ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು? । Who designed the national flag?

ದೇಶಾದ್ಯಂತ ಇಂದು ರಾರಾಜಿಸುತ್ತಿರುವ ದೇಶದ ರಾಷ್ಟ್ರದ ಧ್ವಜದ ವಿನ್ಯಾಸ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ “ಪಿಂಗಾಳಿ ವೆಂಕಯ್ಯ”. 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ(ಈಗಿನ) ಮಚಿಲಿಪಟ್ಟಣಂ ಸಮೀಪದ ಭಟ್ಲಾಪೆನುಮರ್ರು ಎಂಬಲ್ಲಿ ಪಿಂಗಾಳಿ ಜನಿಸಿದ್ದರು.

Who designed the national flag?

ಹಿಂದೂ ಪತ್ರಿಕೆಯಲ್ಲಿ ಅಂದು ಪ್ರಕಟವಾದ ವರದಿ ಪ್ರಕಾರ, ಪಿಂಗಾಳಿ ವೆಂಕಯ್ಯ ಅವರೊಬ್ಬ ಭೂ ತಜ್ಞರಾಗಿದ್ದರು, ಕೃಷಿಕ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು. ಆದರೆ 1963ರಲ್ಲಿ ಪಿಂಗಾಳಿ ಬಡತನದಲ್ಲಿಯೇ ಇಹಲೋಕ ತ್ಯಜಿಸಿದ್ದರು. 2009ರಲ್ಲಿ ಕೇಂದ್ರ ಸರ್ಕಾರ ಗೌರವಾರ್ಥವಾಗಿ ಅಂಚೆಚೀಟಿ ಬಿಡುಗಡೆಗೊಳಿಸಿತ್ತು!

ಇದನ್ನೂ ಕೂಡ ಓದಿ : Ramya | ರಮ್ಯಾ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Ramya Hit And Flop Movies

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಘೋಷಿತ ನೂರಾರು ರಾಷ್ಟ್ರಧ್ವಜಗಳನ್ನು ಬಳಸಲಾಗಿತ್ತು. ಕೊನೆಗೆ ಸ್ಪಷ್ಟ ಹಾಗೂ ಅಧಿಕೃತ ವಿನ್ಯಾಸದ ಧ್ವಜ 1947ರಲ್ಲಿ ರೂಪತಳೆದಿತ್ತು. ಪಿಂಗಾಳಿ ವೆಂಕಯ್ಯ ಅವರ ವಿನ್ಯಾಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ 1947ರಲ್ಲಿ ಅಂಗೀಕರಿಸಲಾಗಿತ್ತು.

Who designed the national flag?

ಒಂದು ವರದಿ ಪ್ರಕಾರ, ಭಾರತದ ಮೊದಲ ರಾಷ್ಟ್ರಧ್ವಜ ಹಸಿರು, ಹಳದಿ ಮತ್ತು ಕೆಂಪು ಪಟ್ಟಿಯನ್ನು ಹೊಂದಿತ್ತು. ಈ ಧ್ವಜವನ್ನು 1906ರ ಆಗಸ್ಟ್ 7ರಂದು ಹಾರಿಸಲಾಗಿತ್ತು. ಇದೊಂದು ಧಾರ್ಮಿಕ ಸಂಕೇತದ ಧ್ವಜವಾಗಿದ್ದು, ಇದರಲ್ಲಿ ಎಂಟು ಹೂಗಳು ಮತ್ತು ಅದರ ಮೇಲೆ ವಂದೇ ಮಾತರಂ ಅನ್ನು ಬರೆಯಲಾಗಿತ್ತು. ಹೆಮ್ಮೆಯ ವಿಚಾರ ಏನೆಂದರೆ ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವಾರ್ ನಲ್ಲಿ (ಆಗಸ್ಟ್ 15, 2020) ಭಾರತೀಯ ತ್ರಿವರ್ಣ ಧ್ವಜ ಹಾರಿಸಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada)’ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply