Loan Facility : ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಇಲ್ಲದೇ 2 ಲಕ್ಷ ಸಾಲ ನೀಡುತ್ತಂತೆ.? ನೀವೂ ಕೂಡ ಅರ್ಜಿ ಸಲ್ಲಿಸಬಹುದು

Loan Facility : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದ ಒಂದು ಮಹತ್ತರ ಸಾಲ ಯೋಜನೆಯ ಬಗ್ಗೆ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಸಧ್ಯದಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದ್ದು, ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶದ ರೈತರಿಗೆ ಹಾಗು ಬಡ ಕೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಸದೃಢಗೊಳ್ಳಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಂತಹ ಮಹತ್ವದ ಯೋಜನೆಗಳಲ್ಲಿ ಈ ಯೋಜನೆಯು ಒಂದಾಗಿದೆ.

ಕುಶಲಕರ್ಮಿಗಳಿಗೆ ಸಾಲ ಸೌಲಭ್ಯ :-

ಕೇಂದ್ರ ಸರ್ಕಾರವು ದೇಶದಲ್ಲಿರುವ ಬಡ ಕರಕುಶಲಕರ್ಮಿಗಳಿಗೆ ನೆರವಾಗಲೆಂದು ಹಾಗು ಅವರ ಏಳಿಗೆಗಾಗಿ ರಾಷ್ಟ್ರದ ಆರ್ಥಿಕ ಬಜೆಟ್ಟಿನಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಕೇಂದ್ರ ಸರ್ಕಾರದ ವತಿಯಿಂದ ಯಾವುದೇ ಹೆಚ್ಚಿನ ಗ್ಯಾರಂಟಿಗಳಿಲ್ಲವೇ ಎರಡು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ನೀಡಲಿದೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕರಕುಶಲ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ರೂಪಿಸಿದ್ದು, ಈ ಸಾಲದಿಂದ ಕರಕುಶಲ ಕಾರ್ಮಿಕರು ತಮ್ಮ ಸ್ವಂತ ಉದ್ಯೋಗ ಅಥವಾ ಉದ್ಯಮವನ್ನ ಅಭಿವೃದ್ಧಿಪಡಿಸಿಕೊಳ್ಳಲು ಸಾಕಷ್ಟು ನೇರವಾಗುತ್ತದೆ..

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಕಮ್ಮಾರ, ಕ್ಷೌರಿಕ, ಅಕ್ಕಸಾಲಿಗರು ಸೇರಿದಂತೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಮೊದಲ ಹಂತದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗಲಿದ್ದು, ನಂತರ ಎರಡನೇ ಹಂತದಲ್ಲಿ ಎರಡು ಲಕ್ಷ ರೂಪಾಯಿಗಳಷ್ಟು ಸಾಲ ದೊರೆಯುತ್ತದೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಬೇಕಾಗುವ ದಾಖಲೆಗಳು.?

  • ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.
  • ಗುರುತಿನ ಚೀಟಿ ಅಥವಾ ವೋಟರ್ ಐಡಿ ಪಡೆದಿರಬೇಕು. ಪಾನ್ ಕಾರ್ಡ್ ಹೊಂದಿರಬೇಕು.
  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಇರಬೇಕು.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಬ್ಯಾಂಕ್‌ ಖಾತೆ ಹೊಂದಿರಬೇಕು.

ಈ ಕೆಳಗೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿ ನೀವು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು. ಇಲ್ಲವೇ ನಿಮ್ಮ ಹತ್ತಿರದ CSC ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ :- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply