Darshan Thoogudeepa : ಧ್ರುವ ಸರ್ಜಾ ಮಾತಿಗೆ ವಿನೋದ್ ಪ್ರಭಾಕರ್ ತಿರುಗೇಟು ಕೊಟ್ಟಿದ್ದು ಹೇಗೆ.? ಶಾಕ್ ಆದ ಡಿಬಾಸ್.!

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನುವ ವಿಚಾರ ಹಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾವೇರಿ ಹೋರಾಟ ಸಂದರ್ಭದಲ್ಲಿ ಧ್ರುವ ಸರ್ಜಾ ಹತ್ತಿರದಲ್ಲಿಯೇ ಕುಳಿತಿಕೊಂಡಿದ್ದರೂ, ಇಬ್ಬರೂ ಮಾತನಾಡಲಿಲ್ಲ ಎನ್ನುವುದು ಇದಕ್ಕೆ ಸಾಕ್ಷಿಯಾಗಿತ್ತು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Darshan Thoogudeepa : ಪತ್ನಿಯನ್ನು ಬಿಟ್ಟು ಇದ್ದಕ್ಕಿದ್ದಂತೆ ಮಗನನ್ನು ಕರೆದುಕೊಂಡು ನಟ ದರ್ಶನ್ ಹೋಗಿದ್ದೆಲ್ಲಿಗೆ.? ವಿನೀಶ್ ಗೆ ಏನಾಯ್ತು.?

ಧ್ರುವ ಸರ್ಜಾ ಹಾಗು ದರ್ಶನ್ ಅಭಿಮಾನಿಗಳು ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಆರೋಪ-ಪ್ರತ್ಯಾರೋಪವನ್ನು ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಧ್ರುವ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ, ದರ್ಶನ್ ಆಪ್ತ, ನಟ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ. ದರ್ಶನ್-ಧ್ರುವ ಮನಸ್ತಾಪದ ಕುರಿತು ವಿನೋದ್ ಪ್ರಭಾಕರ್ ಮಾತನಾಡಿ, ಧ್ರುವ ಏನಂದ್ರು ಅಂತ ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ ಒಂದು ಮಾತು ಹೇಳುವುದಕ್ಕೆ ಇಷ್ಟಪಡ್ತೀನಿ… ಇಡೀ ಪ್ರಪಂಚನೇ ಎದುರು ಬಂದರೂ ಸರಿ, ಅಣ್ಣ ದರ್ಶನ್ ಗೆ ಒಬ್ಬ ತಮ್ಮನಾಗಿ ಸದಾ ಇರುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಎರಡನೇ ಕಂತಿನ ₹೪,೦೦೦/- ರೂಪಾಯಿ ಹಣ ಬಿಡುಗಡೆ.? ನೀವು ಈ ಕೆಲಸ ಮಾಡುವುದು ಕಡ್ಡಾಯ.!

ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಧ್ರುವ, ದರ್ಶನ್ ನಮ್ಮ ಸೀನಿಯರ್ ಆಕ್ಟರ್, ಅವರ ಪ್ರೆಸೆಂಟ್ಸ್, ಅಬ್ ಸೆಂಟ್ಸ್ ನಲ್ಲೂ ಗೌರವ ಇದೆ. ಆದರೆ ದರ್ಶನ್ ಅವರಿಗೆ ಒಂದೆರೆಡು ಪ್ರಶ್ನೆ ಕೇಳಬೇಕಿದೆ. ಆ ಪ್ರಶ್ನೆಗಳನ್ನ ಕ್ಲಿಯರ್ ಮಾಡಿಕೊಳ್ಳದೇ, ಮನಸ್ಸಲ್ಲೊಂದು, ಎದುರಿನಲ್ಲೊಂದು ಮಾತಾಡುವುದಕ್ಕೆ ಆಗಲ್ಲ. ಮನಸ್ಸಿನಲ್ಲೊಂದು ಇಟ್ಟುಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗಿಲ್ಲ.

ಇದನ್ನೂ ಕೂಡ ಓದಿ : Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!

ಆರ್ಟಿಫಿಷಿಯಲ್ ಆಗಿ ಫೇಕ್ ಆಗಿರುವುದಕ್ಕೆ ನನಗೆ ಬರಲ್ಲ. ನನಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆಯಲ್ವಾ.? ದರ್ಶನ್ ಸೀನಿಯರ್ ಆಕ್ಟರ್. ಅವರ ಬಗ್ಗೆ ಗೌರವ ಇದ್ದೇ ಇರುತ್ತೆ ಎಂದು ಹೇಳುವ ಮೂಲಕ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ. ಆದರೆ ವಿನೋದ್ ಪ್ರಭಾಕರ್ ಈ ಮಾತು ಯಾಕೆ ಹೇಳಿದ್ರು.? ದರ್ಶನ್-ಧ್ರುವ ಸರ್ಜಾ ಮಧ್ಯೆ ವಿನೋದ್ ಪ್ರಭಾಕರ್ ಬಂದಿದ್ದೇಕೆ.? ಎನ್ನುವುದು ತಿಳಿಯಬೇಕಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply