Gruhalakshmi : ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ – ರಾತ್ರೋರಾತ್ರಿ ಹೊಸ ರೂಲ್ಸ್ – ಎಲ್ಲರಿಗೂ ಈ ಕೆಲಸ ಕಡ್ಡಾಯ

Gruhalakshmi : ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲ ಪಡಿತರ ಚೀಟಿದಾರರಿಗೆ ಹೊಸ ರೂಲ್ಸ್ ಜಾರಿ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮತ್ತು ಗೃಹಲಕ್ಷ್ಮಿ ಯೋಜನೆಯ ಎಲ್ಲ ಮಹಿಳಾ ಫಲಾನುಭವಿಗಳಿಗೆ ಈ ಹೊಸ ರೂಲ್ಸ್ ಕಡ್ಡಾಯ. ಇಲ್ಲಾಂದ್ರೆ ನಿಮಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸಿಗಲ್ಲ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲ್ಲ.

ಇಷ್ಟಕ್ಕೂ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಅಧಿಕೃತವಾಗಿ ಆದೇಶಿಸಲಾಗಿತ್ತು. ಏನೆಲ್ಲಾ ಬದಲಾವಣೆಯಾಗಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Loan Facility : ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಇಲ್ಲದೇ 2 ಲಕ್ಷ ಸಾಲ ನೀಡುತ್ತಂತೆ.? ನೀವೂ ಕೂಡ ಅರ್ಜಿ ಸಲ್ಲಿಸಬಹುದು

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಾಗು ಅನ್ನಭಾಗ್ಯ ಯೋಜನೆಯಡಿಯಲ್ಲಿ ಕೋಟ್ಯಾಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಆದ್ರೆ ಮಾರ್ಚ್ ಇಪ್ಪತೈದು ರೊಳಗಾಗಿ ಈ ಕೆಲಸವನ್ನ ಮಾಡದಿದ್ದಲ್ಲಿ ಅಂತಹವರಿಗೆ ಈ ಎರಡು ಯೋಜನೆಗಳ ಪ್ರಯೋಜನ ಸಿಗುವುದಿಲ್ಲ. ಅಷ್ಟಕ್ಕೂ ನೀವು ತಪ್ಪದೇ ಮಾಡಬೇಕಾದ ಕೆಲಸ ಯಾವುದು ಎಂದು ತಿಳಿಯೋಣ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಲಾಗಿದೆ. ಈ ಆದೇಶದ ಪ್ರಕಾರ ಕೆಲವೊಂದು ಕಾರ್ಯವನ್ನ ಈ ಎರಡು ಯೋಜನೆಗಳ ಫಲಾನುಭವಿಗಳು ತಪ್ಪದೇ ಮಾಡಬೇಕಿದೆ. ಒಂದೊಮ್ಮೆ ಕೆಲಸ ಮಾಡದೇ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದಿಲ್ಲ. ಕರ್ನಾಟಕ ಸರ್ಕಾರದ ಹೊಸ ಆದೇಶದ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್ ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಈ ಕಾರ್ಯವನ್ನ ನೀವೂ ಮಾಡಿಸದೇ ಇದ್ದಲ್ಲಿ, ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲ್ಲ.

ಹೀಗಾಗಿ ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ತೆರಳಿ ಒಮ್ಮೆ ಪರಿಶೀಲಿಸಿಕೊಳ್ಳಿ. ಪ್ರತಿ ಭಾರತೀಯರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ನೀವು ಆಧಾರ್ ಪಡೆದುಕೊಂಡು 10 ವರ್ಷ ಕಳೆದರೆ ಯಾವುದಕ್ಕೂ ಒಮ್ಮೆ ನಿಮ್ಮ ಕಾರ್ಡ್‌ನ್ನ ಅಪ್‌ಡೇಟ್ ಮಾಡಿಸಿಕೊಳ್ಳುವುದು ಉತ್ತಮ. ಒಂದೊಮ್ಮೆ ನಿಮ್ಮ ಕಾರ್ಡ್ ಅತ್ಯಂತ ಹಳೆಯದಾಗಿದ್ರೆ, ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ನೇರವಾಗಿ ವರ್ಗಾವಣೆಯಾಗಲ್ಲ.

ಇದನ್ನೂ ಕೂಡ ಓದಿ : Veterinary Department : ಕುರಿ, ಮೇಕೆ, ಹಸು, ಎಮ್ಮೆ ಆಕಸ್ಮಿಕ ಸಾವಿಗೆ ₹10,000/- ಗಳಷ್ಟು ಸಹಾಯಧನ – ಅನುಗ್ರಹ ಯೋಜನೆ ಜಾರಿಗೆ.!

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಸುವ ಅಗತ್ಯ ಇಲ್ಲದೇ ಇದ್ದರೂ ಕೂಡ ನೀವು ಯಾವುದಕ್ಕೂ ಒಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಬಹಳ ಉತ್ತಮವಾಗಿರುತ್ತೆ. 2024 ರ ಜೂನ್ 14 ರವರೆಗೆ ಆಧಾರ್ ಕಾರ್ಡ್ ಉಚಿತ ಅಪ್ಡೇಟ್ಗೆ ಸರ್ಕಾರ ಅವಕಾಶವನ್ನ ನೀಡಿದೆ. ಹೀಗಾಗಿ ಇದರ ಪ್ರಯೋಜನವನ್ನ ಪಡೆದುಕೊಳ್ಳಬಹುದಾಗಿದೆ. ಒಂದೊಮ್ಮೆ ನೀವು ಸರ್ಕಾರದ ಆದೇಶದಲ್ಲಿ ನೀಡಲಾಗಿರುವಂತಹ ಅಂಶಗಳನ್ನ ಪಾಲನೆ ಮಾಡಿದಿದ್ದರೆ ನಿಮಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದೇ ಇಲ್ಲ. ಯಾವುದಕ್ಕೂ ಒಮ್ಮೆ ನೀವು ನಿಮ್ಮ ಖಾತೆಯ ಎಲ್ಲ ಮಾಹಿತಿಗಳು ಸರಿಯಾಗಿ ಇದೆಯೋ ಇಲ್ವೋ ಅನ್ನೋದನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply