Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ 

ಈತ ಸುಮಾರು 7 ಸಾವಿರ ಕೋಟಿಗೆ ಅಧಿಪತಿಯಾಗಿರುವ (Savji Dholakia) ಉದ್ಯಮಿಯ ಮಗ. ಇತನ ತಂದೆ ವಜ್ರಗಳ ವ್ಯಾಪಾರಿ. ಆದರೆ ಈ ಹುಡುಗ ಮಾತ್ರ ಕೇರಳದ ಕೊಚ್ಚಿಯ ಒಂದು ಬೇಕರಿಯಲ್ಲಿ ಕೆಲಸಮಾಡುತ್ತಿದ್ದ. ಕಾರಣ ಮಾತ್ರ ತುಂಬಾ ಇಂಟೆರೆಸ್ಟಿಂಗ್. ನಾನು ಯಾವುದೋ ಸಿನಿಮಾದ ಸ್ಟೋರಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. ಯಾಕೆಂದರೆ, ಇದು ನಿಜವಾಗ್ಲೂ ನಡೆದಿರುವುದು. ಈ ಹುಡುಗನ ಹೆಸರು ದೃವ್ಯ ದೊಲಾಕಿಯಾ, ವಯಸ್ಸು 21 ವರ್ಷ, ಅಮೇರಿಕಾದಲ್ಲಿ ಎಂಬಿಎ ಮುಗಿಸಿಕೊಂಡು ಬಂದಿದ್ದಾನೆ. ಈತನ ತಂದೆ ಸಾವೂಜಿ ದೊಲಾಕಿಯ, ಪ್ರತಿ ವರ್ಷ ತನ್ನ ಸಿಬ್ಬಂದಿಗೆ 400 ಅಪಾರ್ಟ್ಮೆಂಟ್ ಹಾಗು ಸಾವಿರ ಕಾರುಗಳನ್ನು ಕೊಟ್ಟು ದೇಶದಲ್ಲಿ ಪ್ರಸಿದ್ದಿಯಾದ ಉದ್ಯಮಿ. ಹರೇಕೃಷ್ಣ ಡೈಮಂಡ್ ಕಂಪನಿಯ ಓನರ್. ಇವರ ಒಟ್ಟು ಆಸ್ತಿ 7000 ಕೋಟಿ.

Savji Dholakia | druvya Dholakia
Savji Dholakia | druvya Dholakia

ಇವರಿಗೆ ಸೂರತ್ ನಲ್ಲಿ 11 ಅಂತಸ್ತಿನ ಮನೆ ಇದೆ. ಸಾವೂಜಿ ದೊಲಾಕಿಯ ತುಂಬ ಕಷ್ಟಪಟ್ಟು ಕಂಪನಿ ಯನ್ನು ಬೆಳಸಿದರು ಹಾಗೇ ವಯಸ್ಸಿನ ಕಾರಣ ಕಂಪನಿಯ ಜವಾಬ್ದಾರಿಯನ್ನು ಒಬ್ಬನೇ ಮಗ ದೃವ್ಯ ದೊಲಾಕಿಯಾಗೆ ಕೊಡಲುಬಯಸಿದ್ದರು ಆದರೆ 11 ಅಂತಸ್ತಿನಲ್ಲಿ ಬೆಳೆದ ಮಗನಿಗೆ ಹಣದ ಬೆಲೆ ಗೊತ್ತಿಲ್ಲ ನಾನು ಪಟ್ಟ ಕಷ್ಟದ ಬಗ್ಗೆ ಅರಿವಿಲ್ಲ ಎಂದು ಭಾವಿಸಿದ ತಂದೆ ಒಂದು ಪ್ಲಾನ್ ಮಾಡಿದರು. ಮಗ ದ್ರವ್ಯನ ಕೈ ಗೆ 7000 ಕೊಟ್ಟ ತಂದೆ, ನೀನು ಎಲ್ಲಾದರೂ ಹೋಗಿ ಸಾಮಾನ್ಯ ವ್ಯಕ್ತಿಯಂತೆ ದುಡಿದು ಬಾ ಎಂದು ಹೇಳಿ 4 ಷರತ್ತನ್ನು ಹಾಕಿದರು.

WhatsApp Group Join Now
Telegram Group Join Now

ಇದನ್ನೂ ಓದಿ :- ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

ನೀನು ಕಷ್ಟ ಪಟ್ಟು ದುಡಿದು ಹಣ ಸಂಪಾದಿಸ ಬೇಕು ನನ್ನ ಹೆಸರು ಎಲ್ಲೂ ಬಳಸಬಾರದು. ಮೊಬೈಲ್ ಉಪಯೋಗಿಸಬಾರದು, ಒಂದೇ ಸ್ಥಳದಲ್ಲಿ ವಾರಕ್ಕಿಂತ ಹೆಚ್ಚು ದಿನ ಕೆಲಸಮಾಡಬಾರದು. ನಿನ್ನ ತಾಯಿಯ ಹಾಗು ಮೂವರು ಸಹೋದರಿಯರ ಜೊತೆ ಮಾತನಾಡಬಾರದು. ನಿನಗೆ ತುಂಬಾ ಎಮರ್ಜೆನ್ಸಿ ಆದರೆ ಯಾರದಾದ್ರೂ ಮೊಬೈಲ್ ಪಡೆದು ನನಗೆ ಮಿಸ್ ಕಾಲ್ ಕೊಡು. ನಾನೇ ಕಾಲ್ ಮಾಡುತ್ತೇನೆ ಎಂದು ತಂದೆ ಷರತ್ತು ವಿಧಿಸಿದರು.

WhatsApp Group Join Now
Telegram Group Join Now
Savji Dholakia | druvya Dholakia
Savji Dholakia | druvya Dholakia

ಇದನ್ನೇ ಚಾಲೆಂಜ್ ಆಗಿ ತೆಗುದುಕೊಂಡ ಮಗ ದೃವ್ಯ ದೊಲಾಕಿಯಾ ತಲುಪಿದ್ದು ಕೇರಳದ ಕೊಚ್ಚಿ ನಗರಕ್ಕೆ. ಕೊಚ್ಚಿಗೆ ಬರುವ ಹೊತ್ತಿಗೆ ತಂದೆ ಕೊಟ್ಟಿದ್ದ 7 ಸಾವಿರ ರೂಪಾಯಿ ಖಾಲಿ ಆಗಿತ್ತು. ದೃವ್ಯ ದೊಲಾಕಿಯಾಗೆ ಕೇರಳದ ಭಾಷೆ ಬರಲ್ಲ. 60 ಸ್ಥಳಗಳಲ್ಲಿ ಕೆಲಸ ಕೇಳಿದರೂ ಭಾಷೆ ಬರಲ್ಲ ಎಂದು ಕೆಲಸ ಕೊಡಲಿಲ್ಲ. ಒಂದು ವಾರ ಕೆಲಸ ಇಲ್ಲದೇ ಬಸ್ ಸ್ಟಾಂಡ್ ನಲ್ಲಿ ಮಲಗಿದ್ದ ದೃವ್ಯಗೆ ಕೊನೆಗೆ ಬೇಕರಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಒಂದು ವಾರ ಕೆಲಸ ಮಾಡಿದ ದೃವ್ಯ ನಂತರ ಅಡಿಡಾಸ್ ಶೋರೂಮ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಆದರೆ ಸರಿಯಾಗಿ ಸ್ಮೈಲ್ ಕೊಡಲಿಲ್ಲ ಕಾರಣಕ್ಕೆ 2 ದಿನದಲ್ಲೇ ಕೆಲಸದಿಂದ ತಗೆದು ಹಾಕಿದರು.

ಇದನ್ನೂ ಓದಿ :- ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

WhatsApp Group Join Now
Telegram Group Join Now

ನಂತರ ಚಪ್ಪಲಿ ಅಂಗಡಿ, ಕಾಲ್ ಸೆಂಟರ್, ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ತಂದೆಯ ಅಸಿಸ್ಟೆಂಟ್ ಬಂದು ವಾಪಾಸ್ ಬರುವಂತೆ ದೃವ್ಯಗೆ ಸೂಚಿಸಿದರು. ನಂತರ ಈತನ ಬಗ್ಗೆ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಸುದ್ದಿ ಬಂತು . ದೃವ್ಯನಿಂದ ಕೆಲಸ ಮಾಡಿಸಿಕೊಂಡವರು ಹಾಗು ಆತನನ್ನು ಬೈದವರು ಒಂದು ಸಲ ಶಾಕ್ ಆದರು. ತಂದೆಯ ಬಳಿ ಹೋದ ದೃವ್ಯ ನನಗೆ ನಿಜವಾದ ಪ್ರಪಂಚ ಗೊತ್ತಾಯಿತು ಎಂದು ಹೇಳಿ ತಂದೆಗೆ ಧನ್ಯವಾದ ತಿಳಿಸಿದನು. ತಾನು ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಹಣದ ಬೆಲೆ ಗೊತ್ತಿಲ್ಲದೇ ಮಗ ಮಜಾ ಮಾಡೋದನ್ನ ತಪ್ಪಿಸಲು ತಂದೆ ಮಾಡಿದ ಪ್ಲಾನ್ ಹೇಗಿತ್ತು.?

ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply