eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ

eShram card benefits : ಕೇಂದ್ರ ಸರ್ಕಾರವು ದೇಶದಾದ್ಯಂತ ಇರುವ ಬಡವರನ್ನ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದಾಗಿ ಹೊಸ ಹೊಸ ಯೋಜನೆಯನ್ನ ಅನುಷ್ಠಾನಗೊಳಿಸಿದೆ. ಅದರಲ್ಲಿ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ 3000 ಸಾವಿರ ರೂಪಾಯಿ ಹಣ ನೀಡುವ ಹೊಸ ಯೋಜನೆ ಮೂಲಕ ಈ ಕಾರ್ಡ್ ಮಾಡಿಕೊಳ್ಳುವ ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಹಣ ದೊರೆಯುತ್ತದೆ. ಮತ್ತು 2 ಲಕ್ಷ ರೂಪಾಯಿಗಳ ಅಪಘಾತ ಪರಿಹಾರ ವಿಮೆಯು ಕೂಡ ಸಿಗುತ್ತದೆ. ಅಂದ್ರೆ ಈ ಕಾರ್ಡ್ ಇದ್ದವರಿಗೆ ಅಪಘಾತದಲ್ಲಿ ಯಾವುದೇ ಹಾನಿ ಉಂಟಾದರೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ. ಹೀಗೆ ಕೇಂದ್ರ ಸರ್ಕಾರವು ಬಡವರಿಗೆ ಆರ್ಥಿಕ ಭದ್ರತೆಯನ್ನ ಒದಗಿಸಲು ಕೇಂದ್ರ ಸರ್ಕಾರದ ಈ ಶ್ರಮ ಕಾರ್ಡ್ ಜಾರಿಗೊಳಿಸಿದೆ.

ಈ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ? ಅಗತ್ಯವಾದ ದಾಖಲೆಗಳು ಏನು? ಪ್ರತಿ ತಿಂಗಳು ನಮಗೆ 3000 ಸಾವಿರ ರೂಪಾಯಿ ಹಣ ಬರಬೇಕಾದರೆ ಏನು ಮಾಡಬೇಕು.? ಹಾಗೂ ಯಾವ ಯಾವ ಸಂದರ್ಭದಲ್ಲಿ 2 ಲಕ್ಷ ಹಣ ನೀಡಲಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Annabhagya Yojane : ಅನ್ನಭಾಗ್ಯ ಹಣ ಜಮಾವಣೆ.! ಹಣ ಇದುವರೆಗೂ ಬರದೇ ಇರುವವರು ಹೀಗೆ ಮಾಡಿ

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಶ್ರಮ್ ಯೋಜನೆ ಜಾರಿಗೆ ತಂದಿದೆ. ಈ ಶ್ರಮ್ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಯನ್ನ ತಲುಪಿಸಿ ಸಾಮಾಜಿಕ ಭದ್ರತೆ ಕಲ್ಪಿಸಲಾಗಿದೆ. ರಾಜ್ಯದಲ್ಲೂ ಈ ಶ್ರಮ್ ಕಾರ್ಡ್ ನೀಡಲಾಗುತ್ತದೆ ಎಂದು ಸರ್ಕಾರ ಜಾರಿಗೊಳಿಸಿರುವ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ.

ಈ ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆ ಆಗಿದೆ. ದೇಶದ ಎಲ್ಲ ಕಾರ್ಮಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಶ್ರಮ್ ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ವಿಶೇಷವಾಗಿ ಕಾರ್ಮಿಕರಿಗೆ ಶ್ರಮದ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಎಂದೇ ಹಲವು ಸೌಲಭ್ಯಗಳನ್ನು ಒದಗಿಸಿದೆ. ಕಾರ್ಮಿಕರು ಈ ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ವಿಶಿಷ್ಟ ಗುರುತಿನ ಸಂಖ್ಯೆ ಯುಎಎನ್ ಕಾರ್ಡ್ ನ ಪಡೆಯಬಹುದು. ಈ ಸಂಖ್ಯೆಯ ಮೂಲಕ ಉದ್ಯೋಗ ಕಳೆದುಕೊಂಡಲ್ಲಿ ಹೊಸ ಉದ್ಯೋಗ ಹುಡುಕಬಹುದು.

ಇದನ್ನೂ ಕೂಡ ಓದಿ : Crop Insurance : ಬರ ಪರಿಹಾರ ಜಮಾವಣೆ ಆಗಿಲ್ಲವೇ.? ಇಲ್ಲಿಗೆ ಭೇಟಿ ನೀಡಿ, ಮಾಹಿತಿ ಸಲ್ಲಿಸಿ – ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಿ

ಈ ಶ್ರಮ್ ಪೋರ್ಟಲ್‌ನಲ್ಲಿ ತಮ್ಮನ ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಈ ಶ್ರಮ್ ಕಾರ್ಡ್‌ಗಾಗಿ ಅಪ್ಲೇ ಕೂಡ ಮಾಡಬಹುದು. ಕಾರ್ಮಿಕರು ತಮ್ಮ ಬಳಿ ಈ ಶ್ರಮ್ ಕಾರ್ಡ್ ಹೊಂದಿದ್ದರೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಪಿಂಚಣಿ ವ್ಯವಸ್ಥೆ ಕೂಡ ಲಭ್ಯವಿದ್ದು, ತಿಂಗಳಿಗೆ ಸಾವಿರದಿಂದ ಮೂರು ಸಾವಿರದವರೆಗೆ ಪಿಂಚಣಿ ಪಡೆಯಬಹುದು.

ಇನ್ನು ಈ ಶ್ರಮ್ ಪೋರ್ಟಲ್ ಆನ್‌ಲೈನ್ ನೋಂದಣಿಯ ಪ್ರಯೋಜನಗಳನ್ನ ನೋಡೋದಾದ್ರೆ, ನೋಂದಾಯಿಸಿಕೊಂಡ ಕಾರ್ಮಿಕರು ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 1 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವನ್ನ ಪರಿಹಾರವನ್ನಾಗಿ ನೀಡಲಾಗುತ್ತದೆ. ಆಕಸ್ಮಿಕ ಮರಣದಿಂದ ಮೃತಪಟ್ಟರೆ ಎರಡು ಲಕ್ಷ ರೂ. ಪರಿಹಾರ ಒದಗಿಸಲಾಗುತ್ತೆ ನೋಂದಣಿಯ ನಂತರ ನಿಮಗೆ ಒಂದು ವರ್ಷದವರೆಗೆ ಪ್ರೀಮಿಯರ್ ಒದಗಿಸಲಾಗುತ್ತದೆ. ಈ ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಸಾಮಾಜಿಕ ಭದ್ರತಾ ಯೋಜನೆಯ ಲಾಭವನ್ನು ಪಡೆಯುತ್ತೀರಿ. ನಿಮಗೆ ವಿಮಾ ಯೋಜನೆಯ ವಿಮಾ ರಕ್ಷಣೆಯನ್ನು ಸಹ ನೀಡಲಾಗುವುದು. ಇದರ ಮೂಲಕ ನೀವು ವಲಸೆ ಕಾರ್ಮಿಕರ ತಂಡವನ್ನ ಸಹ ಟ್ರ್ಯಾಕ್ ಮಾಡಬಹುದು. ಈ ಮೂಲಕ ನಿಮಗೆ ಆರ್ಥಿಕ ಸಹಾಯವನ್ನು ನೀಡಲಾಗುವುದು. ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಇದನ್ನೂ ಕೂಡ ಓದಿ : Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ

ಈ ಶ್ರಮ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಹೇಗೆ ನೋಂದಾಯಿಸಿಕೊಳ್ಳುವುದು.?

ಲೇಬಲ್ ಮತ್ತು ಪ್ಯಾಕಿಂಗ್ ಕಾರ್ಮಿಕರು, ಇಟ್ಟಿಗೆ ಗೂಡು ಕೆಲಸಗಾರರು, ವಲಸೆ ಕಾರ್ಮಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಕಾರ್ಪೆಂಟರ್, ರೇಷ್ಮೆ-ಕೃಷಿ ಕಾರ್ಮಿಕರು, ಮನೆ ಕೆಲಸದ ಕಾರ್ಮಿಕರು, ಕೃಷಿ ಕಾರ್ಮಿಕರು, ಕೃಷಿ ಕೆಲಸಗಾರರು, ಸಣ್ಣ ಮತ್ತು ಅತಿ ಸಣ್ಣ ರೈತರು, ಆಶಾ ಕಾರ್ಯಕರ್ತೆಯರು, ಬೀದಿ ಬದಿಯ ವ್ಯಾಪಾರಿಗಳು, ಹಾಲು ಉತ್ಪಾದಕ ರೈತರು, ರೇಷ್ಮೆ ಉತ್ಪಾದನಾ ಕೆಲಸಗಾರರು, ಆಟೋ ಚಾಲಕರು ನೋಂದಾಯಿಸಿಕೊಳ್ಳಬಹುದು.

ಹಾಗೆಯೇ ಪತ್ರಿಕೆ ಮಾರಾಟಗಾರರು, ಕ್ಷೌರಿಕರು, ಮೀನುಗಾರರು, ಸಾಮಿಲ್ ಕಾರ್ಮಿಕರು, ಟ್ಯಾನರಿ ಕೆಲಸಗಾರರು, ಪಶುಪಾಲನೆ ಕೆಲಸಗಾರರು, ಟೆಂಡರ್ ಕಟ್ಟಡ ಮತ್ತು ನಿರ್ಮಾಣ ಕೆಲಸಗಾರರು, ಗೃಹ ಕಾರ್ಮಿಕರು ಸೇರಿದಂತೆ ಒಟ್ಟು 150ಕ್ಕಿಂತ ಹೆಚ್ಚು ಬಗೆಯ ಕಾರ್ಮಿಕರು ಈ ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply