ಕಳೆದ 12 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಫೇಮಸ್ ಆದ ಕನ್ನಡ ನಟರ ಪಟ್ಟಿ ಬಿಡುಗಡೆ!

ಸೋಷಿಯಲ್ ಮೀಡಿಯಾ(Social Media) ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ಈ ಟ್ವಿಟರ್(Twitter) ದೊಡ್ಡ ಮಟ್ಟದಲ್ಲಿಯೇ ತನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದೆ. ಟ್ವಿಟರ್ ಸಿನಿಮಾಗಳ ಪ್ರಚಾರದ ಪ್ರಮುಖ ವೇದಿಕೆಯಾಗಿದೆ.

ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva

ಸಿನಿಮಾಗಳ ಕುರಿತು ಯಾವುದೇ ಸುದ್ದಿಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತವೆ. ಸ್ಟಾರ್ ನಟರ ವಿಷಯಕ್ಕೆ ಬಂದರೆ ಟ್ವಿಟರ್‌ನಲ್ಲಿ ಅವರ ಬಗ್ಗೆ ಪ್ರತಿದಿನವೂ ಪೋಸ್ಟ್‌ಗಳು ಬರುತ್ತಲೇ ಇರುತ್ತವೆ. ಸ್ಟಾರ್‌ಗಳ ಏನೇ ಅಪ್‌ಡೇಟ್ ಅಥವಾ ಸುದ್ದಿಗಳಿದ್ದರೂ ಅದು ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುತ್ತವೆ.

ಟ್ವಿಟರ್‌ನಲ್ಲಿ ಯಾವ ನಟರ ಬಗ್ಗೆ ಕಳೆದ ಇಂತಿಷ್ಟು ದಿನಗಳಲ್ಲಿ ಹೆಚ್ಚು ಚರ್ಚೆಗಳು ನಡೆದಿವೆ. ಟಿಒಐ ಮೂವಿಸ್ ಕಳೆದ 12 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ಕನ್ನಡ ನಟರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕನ್ನಡದ ಐವರು ನಟರು ಈ ಪಟ್ಟಿಯಲ್ಲಿದ್ದಾರೆ.

ಇದನ್ನೂ ಕೂಡ ಓದಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಅತಿಹೆಚ್ಚು ಬಾರಿ ಮೆನ್ಷನ್ ಆದ ಕನ್ನಡ ನಟರ ಪಟ್ಟಿ ( ಫೆಬ್ರವರಿ 25ರಿಂದ ಮಾರ್ಚ್ 8ರವರೆಗೆ )

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅತಿಹೆಚ್ಚು ಬಾರಿ ಮೆನ್ಷನ್ ಆಗಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್(Sudeep) ಇದ್ದಾರೆ. ಯಶ್(Yash) ಮೂರನೇ ಸ್ಥಾನ. ರಿಷಬ್ ಶೆಟ್ಟಿ(Rishabh Shetty) ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್(Punith Rajkumar) ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply