Darshan Thoogudeepa : ಪತ್ನಿಯನ್ನು ಬಿಟ್ಟು ಇದ್ದಕ್ಕಿದ್ದಂತೆ ಮಗನನ್ನು ಕರೆದುಕೊಂಡು ನಟ ದರ್ಶನ್ ಹೋಗಿದ್ದೆಲ್ಲಿಗೆ.? ವಿನೀಶ್ ಗೆ ಏನಾಯ್ತು.?

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಇದೀಗ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಅವರ ಮಗ ವಿನೀಶ್ ಆಟವಾಡುವ ಸಮಯದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದರು. ಹಾಗಾಗಿ ದರ್ಶನ್ ಅವರು ಹೆಚ್ಚು ಸಮಯ ಪತ್ನಿ ಹಾಗು ಮಗನ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದೀಗ ದರ್ಶನ್ ಅವರು ಇದ್ದಕ್ಕಿದ್ದಂತೆ ಪತ್ನಿ ವಿಜಯಲಕ್ಷ್ಮಿ ಅವರನ್ನ ಬಿಟ್ಟು ಮಗ ವಿನೀಶ್ ಅವರನ್ನ ಕರೆದುಕೊಂಡು ಎಲ್ಲಿಗೆ ಹೋಗಿದ್ದಾರೆ ಗೊತ್ತಾ.?

Actor Darshan went to where he left his wife and suddenly took his son

ಇದನ್ನೂ ಕೂಡ ಓದಿ : RajaMarthanda : ಕೋಪ ಮರೆತು ಧ್ರುವ ಸರ್ಜಾ ಬೆಂಬಲಕ್ಕೆ ಬಂದ ಡಿಬಾಸ್ ದರ್ಶನ್.! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡಿಬಾಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊನ್ನೆ ತಾನೇ ಮಗನ ಜೊತೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಮಗ ವಿನೀಶ್ ಗೆ ಸ್ವಲ್ಪ ಗಾಯವಾಗಿದ್ದ ಕಾರಣ ಸ್ವತಃ ತಾವೇ ಮುಂದೆ ನಿಂತು ಚಿಕಿತ್ಸೆ ಕೊಡಿಸಿದ್ದರು ಡಿಬಾಸ್ ದರ್ಶನ್. ಇದೀಗ ಮಗ ವಿನೀಶ್ ಸಂಪೂರ್ಣವಾಗಿ ಗುಣಮುಖವಾಗಿದ್ದು, ತಂದೆಯ ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ದರ್ಶನ್ ಅವರು ತಮ್ಮ ಸ್ನೇಹಿತರನ್ನ ಕರೆದುಕೊಂಡು ರೋಡ್ ಟ್ರಿಪ್ ಮಾಡಿದ್ದಾರೆ. ನಟ ದರ್ಶನ್ ಹಾಗು ಸ್ನೇಹಿತರು ಮಡಿಕೇರಿ, ವಿರಾಜಪೇಟೆಯಲ್ಲಿ ಆಫ್ ರೋಡ್ ಟ್ರಿಪ್ ಮಾಡಿದ್ದಾರೆ.

ಕಾಡುಮೇಡುಗಳಲ್ಲಿ ಕಾರುಗಳಲ್ಲಿ ಹತ್ತಿ ಇಳಿದು ಸಾಹಸ ಮೆರೆದಿದ್ದಾರೆ. ಸ್ನೇಹಿತರ ಜೊತೆ ಮಗ ವಿನೀಶ್ ಅವರನ್ನು ಕೂಡ ನಟ ದರ್ಶನ್ ಕರೆದುಕೊಂಡು ಹೋಗಿದ್ದು, ಮಗನನ್ನು ತುಂಬಾನೇ ಕೇರ್ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ದರ್ಶನ್ ಅಭಿಮನಾನಿಗಳು ತಂದೆಯಂತೆಯೇ ಮಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

ಬಿಡದಂತೆ ಸುರಿಯುತ್ತಿರುವ ಮಳೆಯಲ್ಲಿ ದರ್ಶನ್ ಸ್ನೇಹಿತರೊಂದಿಗೆ ಜೀಪ್ಗಳಲ್ಲಿ ಆಫ್ ರೋಡ್ ಟ್ರಿಪ್ ನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಜಿತೆಗೆ ಪುತ್ರ ವಿನೀಶ್ ಕೂಡ ಇದ್ದು, ದರ್ಶನ್ ತಮ್ಮ ಕಾರಿನಲ್ಲಿಯೇ ಮಗನನ್ನು ಕೂರಿಸಿಕೊಂಡು ಅರಣ್ಯದಲ್ಲಿ ಕಾಣುವ ಹಲವು ಬಗೆಯ ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ಸಾಕಷ್ಟು ತಿಳಿಸಿ ಹೇಳಿದ್ದಾರೆ. ಮಗನಿಗೂ ಕೂಡ ದರ್ಶನ್ ಅವರಂತೆಯೇ ಪ್ರಾಣಿಗಳೆಂದರೆ ಅಚ್ಚುಮೆಚ್ಚು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply

Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.?
Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.?