೆ ನಟ ದರ್ಶನ್ ಕೊನೆಗೂ…? | Darshan Thoogudeepa | D Boss Darshan | Megha Shetty | Pavithra Gowda

Darshan Thoogudeepa : ಮೇಘಾ ಶೆಟ್ಟಿ ಎದುರು ವಿಜಯಲಕ್ಷ್ಮಿ ಮಾಡಿರುವ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ದರ್ಶನ್ ಪ್ರತಿಕ್ರಿಯೆ ಏನು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಜನರು ಇಷ್ಟ ಪಡುವಂತಹ ಸ್ಟಾರ್ ನಟ. ದರ್ಶನ್ ಅವರಿಗೆ ಇರುವ ಫ್ಯಾನ್ಸ್ ಬೇಸ್ ನೋಡಿ ಅಕ್ಕಪಕ್ಕದ ಇಂಡಸ್ಟ್ರಿಯವರು ಸಹ ಹೊಟ್ಟೆಉರಿದು ಕೊಳ್ಳುತ್ತಾರೆ. ಅಷ್ಟ್ಟೊಂದು ಖ್ಯಾತಿ ಗಳಿಸಿರುವ ದರ್ಶನ್ ಅವರ ವೈಯುಕ್ತಿಕ ವಿಷಯ ಮಾತ್ರ ಸದಾ ಚರ್ಚೆಯಲ್ಲಿ ಇರುತ್ತದೆ. ಫೆಬ್ರವರಿ 16 ರಂದು ದರ್ಶನ್ ಅವರು ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು. ಆದರೆ ಅಭಿಮಾನಿಗಳನ್ನ ಭೇಟಿಯಾದ ಬಳಿಕ ಆಪ್ತರೊಂದಿಗೆ ಖಾಸಗಿ ಪಾರ್ಟಿಯಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

ಇದನ್ನೂ ಕೂಡ ಓದಿ : ವಿಜಯಲಕ್ಷ್ಮಿ ಆಕ್ರೋಶಕ್ಕೆ ಈಗ ಮೇಘಾ ಶೆಟ್ಟಿ ಏನು ಮಾಡಿಕೊಂಡಿದ್ದಾರೆ ಗೊತ್ತಾ.? । Darshan Thoogudeepa । Vijayalakshmi । Megha Shetty

ಆದ್ರೆ ಈ ಪಾರ್ಟಿನ ಆರೆಂಜ್ ಮಾಡಿದ್ದು ಜೊತೆ ಜೊತೆಯಲಿ ಖ್ಯಾತಿಯಾ ಮೇಘಾ ಶೆಟ್ಟಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮೇಘಾ ಶೆಟ್ಟಿಯವರು ಮಾತ್ರವಲ್ಲದೇ ಪವಿತ್ರ ಗೌಡ, ಪಾಯಲ್ ಇನ್ನು ಮುಂತಾದ ಅನೇಕರೆಲ್ಲ ಸೇರಿ ಮಹಾರಾಜರಂತೆ ವೆಲ್ಕಮ್ ಮಾಡಿ ಕೇಕ್ ಕಟ್ ಮಾಡಿಸಿ ಬಹಳ ಕ್ಲೋಸ್ ಆಗೇ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನೆಲ್ಲ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ರೀತಿ ನನ್ನ ಕುಟುಂಬದ ಸಂತೋಷವನ್ನು ಹಾಳುಮಾಡುವ ಫೋಟೋ ಮತ್ತು ವಿಡಿಯೋಗಳನ್ನ ಪೋಸ್ಟ್ ಮಾಡೋದನ್ನ ನಿಲ್ಲಿಸಿ. ಮಹಿಳೆ ಆಗಿ ಅದನ್ನು ಪೋಸ್ಟ್ ಮಾಡಿದವರು, ಹಾಕುವ ಮೊದಲೇ ಯೋಚನೆ ಮಾಡ್ಬೇಕಿತ್ತು.

ಯಾಕಂದರೆ, ಇದರಿಂದ ನನಗೂ ಮತ್ತು ನನ್ನ ಮಗನಿಗೂ ತುಂಬಾ ನೋವು ಆಗುತ್ತೆ. ನಾನು ಸುಮ್ಮನೆ ಇದೀನಿ ಅಂದ ಮಾತ್ರಕ್ಕೆ ಎಲ್ಲವನ್ನ ಸಹಿಸಿಕೊಳ್ತೀನಿ ಅಂದರೆ ಅದು ನಿಮ್ಮ ದೊಡ್ಡ ದಡ್ಡತನ. ಇದು ನಿಮ್ಮ ನೈತಿಕತೆ ಎಂತದ್ದು ಎಂದು ತೋರಿಸುತ್ತದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಕೂಡಲೇ ಮೇಘಾ ಶೆಟ್ಟಿ ತಾವು ಪೋಸ್ಟ್ ಮಾಡಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ಹಾಕಿದ್ದ ಪೋಸ್ಟ್ ಹಾಗೂ ಮೇಘಾ ಶೆಟ್ಟಿ ಹಾಕಿದ ಪೋಸ್ಟ್ ಗಳನ್ನ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಕೂಡ ಓದಿ : Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie

ಕೆಲವರು ವಿಜಯಲಕ್ಷ್ಮಿ ಅವರ ಮಾತು ಕರೆಕ್ಟ್ ಆಗಿದೆ. ಎಷ್ಟಾದರೂ ಅವರು ಬೇರೆಯವರ ಪತ್ನಿ ಅಂದಮೇಲೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಪತ್ನಿಯಾಗಿರುವ ಅವರು ಇದನೆಲ್ಲಾ ಕೇಳುವ ಹಕ್ಕಿದೆ ಎಂದು ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ . ಈ ಬಗ್ಗೆ ದರ್ಶನ್ ಅವರು ಯಾವುದೇ ಪ್ರತಿಕ್ರಿಯೆಯನ್ನ ಇದುವರೆಗೂ ನೀಡಿಲ್ಲ ವಿಜಯಲಕ್ಷ್ಮಿ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply