Bigg Boss Kannada : 3 ವರ್ಷದ ನಂತರ ಡ್ರೋನ್ ಪ್ರತಾಪ್ ಗೆ ತಂದೆಯಿಂದ ಪತ್ರ / ಪತ್ರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್.!

Bigg Boss Kannada : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಬಿಗ್ ಬಾಸ್ ಅವರು ಹೊಸ ಒಂದು ಟಾಸ್ಕ್ ಕೊಟ್ಟಿದ್ದಾರೆ. ಮನೆಯಿಂದ ಬಂದ ಪತ್ರ ಪಡೆಯಲು ಮೂವರು ಸದಸ್ಯರಿಗೆ ಬಿಗ್ ಬಾಸ್ ಅವರು ಒಂದು ಅವಕಾಶವನ್ನ ನೀಡಿದ್ದಾರೆ. ಈ ಪತ್ರ ಯಾರಿಗೆ ಸಿಕ್ಕಿದೆ.? ಯಾರಿಗೆ ಯಾವ ಪತ್ರ ಸಿಕ್ಕಿದೆ.? ಅನ್ನುವುದನ್ನ ನೋಡೋಣ.

ಈ ಪತ್ರದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಕಳೆದ ಮೂರು ವರ್ಷಗಳಿಂದ ಕೂಡ ಕುಟುಂಬದವರ ಜೊತೆ ಮಾತನಾಡಿಯೇ ಇಲ್ಲ.ಹೀಗಾಗಿ ಮನೆಯವರ ರಿಯಾಕ್ಷನ್ ಹೇಗಿರಬಹುದು.? ಅಂತ ತಿಳಿದುಕೊಳ್ಳಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ಜೊತೆಗೆ ತನಿಷಾ ಕುಪ್ಪಂಡ ಅವರು ಕೂಡ ನನಗೆ ಈ ವಾರದಲ್ಲಿ ಮನೆಯಿಂದ ಬಂದಂತಹ ಸ್ವೀಟ್ ನಲ್ಲಿ ನಮ್ಮಮ್ಮ ರೆಡಿಮೇಡ್ ಫುಡ್ ಕಳುಹಿಸಿದ್ದಾರೆ. ಅವರಿಗೆ ಏನೋ ಆಗಿದೆ ಅಂತ ಕಳವಳವನ್ನು ಕೂಡ ತನಿಷಾ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಕೂಡ ಓದಿ : Bigg Boss Kannada : 6ನೇ ವಾರಕ್ಕೆ ಹೊಸ ಟೀಮ್.! ಈ ಬಾರಿ ಕಾರ್ತಿಕ್ ಹಾಗು ಸಂಗೀತಾ ಒಂದೇ ಟೀಮ್ ನಲ್ಲಿ ಇರಲ್ವಾ.?

ಇದರ ಬೆನ್ನಲ್ಲೇ ಕಾರ್ತಿಕ್ ಅವರು ಕೂಡ ಡ್ರೋನ್ ಪ್ರತಾಪ್ ಅವರ ಮೇಲೆ, ನೀವು ಮೂರು ಅಥವಾ ನಾಲ್ಕು ವರ್ಷದಿಂದ ನಿಮ್ಮ ಅಪ್ಪ-ಅಮ್ಮನನ್ನ ಬಿಟ್ಟು ಇದ್ದೀರಿ.! ನಿಮಗೆ ಆ ಶಕ್ತಿಯಿದೆ. ಆದರೆ ನನಗೆ ಆ ಶಕ್ತಿ ಇಲ್ಲ. ನನಗೆ ಪ್ರತೀದಿನ ಕೂಡ ನಮ್ಮ ಅಪ್ಪ-ಅಮ್ಮನ ನಾನು ಮಾತನಾಡಿಯೇ ಅಭ್ಯಾಸ. ದಯವಿಟ್ಟು ಆ ಪತ್ರವನ್ನ ನನಗೆ ಕೊಡಿ ಅಂತ ಹೇಳಿ ಕಾರ್ತಿಕ್ ಅವರು ಕೂಡ ಹೇಳಿದ್ದಾರೆ.

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ಹಾಗು ಡ್ರೋನ್ ಪ್ರತಾಪ್ ಅವರು ಫೈನಲಿಸ್ಟ್ ಗೆ ಬಂದಿದ್ದಾರೆ. ಎಲ್ಲೋ ಒಂದು ಕಡೆ ಈ ವಾರ ಡ್ರೋನ್ ಪ್ರತಾಪ್ ಅವರು ಕ್ಯಾಪ್ಟನ್ ಆಗುವ ಸಾಧ್ಯತೆಗಳು ಕೂಡ ಇದೆ. ಇನ್ನು ಡ್ರೋನ್ ಪ್ರತಾಪ್ ಅವರ ತಂದೆ ಬರೆದಿರುವಂತಹ ಪತ್ರವನ್ನ ಪಡೆದುಕೊಳ್ಳುವುದಕ್ಕೆ ಡ್ರೋನ್ ಪ್ರತಾಪ್ ಅವರು ಸಿಕ್ಕಾಪಟ್ಟೆ ಹರಸಾಹಸವನ್ನ ಮಾಡುತ್ತಿದ್ದಾರೆ.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!

ಮೂರು ನಾಲ್ಕು ವರ್ಷದಿಂದ ನಾನು, ನನ್ನ ತಂದೆ-ತಾಯಿಯವರ ಜೊತೆಗೆ ಮಾತನಾಡಿಲ್ಲ. ದಯವಿಟ್ಟು ನನಗೆ ನನ್ನ ತಂದೆ-ತಾಯಿ ಬರೆದಿರುವಂತಹ ಪತ್ರವನ್ನ ಕೊಡಿ ಬಿಗ್ ಬಾಸ್ ಅಂತ ಬಿಗ್ ಬಾಸ್ ಹತ್ತಿರ ಹಾಗು ಅಲ್ಲಿರುವಂತಹ ಸ್ಪರ್ಧಿಗಳ ಜೊತೆ ಕೇಳಿಕೊಂಡಿದ್ದಾರೆ.

ಇನ್ನು ನಮ್ರತಾ ಗೌಡ ಅವರು ಕೂಡ ಡ್ರೋನ್ ಪ್ರತಾಪ್ ಅವರಿಗೆ ಸಪೋರ್ಟ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರ ತಂದೆ ಬರೆದಿರುವಂತಹ ಪತ್ರ ನೋಡಿ, ಪ್ರತಾಪ್ ಅವರು ಭಾವುಕರಾಗಿದ್ದಾರೆ. ಪ್ರತಾಪ್ ಅವರಿಗೆ ಎಷ್ಟೋ ದಿನಗಳು ಕಳೆದ ಬಳಿಕ ಅವರ ತಂದೆ ತಾಯಿ ಮಾತನಾಡುತ್ತಿರುವುದು ಸಿಕ್ಕಾಪಟ್ಟೆ ಖುಷಿ ಕೂಡ ಆಗಿದೆ. ಇನ್ನು ಕಣ್ಣೀರಿನ ಸುರಿಮಳೆಯನ್ನೇ ಸುರಿಸಿದ್ದಾರೆ.

ಇನ್ನು ಉಳಿದಂತಹ ಸ್ಪರ್ಧಿಗಳೆಲ್ಲರೂ ಕೂಡ ಡ್ರೋನ್ ಪ್ರತಾಪ್ ಅವರಿಗೆ ಸಮಾಧಾನವನ್ನು ಕೂಡ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರಿಗೆ ಪತ್ರವನ್ನ ಕೊಡಬೇಡಿ, ದಯವಿಟ್ಟು ನಮಗೆ ಕೊಡಿ. ಡ್ರೋನ್ ಪ್ರತಾಪ್ ಅವರಿಗೆ ಮೂರು-ನಾಲ್ಕು ವರ್ಷದಿಂದ ಅವರ ತಂದೆ ತಾಯಿಯನ್ನ ಬಿಟ್ಟು ಅಭ್ಯಾಸವಿರುವುದರಿಂದ, ನನಗೆ ಆ ರೀತಿಯ ಅಭ್ಯಾಸ ಇಲ್ಲ. ದಯವಿಟ್ಟು ಪತ್ರವನ್ನ ನನಗೆ ಕೊಡಿ ಅಂತ ಹೇಳಿ ಮನವಿಯನ್ನ ಕಾರ್ತಿಕ್ ಅವರು ಮಾಡಿಕೊಂಡಿದ್ದಾರೆ.

ಇದನ್ನೂ ಕೂಡ ಓದಿ : Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

ಇನ್ನೊಂದು ಕಡೆ ಡ್ರೋನ್ ಪ್ರತಾಪ್ ಅವರು ಬಿಕ್ಕಿ ಬಿಕ್ಕಿ ಅತ್ತಿರುವುದಕ್ಕೆ ಸಂಗೀತಾ ಶೃಂಗೇರಿ ಅವರು ಸಮಾಧಾನವನ್ನು ಕೂಡ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರ ತಂದೆಯ ಪತ್ರದಲ್ಲಿ ಏನಿತ್ತು.? ಅನ್ನುವುದನ್ನ ತಿಳಿದುಕೊಳ್ಳುವುದಕ್ಕೆ ಇವತ್ತಿನ ಎಪಿಸೋಡ್ ನೋಡಬೇಕಾಗುತ್ತೆ.

ಆದರೆ ಆ ಪತ್ರವನ್ನ ನೋಡಿದ ತಕ್ಷಣ ಡ್ರೋನ್ ಪ್ರತಾಪ್ ಅವರು ಸಿಕ್ಕಾಪಟ್ಟೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಎಷ್ಟೋ ವರ್ಷಗಳ ಬಳಿಕ ತಂದೆ ಮತ್ತು ಮಗ ಇಬ್ಬರೂ ಕೂಡ ಒಂದಾಗುವಂತಹ ಸನ್ನಿವೇಶ ಕೂಡ ಎದುರಾಗಿದೆ. ಡ್ರೋನ್ ಪ್ರತಾಪ್ ಅವರ ತಂದೆ ಬರೆದಿರುವಂತಹ ಪತ್ರದಲ್ಲಿ ಏನಿರಬಹುದು.? ಎಂದು ನಿಮಗೇನಾದರೂ ಕುತೂಹಲ ಇದ್ದರೆ ತಪ್ಪದೆ ಇಂದಿನ ಎಪಿಸೋಡ್ ನೋಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply