Electricity Meters : ಮನೆಯಲ್ಲಿರುವ ವಿದ್ಯುತ್ ಮೀಟರ್ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಗುಡ್ ನ್ಯೂಸ್.!

Electricity Meters : ನಮಸ್ಕಾರ ಸ್ನೇಹಿತರೇ, ನಿಮ್ಮ ಮನೆಯಲ್ಲಿರುವ ವಿದ್ಯುತ್ ಮೀಟರ್ ನಿಮ್ಮ ತಂದೆ, ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಅಥವಾ ನಿಮ್ಮ ತಾಯಿಯ ಹೆಸರಿನಲ್ಲಿ ಇದ್ದರೆ ಈ ಲೇಖನವನ್ನ ಕೊನೆಯವರೆಗೂ ನೋಡಿ. ನೇರವಾಗಿ ನಿಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬಹುದು. ಸಾಕಷ್ಟು ಮನೆಗಳಲ್ಲಿ ಹಿರಿಯರ ಹೆಸರಿನಲ್ಲಿಯೇ ವಿದ್ಯುತ್ ಮೀಟರ್ ಇರುವುದು ಸಹಜ. ಅದಕ್ಕೆ ನಾವು ಪ್ರತಿ ತಿಂಗಳು ವಿದ್ಯುತ್ ಬಿಲ್‌ ಕಟ್ಟುತ್ತ ಬಂದಿದೀವಿ. ಆದ್ರೆ ಆ ಮೀಟರ್ ಹಿರಿಯರ ಅಥವಾ ಪೂರ್ವಜರ ಹೆಸರಿನಲ್ಲಿಯೇ ಉಳಿದಿರುತ್ತದೆ.

ಆದರೆ ಈಗ ಗೃಹಜ್ಯೋತಿ ಯೋಜನೆಗೆ ಸರ್ಕಾರವೂ ತುಂಬಾ ಸರಳ ವಿಧಾನದ ಮೂಲಕ ಈಗಿರುವ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಆಯ್ಕೆಯನ್ನು ನೀಡಿದ್ದು, ಒಳ್ಳೆಯ ಸುದ್ದಿಯಾಗಿತ್ತು. ಆದರೆ ಉಚಿತವಾಗಿ ಬಳಕೆ ಮಾಡಿಕೊಳ್ಳಲು ಮಾತ್ರ ಸರಳವಾಗಿರುವ ಈ ವಿಧಾನವು ಪರ್ಮನೆಂಟಾಗಿ ಮೀಟರ್ ನಮ್ಮ ಹೆಸರಿಗೆ ಬದಲಾಯಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Crop Insurance : ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶ.! ಹೇಗೆ ಅರ್ಜಿ ಸಲ್ಲಿಸುವುದು.? ಡೈರೆಕ್ಟ್ ಲಿಂಕ್

ನಿಮ್ಮ ಮನೆಯ ವಿದ್ಯುತ್ ಮೀಟರ್ ಕೂಡ ಹಿರಿಯರ ಹೆಸರಿನಲ್ಲಿದ್ದರೆ, ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳುವುದು ತುಂಬಾ ಸರಳವಾಗಿದೆ. ಮೀಟರ್ ಬೋರ್ಡ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ಅವರು ಮರಣ ಹೊಂದಿದರೆ ಸಮಸ್ಯೆ ಆಗಲಿದೆ. ಇದಕ್ಕಾಗಿ ಆಧಾರ್ ಕಾರ್ಡ್‌ನ ಹೊಂದಿದ್ದು, ನೀವು ಅರ್ಜಿಯನ್ನು ಸಲ್ಲಿಸಬೇಕು. ₹200 ಸ್ಟಾಂಪ್ ಪೇಪರ್ ಮೇಲೆ ಒಪ್ಪಿಗೆ ಸೂಚಿಸಿ ಲಿಖಿತ ಅಂಶ ಇರಬೇಕು.

ಅದರಲ್ಲಿ ವಿದ್ಯುತ್ ಖಾತೆ ಸಂಖ್ಯೆ, ಅರ್ಜಿ ನಮೂನೆಯಲ್ಲಿ ಸಹಿ ಇರಬೇಕು. ಒಂದು ವೇಳೆ ವಿದ್ಯುತ್ ಮೀಟರ್ ಹೊಂದಿದ್ದವರು ಮರಣ ಹೊಂದಿದ್ದರೆ, ಆಗ ಅವರ ಮರಣ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಹಾಗೆಯೇ ಅವರು ಜೀವಂತವಾಗಿದ್ದರೆ ಒಪ್ಪಿಗೆಯ ಸಹಿ ಮಾಡಿಸಿಕೊಳ್ಳಬೇಕು. ಋಣ ರಹಿತ ರಶೀದಿ ಹೆಸರು ಬದಲಾವಣೆಯ ಅರ್ಜಿ ಹೊಂದಿದ್ದು, ಅರ್ಜಿ ಹಾಕುವ ಮೂಲಕ ವಿದ್ಯುತ್ ಮೀಟರ್ ಹೆಸರು ಬದಲಾವಣೆ ಮಾಡಬಹುದು. ಅನೇಕ ಕಡೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಕಷ್ಟಕರ ಆಗ್ತಾ ಇದೆ.

ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಕುಟುಂಬಗಳಿಗೆ ಸ್ವಂತ ಮನೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಹಾಗಾಗಿ ಅರ್ಜಿ ಸಲ್ಲಿಸಿ ಆ ಬಳಿಕ ವಿದ್ಯುತ್ ಮೀಟರ್ ಬೋರ್ಡ್ ನಲ್ಲಿ, ನಿಮ್ಮ ತಾತ ಅಥವಾ ತಂದೆಯ ಹೆಸರು ಇದ್ರೆ ಅವರ ಆಧಾರ್ ಕಾರ್ಡ್ ನೀಡಬೇಕಾಗಲಿದೆ. ಸಾಲ ಅಥವಾ ಇತರ ಪ್ರಕ್ರಿಯೆಗೆ ಅದು ಪ್ರಮುಖ ದಾಖಲೆ ಆಗುವ ಕಾರಣ ಹೆಸರು ಶೀಘ್ರ ಬದಲಾಯಿಸುವುದು ಅಗತ್ಯವಾಗಿದೆ. ಹಾಗಾಗಿ ಹಳೆ ಬಾಕಿ ಮೊತ್ತ ಪಾವತಿ ಮಾಡಿ ಆ ಬಳಿಕ ಮೀಟರ್ ನಲ್ಲಿರುವ ಹೆಸರನ್ನು ಬದಲಾಯಿಸಿ. ಆನಂತರ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply