ಕಬ್ಜ ಸಿನಿಮಾ ಟ್ರೈಲರ್ ನೋಡಿ ದರ್ಶನ್ ಅವರ ಪ್ರತಿಕ್ರಿಯೆ ಏನು.? । Darshan Thoogudeepa

ನಟ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್. ಚಂದ್ರು ಅವರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕಬ್ಜ ಸಿನಿಮಾ ಇದೆ ತಿಂಗಳು 17 ನೇ ತಾರೀಕು ಅದ್ದೂರಿಯಾಗಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾ ಈಗಾಗಲೇ ಹಾಡು ಮತ್ತು ಟೀಸರ್ ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಈ ಚಿತ್ರಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಆಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಂದ. ಇವರು ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅನ್ನುವುದು ಟೀಸರ್ ಮೂಲಕ ರಿವೀಲ್ ಆಗಿದೆ.

ಇದನ್ನೂ ಕೂಡ ಓದಿ : ದರ್ಶನ್ ಸರ್ ಗೆ ಸಿನಿಮಾ ನಿರ್ದೇಶನ ಮಾಡುತ್ತೇನೆ, ಮಗಳ ಮುಂದೆ ಮಾತು ಕೊಟ್ಟರಾ ರಿಷಬ್.! | Rishabh Shetty

WhatsApp Group Join Now
Telegram Group Join Now

ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮಾಡಿದೆ ಅಂತ ಹೇಳಬಹುದು. ಈ ಟ್ರೈಲರ್ ನೋಡಿ ಸಾಕಷ್ಟು ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದು. ನಟ ದರ್ಶನ್ ಅವರು ಯಾವ ರೀತಿ ಪ್ರತಿಕ್ರಿಯೆಸಿದ್ದಾರೆ ನೋಡೋಣ.

ಕಬ್ಜ ಸಿನಿಮಾದ ಟ್ರೈಲರ್ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದ್ದು. ಟೀಸರ್ ಮೂಲಕ ಮ್ಯಾಜಿಕ್ ಮಾಡಿದ್ದ ಆರ್. ಚಂದ್ರು ಅವರು ಇದೀಗ ಮತ್ತೊಮ್ಮೆ ಟ್ರೈಲರ್ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದ್ದಾರೆ. ಕಬ್ಜ ಸಿನಿಮಾದ ಟ್ರೈಲರ್ ನೋಡಿರುವ ಸಿನಿಪ್ರೇಮಿಗಳು ಮತ್ತೊಂದು KGF ರೀತಿಯ ಸಿನಿಮಾವನ್ನ ಬೆಳ್ಳಿತೆರೆಯ ಮೇಲೆ ನೋಡಲು ತುದಿಕಾಲಿನಲ್ಲಿ ಕಾಯುತ್ತ ಇದ್ದಾರೆ. ಅದರಲ್ಲೂ ಉಪ್ಪಿ ಅವರ ಜೊತೆ ಕಿಚ್ಚ ಸುದೀಪ್, ಶಿವಣ್ಣ ಕಾಣಿಸಿಕೊಂಡಿದ್ದು, ತೆರೆಯ ಮೇಲೆ ತ್ರಿಮೂರ್ತಿಗಳ ದರ್ಶನವಾಗಲಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie | Darshan Thoogudeepa

ಕಬ್ಜ ಚಿತ್ರದ ಟ್ರೈಲರ್ ಎಲ್ಲ ಭಾಷೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು. ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನ ಪಡೆದುಕೊಂಡಿದೆ. ಕಬ್ಜ ಚಿತ್ರಕ್ಕೆ ಇಡೀ ಸ್ಯಾಂಡಲ್ ವುಡ್ ನ ನಟ-ನಟಿಯರು ಹಾಗೂ ಅವರ ಅಭಿಮಾನಿಗಳು ಕೂಡ ಬೆಂಬಲ ನೀಡುತ್ತಿದ್ದು. ದರ್ಶನ್ ಅವರ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಅನ್ನ ಶೇರ್ ಮಾಡಿದ್ದಾರೆ. ಇನ್ನು ನಟ ದರ್ಶನ್ ಇವರು ಈಗಾಗಲೇ ಕಬ್ಜ ಚಿತ್ರದ ಟ್ರೈಲರ್ ನೋಡಿ ನಟ ಉಪೇಂದ್ರ ಅವರಿಗೆ ಕರೆ ಮಾಡಿ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿದೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply