ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ

ಅನೇಕ ಬಾರಿ ವಿನೋದ್ ರಾಜ್ ಅವರ ಮದುವೆ ಕುರಿತು ಅನೇಕ ಪ್ರಶ್ನೆಗಳು ಇದ್ದರು ಕೂಡ ಈ ವರೆಗೆ ವೈವಾಹಿಕ ಜೀವನದ ಕುರಿತು ಸ್ವಷ್ಟ ಸುಳಿವು ಸಿಕ್ಕಿರಲಿಲ್ಲ. ಬಹುತೇಕರು ಅವರಿಗೆ ಮದುವೆ ಆಗಿಲ್ಲ ಎಂದುಕೊಂಡಿದ್ದರು. ಆದರೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿನೋದ್ ರಾಜ್ ಮದುವೆಗೆ ಸಂಬಂಧಿಸಿದಂತಹ ಪೋಸ್ಟ್ ಹಾಗೂ ಫೋಟೋ ವೈರಲ್ ಆಗಿದ್ದವು. ಈ ಬಗ್ಗೆ ನಟ ವಿನೋದ್ ರಾಜ್ ಆಗಲಿ ಅಥವಾ ತಾಯಿ ಲೀಲಾವತಿ ಆಗಲಿ ಇದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

ಇದನ್ನೂ ಕೂಡ ಓದಿ : SBI ಬ್ಯಾಂಕ್ ಅಕೌಂಟ್ ಇದ್ದವರ ಗಮನಕ್ಕೆ । ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಬಂಪರ್! । SBI Bank New Rules

ಆದರೆ ಈಗ ಖುದ್ದು ಲೀಲಾವತಿ ಅವರು ಮಗನ ಮದುವೆಯ ಬಗ್ಗೆ ಹೇಳಿದ್ದು, ಅವರು ಏನು ಹೇಳಿದ್ದಾರೆ ಅಂತ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.! ಹೌದು, ಮದುವೆಯ ಬಗ್ಗೆ ಒಂದು ಯುಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಲೀಲಾವತಿ ಅವರು ‘ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ. ಏಳು ಜನರ ಸಮ್ಮುಖದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸಿದ್ದೇನೆ. ಎಲ್ಲರಂತೆ ನನ್ನ ಮಗನ ಮದುವೆಯನ್ನ ಆಡಂಬರದಿಂದ ವಿಜೃಂಭಣೆಯಿಂದ ಪ್ಯಾಲೇಸ್ ನಲ್ಲಿ, ಚೌಟ್ರಿಯಲ್ಲಿ ಮದುವೆ ಮಾಡಿಸಲು ನನಗೆ ಶಕ್ತಿ ಇರಲಿಲ್ಲ. ಆದಾಗಲೇ ನಾನು ಅಷ್ಟೊಂದು ಸಿನಿಮಾ ಮಾಡಿದರು ನನ್ನ ಬಳಿ ಹಣವಿರಲಿಲ್ಲಾ. ಹೀಗಾಗಿ ಈ ವಿಷಯವನ್ನ ಮುಚ್ಚಿಟ್ಟಿದ್ದೆ.’

ಇದನ್ನೂ ಕೂಡ ಓದಿ : ಕಾರ್ಮಿಕ / ಲೇಬರ್ ಕಾರ್ಡ್ ಇದ್ದವರಿಗೆ ₹50,000/- ರೂಪಾಯಿ ನೇರ ಬ್ಯಾಂಕ್ ಖಾತೆಗೆ । Labour Card Scheme

‘ನಮ್ಮ ಸಂಸಾರವನ್ನ ಕೆದುಕುವವರು ನರಕಕ್ಕೆ ಹೋಗುತ್ತಾರೆ. ನನ್ನ ಮೊಮ್ಮಗ, ಸೊಸೆ ತಮಿಳುನಾಡಿನಲ್ಲಿ ಇದ್ದಾರೆ. ಅಲ್ಲಿ ಅವರಿಗೆ ಎಲ್ಲವೂ ಇದೆ. ದೊಡ್ಡ ಬಂಗಲೆ, ಆಸ್ತಿ ಎಲ್ಲವು ಕೂಡ ಇದೆ. ನಾನೇ ಇಷ್ಟಪಟ್ಟು ಆ ಹುಡುಗಿಯನ್ನ ವಿನೋದ್ ರಾಜ್ ಗೆ ಮದುವೆ ಮಾಡಿಕೊಟ್ಟೆ. ಆದರೆ ಇಷ್ಟು ವರ್ಷಗಳ ಬಳಿಕ ಈ ವಿಷಯವನ್ನ ಕೆದಕಿ ನಮ್ಮ ನೆಮ್ಮದಿಯನ್ನ ಹಾಳು ಮಾಡುತ್ತಿರುವುದು ನಿಜಕ್ಕೂ ನೋವು ಆಗುತ್ತೆ. ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ ಅಂತ’ ಲೀಲಾವತಿ ಅವರು ಕಣ್ಣೀರಿಟ್ಟಿದ್ದಾರೆ. ಇನ್ನೂ ಈ ಬಗ್ಗೆ ನೀವು ಏನು ಹೇಳುತ್ತೀರಾ? ತಪ್ಪದೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

2 thoughts on “ಹೌದು ನನ್ನ ಮಗನಿಗೆ ಮದುವೆ ಆಗಿದೆ ಒಬ್ಬ ಗಂಡು ಮಗ ಸಹ ಇದ್ದಾನೆ । ನಮ್ಮ ಪಾಡಿಗೆ ನಮ್ಮನ್ನ ಬದುಕಲು ಬಿಟ್ಟು ಬಿಡಿ – ಲೀಲಾವತಿ”

  1. ಹಳೆ ವಿಷ್ಯ ಅದು ನಿಮಗೆ ಸಂಬಂಧ ಇಲ್ಲ. ಈ ವಿಷಯದಿಂದ ನಿಮಗೆ ನಮಗೆ ದೇಶಕೆ karnatakake ಏನು ಲಾಭ. ಅದು ಅವರ ಪರ್ಸನಲ್. ಲೀಲಾವತಿ madam ಹಿರಿಯ ಕಲಾವಿದೆ. ಅವರು ನೆಮದಿ ಆಗಿ ಬಡಕಲು ಬಿಡಿ

    Reply

Leave a Reply