Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!

Drought Relief : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು, ಬರಪೀಡಿತ ಜಿಲ್ಲೆಗಳ ಹಾಗು ತಾಲೂಕುಗಳ ರೈತರಿಗೆ ಮುಂದಿನ ಹದಿನೈದು ದಿನಗಳ ಒಳಗಾಗಿ ಈ ಕೆಲಸ ಮಾಡಿಕೊಳ್ಳಲು ಕಡ್ಡಾಯವೆಂದು ಸೂಚಿಸಿದ್ದಾರೆ.

Whatsapp Group Join
Telegram channel Join

ಕರ್ನಾಟಕ ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು, ಬರ ಪೀಡಿತ ಜಿಲ್ಲೆಗಳ ರೈತರು ಹಾಗು ಆಯಾ ಬರ ಪೀಡಿತ ತಾಲೂಕುಗಳಿಗೆ ಸೇರಿದಂತಹ ಪ್ರತಿಯೊಬ್ಬ ರೈತರಿಗೂ ಕೂಡ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು. ಇಲ್ಲದಿದ್ದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ.

ಇದನ್ನೂ ಕೂಡ ಓದಿ : Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

Whatsapp Group Join
Telegram channel Join

ಹಾಗಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಸರ್ಕಾರದಿಂದ ಬರ ಪರಿಹಾರದ ಹಣ ಜಮೆ ಮಾಡಲು ನಿರ್ಧರಿಸಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಾಗು ಕಂದಾಯ ನಿರೀಕ್ಷಕರಿಗೂ ಸಹ ರಾಜ್ಯ ಸರ್ಕಾರದಿಂದ ಅಧೀಕೃತ ಆದೇಶವನ್ನ ಹೊರಡಿಸಲಾಗಿದೆ. ರೈತರಿಗೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಿಸಿಕೊಳ್ಳಲು ಈ ಅಧಿಕಾರಿಗಳಿಗೆ ಸೂಚನೆಯನ್ನ ನೀಡಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ರೈತರು ಸಹ ಮುಂದಿನ ಹದಿನೈದು ದಿನಗಳ ಒಳಗಾಗಿ ಕಡ್ಡಾಯವಾಗಿ ರೈತರು ಈ ಕೆಲಸ ಮಾಡಿದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗಳಿಗೆ ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ಜಮಾ ಆಗುತ್ತದೆ.

ಇದನ್ನೂ ಕೂಡ ಓದಿ : Kisan Credit Card : ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ / 3ಲಕ್ಷ ಹಣ ಸಹಾಯಧನ ಘೋಷಣೆ.!

ಬರ ಪರಿಹಾರದ ಹಣ ಪಡೆಯಲು ಏನು ಮಾಡಬೇಕು.?

ಬರ ಪರಿಹಾರ ಪಡೆಯಲು 15 ದಿನದಲ್ಲಿ ಈ ಮಾಹಿತಿ ಭರ್ತಿ ಕಡ್ಡಾಯಗೊಳಿಸಲಾಗಿದೆ. ಹೌದು, Farmer Registration and Unified beneficiary InformaTion System (FRUITS) ನಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿಯ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸುದ್ಧಿಗಾರರ ಜೊತೆ ಮಾತನಾಡಿದ ಸಚಿವರು, ರೈತರಿಗೆ ಪರಿಹಾರ ಪಾವತಿ ಮಾಡುವ ವೇಳೆ Farmer Registration and Unified beneficiary InformaTion System (FRUITS)ನಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿಯ ಆಧಾರದ ಮೇಲೆ ಬರ ಪರಿಹಾರ ಹಣ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

ಇದನ್ನೂ ಕೂಡ ಓದಿ : Pension Scheme : ವೃದ್ಧರಿಗೆ, ಅಂಗವಿಕಲರಿಗೆ, ವಿಧವಾ ಮಹಿಳೆಯರಿಗೆ ಹಾಗು ಹಿರಿಯ ನಾಗರಿಕರಿಗಾಗಿ ಹೊಸ ನಿಯಮ

ಹೀಗಾಗಿ ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗಾಗಿ Farmer Registration and Unified beneficiary InformaTion System (FRUITS) ದತ್ತಾಂಶದಲ್ಲಿ ಭರ್ತಿ ಮಾಡಿಸಿ. ಅಧಿಕಾರಿಗಳ ಅಕ್ರಮದ ಹಿನ್ನೆಲೆ ನೈಜ ಫಲಾನುಭವಿಗಳಿಗೆ ಪರಿಹಾರದ ತಲುಪುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಮೀನಿನ ಮಾಹಿತಿ ಹಂಚಿಕೊಳ್ಳಿ. ಒಂದು ತಿಂಗಳ ಒಳಗೆ ಇದನ್ನ ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply