ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ

ದ್ವಿಚಕ್ರವಾಹನ ಅಥವಾ ತ್ರಿಚಕ್ರ ವಾಹನ ಅಥವಾ ಹೀಗೆ ಯಾವುದೇ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ. ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದಕ್ಕೆ ಸಿದ್ಧವಾಗಿದ್ದು, ಇಂತಹ ವಾಹನಗಳಿಗೆ ಇನ್ನು ಮುಂದೆ ರಸ್ತೆ ಮಧ್ಯದಲ್ಲಿ ವಾಹನಗಳನ್ನ ನಿಲ್ಲಿಸಿ ದಂಡ ವಸೂಲಾತಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸಾರಿಗೆ ಸಚಿವಾಲಯ ಬಿಗ್ ಶಾಕ್ ನೀಡಿದೆ.

ಇದನ್ನೂ ಕೂಡ ಓದಿ : eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ

ಯಾವುದೇ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರು ಕೂಡ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮತ್ತೊಂದು ಹೊಸ ರೂಲ್ಸ್ ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಇಲ್ಲವಾದರೆ ನಿಮಗೆ ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ಹಣ ವಸೂಲಿ ಮಾಡ್ತಾರೆ. 2019 ಕ್ಕಿಂತ ಮೊದಲು ಖರೀದಿಸಿದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ರಾಜ್ಯ ಸಾರಿಗೆ ಇಲಾಖೆ ಮೇ 31 ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಜೂನ್ ಒಂದರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅಂದಹಾಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಎರಡು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಈ ಹಿಂದೆ 2023 ರ ನವೆಂಬರ್ 13 ರೊಳಗೆ. ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆಗ ಕೇವಲ 30,000 ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರಿಂದ ಫೆಬ್ರವರಿ ಹದಿನೇಳರ ವರೆಗೆ ಗಡುವನ್ನು ವಿಸ್ತರಿಸಲಾಯಿತು. ಆ ವೇಳೆಗೆ 18,00,000 ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿದ್ದವು.

ಇದನ್ನೂ ಕೂಡ ಓದಿ : Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ

ಮೇ 31 ರವರೆಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ವಿಸ್ತರಿಸಲಾಗಿದೆ. ಗಡುವಿನ ನಂತರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು. ನಂತರದಲ್ಲಿ ವಾಹನ ಮಾಲೀಕರು ನೋಂದಣಿ ಪ್ರಮಾಣ ಹೆಚ್ಚಾಗಿ 18 ಲಕ್ಷಕ್ಕೆ ತಲುಪಿದೆ. ಈಗ 52,00,000 ವಾಹನಗಳ ನೋಂದಣಿ ಆಗಿದೆ. ಎರಡನೇ ತಿಂಗಳಲ್ಲಿ 34,00,000 ವಾಹನಗಳು ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, ಇನ್ನು ಸುಮಾರು 1.48 ಕೋಟಿ ವಾಹನಗಳು ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ. ನಿಗದಿತ ಗಡುವಿನ ಒಳಗೆ ಹೆಚ್ಚಿನ ಅಳವಡಿಸಿಕೊಳ್ಳದೆ ಇದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸಬಹುದು. ಗಡುವು ವಿಸ್ತರಿಸಿದೇ ಇದ್ದರೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ 500 ರಿಂದ 1000 ರು ದಂಡ ವಿಧಿಸಲಾಗುವುದು ಎನ್ನಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply