Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ

Ration Card Update : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಂದಾಗಿನಿಂದ ಹೊಸ ರೇಶನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದರೆ ಸಾಕು ಸಾವಿರಾರು ಜನರು ಒಮ್ಮೆಲೆ ಮುಗಿ ಬೀಳುತ್ತಾರೆ. ಅದರಲ್ಲಿ ಕೆಲವರು ಗ್ಯಾರಂಟಿ ಸ್ಕೀಮ್ ಗಳನ್ನು ಪಡೆಯಲು ಕೆಲವು ತಪ್ಪುಗಳನ್ನು ಕೂಡ ಮಾಡುತ್ತಾರೆ.

ಹಾಗಾಗಿ ಆಹಾರ, ನಾಗರಿಕ ಸರಬರಾಜು ಇಲಾಖೆ, ಹೊಸ ರೇಷನ್ ಕಾರ್ಡ್ ಅರ್ಜಿಗೆ ಕೆಲವು ಮಾನದಂಡಗಳನ್ನು ನೀಡಿದೆ. ರೇಷನ್ ಕಾರ್ಡ್ ನಲ್ಲಿ ಅಕ್ರಮ ತಡೆಗಟ್ಟಲು ಸರ್ಕಾರ ಪಡಿತರ ಚೀಟಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆದರೂ ಅಕ್ರಮ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ. ಈಗಾಗಲೇ ಲಕ್ಷ ಲಕ್ಷ ಜನ ಹೊಸ ರೇಶನ್ ಕಾರ್ಡ್ ಅರ್ಜಿ ಸಲ್ಲಿಸಿ. ಯಾವಾಗ ನಮಗೆ ಪಡಿತರ ಚೀಟಿ ದೊರೆಯುವುದೇ ಎಂದು ಕಾದು ಕುಳಿತಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

ಇನ್ನೊಂದೆಡೆ ಆಹಾರ, ನಾಗರಿಕ ಸರಬರಾಜು ಇಲಾಖೆ ಲಕ್ಷ ಲಕ್ಷ ಅರ್ಜಿಗಳನ್ನು ತಿರಸ್ಕರಿಸುತ್ತದೆ. ಇದಕ್ಕೆ ಕಾರಣ ಕೆಲವೊಂದಿಷ್ಟು ಅರ್ಜಿದಾರರು ಅಕ್ರಮ ರೇಷನ್ ಕಾರ್ಡ್ ಹೊಂದಲು ಪ್ರಯತ್ನಿಸುತ್ತಿದ್ದಾರೆ ಎಂದು ಈಗಾಗಲೇ ಸಲ್ಲಿಕೆಯಾಗಿರುವ ಹೊಸ ರೇಶನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಅತೀ ಅವಶ್ಯಕ ಇರುವ ಫಲಾನುಭವಿಗಳಿಗೆ ಆಯಾ ಜಿಲ್ಲಾವಾರು ಹೊಸ ರೇಷನ್ ಕಾರ್ಡ್ ಹಂಚಿಕೆ ಪ್ರಕ್ರಿಯೆ ಆರಂಭಿಸಿದೆ. ಇದರ ಜೊತೆಗೆ ಪ್ರತಿ ಜಿಲ್ಲೆಯ ಅಕ್ರಮ ರೇಷನ್ ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದು ಕೂಡ ಮಾಡುತ್ತಿವೆ.

WhatsApp Group Join Now
Telegram Group Join Now

ನೀವು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಸರ್ಕಾರದ ಮಾನದಂಡದ ಒಳಗಡೆ ನಿಮ್ಮ ಅರ್ಜಿ ಬಾರದೇ ಇದ್ದರೆ, ನಿಮ್ಮ ಪಡಿತರ ಕಾರ್ಡ್ ಅರ್ಜಿ ರದ್ದಾಗಲಿದೆ. 2022-23 ನೇ ಸಾಲಿನಲ್ಲಿ ಸರಿ ಸುಮಾರು 4 ಲಕ್ಷ ಪಡಿತರ ಚೀಟಿಯನ್ನು ರದ್ದು ಪಡಿಸಿದ ಆಹಾರ, ನಾಗರಿಕ ಸರಬರಾಜು ಇಲಾಖೆ 13 ಲಕ್ಷ ರೂಪಾಯಿ ದಂಡವನ್ನು ಕೂಡ ವಸೂಲಿ ಮಾಡಿತ್ತು. ಬಿಪಿಎಲ್ ಕಾರ್ಡ್ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಆದರೆ ಕೆಲವರು ಬಡತನ ರೇಖೆಗಿಂತ ಮೇಲೆ ಇದ್ದರೂ ಕೂಡ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ಅದರಲ್ಲೂ ಇತ್ತೀಚೆಗೆ ಗ್ಯಾರಂಟಿ ಸ್ಕೀಮ್ ಗಳನ್ನು ಪಡೆಯಲು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದಾರೆ. ಇದನ್ನೆಲ್ಲ ಮನಗಂಡಿರುವ ಸರ್ಕಾರ ಅಂತಹ ರೇಷನ್ ಕಾರ್ಡ್ ಗಳನ್ನು ಹುಡುಕಿ ರದ್ದುಗೊಳಿಸಿ, ಜೊತೆಗೆ ದಂಡವನ್ನು ಕೂಡ ವಿಧಿಸುತ್ತಿದೆ. ಈಗಾಗಲೇ ರದ್ದತಿಗೊಂಡಿರುವ ರೇಷನ್ ಕಾರ್ಡ್ ಮಾಹಿತಿಯನ್ನು ಆಹಾರ, ನಾಗರಿಕ ಸರಬರಾಜು ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಗೊಳಿಸಿದ್ದು, ನೀವು ಕೂಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕವೂ ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply