Varthur Santhosh : ಬಿಗ್ ಶಾಕ್.. ನೋಟೀಸ್.! ವರ್ತೂರು ಸಂತೋಷ್ ಆಪ್ತರಿಗೆ ಅರಣ್ಯ ಇಲಾಖೆ ನೋಟಿಸ್

Varthur Santhosh : ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನುಅರಣ್ಯ ಇಲಾಖೆ ಅಧಿಕಾರಿಗಳು ಬಿಗ್ ಬಾಸ್ ಮನೆಯಿಂದಲೇ ಬಂಧಿಸಿದ್ದರು. ಇದೀಗ ವರ್ತೂರು ಸಂತೋಷ್ ಆಪ್ತರಿಗೆ ನೋಟೀಸ್ ನೀಡಲಾಗಿದೆ. ಈ ಪ್ರಕರಣದಲ್ಲಿ ಮತ್ತಿಬ್ಬರಿಗೆ ಸಂಕಷ್ಟ ಎದುರಾಗಿದೆ.

Whatsapp Group Join
Telegram channel Join

ಸಂತೋಷ ಅವರ ಆಪ್ತ ರಂಜಿತ್ ಹಾಗು ಹೊಸೂರು ಮೂಲದ ಚಿನ್ನದ ಅಂಗಡಿ ಮಾಲಿಕನಿಗೆ ಅರಣ್ಯ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ. ತನಿಖೆ ವೇಳೆ ಲಾಕೆಟ್ ಕುರಿತು ವಾರೂರು ಸಂತೋಷ್ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಹುಲಿ ಉಗುರು ಮೂಲ ಕೆದಕುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ರಾಜ್ಯದ ಹಲವು ಚಿನ್ನದ ಅಂಗಡಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ.

ಇದನ್ನೂ ಕೂಡ ಓದಿ : Varthur Santhosh : ಹುಲಿ ಉಗುರು ಧರಿಸಿದ್ದ ನಟ ದರ್ಶನ್ ಹಾಗು ವಿನಯ್ ಗುರೂಜಿ ಅರೆಸ್ಟ್ ಆಗ್ತಾರಾ.? ಶಾಕ್ ಆದ ಅಭಿಮಾನಿಗಳು

Whatsapp Group Join
Telegram channel Join

ರಾಜ್ಯದಲ್ಲಿ ಪ್ರಾಣಿಗಳ ಚರ್ಮ, ಕೂದಲು, ದೇಹ ಬಳಸಿ ತಯಾರು ಮಾಡಿದ ಆಭರಣಗಳ ಮಾರಾಟ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಇದು ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಆಭರಣ ಮಳಿಗೆಯಲ್ಲಿ ಈ ರೀತಿ ಆಭರಣ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನೋಟೀಸ್ ನೀಡಲಾಗಿದೆ. ಆದರೂ ಅಚ್ಚರಿ ಎನ್ನುವಂತೆ ಈ ತನಕ ಈ ರೀತಿಯ ಆಭರಣ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ.

ಇಬ್ಬರು ಅರೆಸ್ಟ್.. ಮತ್ತಿಬ್ಬರು ಎಸ್ಕೇಪ್.!

ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜೈಲು ಪಾಲಾಗುತ್ತಿದ್ದಂತೆ, ಮತ್ತಿಬ್ಬರು ಅರೆಸ್ಟ್ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬೆಳ್ಳಿ ಚೈನ್ ಗೆ ಹುಲಿ ಉಗುರು ಜೋಡಿಸಿ ಹಾಕಿಕೊಂಡಿದ್ದ ಇಬ್ಬರನ್ನ ಮೂಡಿಗೆರೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರನ್ನ ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.

ಇದನ್ನೂ ಕೂಡ ಓದಿ : Varthur Santhosh : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿಕ ಅರೆಸ್ಟ್ ಆಗ್ತಾರಾ ನಟ ದರ್ಶನ್.! ದರ್ಶನ್ ಕೊರಳಲ್ಲಿರುವುದು ಹುಲಿ ಉಗುರಾ.?

ಭಾರತಿ ಬೈಲು ಬಳಿಯ ಕುಂಡ್ರಾ ಗ್ರಾಮದ ನಿವಾಸಿ ಸತೀಶ್ ಹಾಗು ಅಲ್ಲೆಮನೆ ಕುಂದೂರು ನಿವಾಸಿ ರಂಜಿತ್ ಬಂಧಿತರು. ಅಲ್ಲೆಮನೆ ಗ್ರಾಮದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹುಲಿ ಉಗುರಿನ ಒಂದು ಡಾಲರ್ ನ್ನ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಬ್ಬರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರು ಹುಲಿ ಉಗುರು ಮಾರಾಟಗಾರರ ಬಂಧನಕ್ಕೆ ಬಲೆ ಬೀಸಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply