Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

Property Loan : ನಮಸ್ಕಾರ ಸ್ನೇಹಿತರೇ, ಆಸ್ತಿ ಅಡವಿಟ್ಟು ಯಾವುದೇ ಆಸ್ತಿ ಅಡವಿಟ್ಟು ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಎಲ್ಲರಿಗೂ ಹೊಸ ರೂಲ್ಸ್. ಕೆಲವು ಸಂದರ್ಭಗಳಲ್ಲಿ ಸಾಲ ಪಡೆದುಕೊಂಡಿದ್ದರೆ ಅದು ಸಣ್ಣ ಮೊತ್ತದ ಸಾಲವಾಗಿರಬಹುದು ಅಥವಾ ದೊಡ್ಡ ಮೊತ್ತದ ಸಾಲವಾಗಿರಬಹುದು, ವೈಯಕ್ತಿಕ ಸಾಲವಾಗಿರಬಹುದು ಅಥವಾ ಗೃಹ ಸಾಲವಾಗಿರಬಹುದು, ಗ್ರಾಹಕರು ಆಯಾ ಬ್ಯಾಂಕುಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭಗಳಲ್ಲಿ ಸಾಲ ತೆಗೆದುಕೊಳ್ಳುತ್ತಾರೆ.

Whatsapp Group Join
Telegram channel Join

ಅದು ಸಣ್ಣ ಮೊತ್ತದ ಸಾಲವಾಗಿರಬಹುದು ಅಥವಾ ದೊಡ್ಡ ಮೊತ್ತದ ಸಾಲವಾಗಿರಬಹುದು. ಪರ್ಸನಲ್ ಸಾಲವಾಗಿರಬಹುದು ಅಥವಾ ಗೃಹ ಸಾಲವಾಗಿರಬಹುದು, ಬ್ಯಾಂಕ್ನಿಂದ ಸಾಲ ತೆಗೆದುಕೊಂಡ ಮೇಲೆ ಅದನ್ನ ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಇನ್ನು ಹೀಗೆ ಮರುಪಾವತಿ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದ್ರೆ ಈ ಸಂದರ್ಭಗಳಲ್ಲಿ ಬ್ಯಾಂಕುಗಳು ಕೂಡ ಕೆಲವು ಕರ್ತವ್ಯಗಳನ್ನ ನಿರ್ವಹಿಸಬೇಕಾಗುತ್ತದೆ.

ಇದನ್ನೂ ಕೂಡ ಓದಿ : PM-Kisan Samman Nidhi : ರೈತರಿಗೆ ಗುಡ್ ನ್ಯೂಸ್.! ಪಿಎಂ ಕಿಸಾನ್ 15ನೇ ಕಂತು ಇನ್ನು ಮೂರು ದಿನಗಳಲ್ಲಿ ರೈತರ ಖಾತೆಗೆ ಜಮಾ.!

Whatsapp Group Join
Telegram channel Join

ಇದಲ್ಲದೆ ಹೋದಲ್ಲಿ ಬ್ಯಾಂಕುಗಳು ಸಹ ದಂಡವನ್ನು ಪಾವತಿಸಬೇಕಾಗುತ್ತದೆ. ಸಾಲ ತೆಗೆದುಕೊಳ್ಳುವಾಗ ಗ್ರಾಹಕರು ಗ್ಯಾರಂಟಿಯನ್ನು ಕೊಡಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದೇ ಸಾಲವನ್ನು ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆದುಕೊಳ್ಳುವುದಿದ್ದರೆ ಅದಕ್ಕೆ ಗ್ಯಾರಂಟಿಯಾಗಿ ಸ್ಥಿರಾಸ್ತಿ ಅಥವಾ ಚರಾಸ್ತಿ ಪತ್ರವನ್ನು ಬ್ಯಾಂಕ್ ನಲ್ಲಿ ಅಡಮಾನವಿಟ್ಟು ಎಷ್ಟು ಮೊತ್ತದ ಸಾಲ ತೆಗೆದುಕೊಳ್ಳುತ್ತಾರೆಯೋ, ಅದಕ್ಕೆ ಸರಿ ಹೊಂದುವಂತೆ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

ಬ್ಯಾಂಕ್ ಗಳು ಸಾಲ ಮರುಪಾವತಿಯ ನಂತರ ಮೂಲ ದಾಖಲಾತಿಗಳನ್ನ ಹಿಂತಿರುಗಿಸಬೇಕು. ಸರಿಯಾದ ಸಮಯಕ್ಕೆ ಗ್ರಾಹಕರು ಸಾಲವನ್ನು ಮರುಪಾವತಿ ಮಾಡಿದರೆ, ಅವರು ಅಡವಿಟ್ಟ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು. ಆದರೆ ಅದೆಷ್ಟೇ ಸಂದರ್ಭದಲ್ಲಿ ಬ್ಯಾಂಕ್ ಗಳು ಗ್ರಾಹಕರ ಸಾಲ ತೀರಿಸಿದ ನಂತರವು ಅವರಿಗೆ ಅವರ ಅಡಮಾನ ಪತ್ರವನ್ನು ಹಿಂತಿರುಗಿಸದ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಗ್ರಾಹಕರು ಕೂಡ ದೂರನ್ನು ಸಲ್ಲಿಸಿದ್ದಾರೆ.

ಇದನ್ನೂ ಕೂಡ ಓದಿ : Drought Relief : 2023-24ನೇ ಸಾಲಿನ ರಾಜ್ಯದ ರೈತರ ಬರ ಪರಿಹಾರ ಹಣ ಬಿಡುಗಡೆ / ಹಣ ಪಡೆಯಲು ಈ ದಾಖಲೆ ಇದ್ದರೆ ಸಾಕು

ಅಡಮಾನಪತ್ರವನ್ನು ಕೇವಲ 30 ದಿನಗಳ ಒಳಗೆ ಹಿಂದಿರುಗಿಸಬೇಕಂತೆ

ಡಿಸೆಂಬರ್ 1, 2023 ರಿಂದ ಆರ್ ಬಿಐ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಪ್ರಕಾರ ಗ್ರಾಹಕರು ಸಾಲ ತೀರಿಸಿದ 30 ದಿನಗಳ ಒಳಗೆ ಅವರು ಅಡವಿಟ್ಟ ದಾಖಲಾತಿ ಪತ್ರಗಳನ್ನು ಅವರಿಗೆ ಹಿಂತಿರುಗಿಸಬೇಕು. ಒಂದು ವೇಳೆ ಬ್ಯಾಂಕ್ ಹಿಂದಿರುಗಿಸಿದೇ ಇದ್ದಲ್ಲಿ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ.

ದಿನಕ್ಕೆ 5,000/- ರೂಪಾಯಿಗಳ ದಂಡ

ಬ್ಯಾಂಕ್ ಗ್ರಾಹಕರಿಂದ ಸಾಲ ಪತ್ರವನ್ನು ಅಡವಿಟ್ಟುಕೊಂಡಿದ್ದರೆ ಸಾಲ ತೀರಿದ 30 ದಿನಗಳೊಳಗೆ, ಅಂದರೆ ಒಂದು ತಿಂಗಳುಗಳಲ್ಲಿ ಅಡಮಾನ ಪತ್ರವನ್ನು ಹಿಂತಿರುಗಿಸಬೇಕು. ಒಂದುವೇಳೆ ಒಂದು ತಿಂಗಳಾದರೂ ಅಡಮಾನಪತ್ರವನ್ನ ಹಿಂತಿರುಗಿಸದೇ ಇದ್ದಲ್ಲಿ, ಅದಕ್ಕಾಗಿ ಗ್ರಾಹಕರು ಬ್ಯಾಂಕ್ ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾದರೆ, ಅಡಮಾನ ಪತ್ರ ಕೊಡುವವರೆಗೂ ಪ್ರತೀದಿನ ಸಂಬಂಧ ಪಟ್ಟ ಗ್ರಾಹಕರಿಗೆ 5,000/- ದಂಡವನ್ನು ನೀಡಬೇಕು ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಕೂಡ ಓದಿ : Kisan Credit Card : ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ / 3ಲಕ್ಷ ಹಣ ಸಹಾಯಧನ ಘೋಷಣೆ.!

ಒಟ್ಟು 60 ದಿನಗಳೊಳಗೆ ದಾಖಲಾತಿ ಪತ್ರವು ಗ್ರಾಹಕರ ಕೈ ಸೇರಬೇಕು. ಇಷ್ಟಾಗಿಯೂ ಗ್ರಾಹಕರಿಗೆ ಅವರ ಆಸ್ತಿಪತ್ರ ಬ್ಯಾಂಕ್ ನಲ್ಲಿ ಹಿಂತಿರುಗಿಸದೇ ಇದ್ದಲ್ಲಿ ಗ್ರಾಹಕರು ಅದನ್ನ ಆರ್.ಬಿ.ಐ ಗಮನಕ್ಕೆ ತಂದರೆ, ಆರ್ ಬಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು, ಸಣ್ಣಪುಟ್ಟ ಹಣಕಾಸು ಸಂಸ್ಥೆಗಳು, ಎಲ್ಲ ಪ್ರಾದೇಶಿಕ ಬ್ಯಾಂಕುಗಳು, ಪ್ರಾಥಮಿಕ ಸಹಕಾರಿ ಸಂಘಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳು, ಆಸ್ತಿ ಪುನರ್ ನಿರ್ಮಾಣ ಸಂಸ್ಥೆಗಳು ಒಳಗೊಂಡಂತೆ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳಿಗೂ ಕೂಡ ಇದು ಅನ್ವಯವಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply