ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

ಹಾರ್ಟ್ ಅಟ್ಯಾಕ್ ಹೇಗೆ ಬರುತ್ತದೆ.?
ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹಾರ್ಟ್ ಅಟ್ಯಾಕ್ ಬರುತ್ತದೆ. ಇಂದು ಬಹಳಷ್ಟು ಮಂದಿಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಸಲ ಹಾರ್ಟ್ ಅಟ್ಯಾಕ್ ಆಗಿ ಬದುಕುಳಿದ ಬಳಿಕ ಇದು ಮತ್ತೆ ಬರಲ್ಲ ಎಂದು ಹೇಳಲಾಗದು. ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು.

Whatsapp Group Join
Telegram channel Join

ಇದನ್ನೂ ಓದಿ – ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಇದರ ಜತೆಗೆ ಕೆಳಗೆ ಸೂಚಿಸಿದ ರೀತಿಯಲ್ಲಿ ಒಂದು ಪಾನೀಯ ತಯಾರಿಸಿಕೊಂಡು ಕುಡಿದರೆ ಹಾರ್ಟ್ ಅಟ್ಯಾಕ್ ಇನ್ನು ನಿಮಗೆ ಜನ್ಮದಲ್ಲಿ ಬರಲ್ಲ. ಆರೋಗ್ಯವಾಗಿ ಇರುವವರು ಸಹ ಈ ಪಾನೀಯ ಸೇವಿಸಬಹುದು. ಇದರಿಂದ ಭವಿಷ್ಯದಲ್ಲಿ ಹೃದಯ ಸಮಸ್ಯೆಗಳು ಬರಲ್ಲ. ಹಾಗಿದ್ದರೆ ಆ ಪಾನೀಯ ಯಾವುದು, ಅದನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣವೇ..?

Whatsapp Group Join
Telegram channel Join

ಬೇಕಾದ ಪದಾರ್ಥಗಳು :-
ಬೆಳ್ಳುಳ್ಳಿ ಎಸಳು – 30
ನಿಂಬೆಹಣ್ಣು – 6

ತಯಾರಿಸುವ ವಿಧಾನ :-
ನಿಂಬೆಹಣ್ಣನ್ನು ಹೆಚ್ಚಿ ರಸ ತೆಗೆಯಬೇಕು. ಬೆಳ್ಳುಳ್ಳಿ ಹೊಟ್ಟು ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ಬಳಿಕ ಸ್ವಲ್ಪ ನೀರು ಹಾಕಿಕೊಂಡು ಅವನ್ನು ಮಿಕ್ಸಿಗೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಆದ ಬಳಿಕ ಅದರಲ್ಲಿ ಎರಡು ಲೀಟರ್ ನೀರು ಹಾಕಿಕೊಳ್ಳಬೇಕು. ಬಳಿಕ ಬರುವ ಮಿಶ್ರಣವನ್ನು 5-6 ನಿಮಿಷಗಳ ಕಾಲ ಬಿಸಿ ಮಾಡಬೇಕು. ಆ ಬಳಿಕ ಸ್ಪವ್‌ನಿಂದ ಇಳಿಸಿ ಶೋಧಿಸಬೇಕು. ಆ ಮಿಶ್ರಣವನ್ನು ಗಾಜಿನ ಸೀಶೆಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ – ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು – ಹೆಲ್ತ್ ಟಿಪ್ಸ್

ಮೇಲೆ ತಿಳಿಸಿದ ಮಿಶ್ರಣವನ್ನು ಈ ರೀತಿ ಬಳಸಬೇಕು :-
ಪ್ರತಿ ದಿನ ಈ ಮಿಶ್ರಣವನ್ನು 50 ಎಂಎಲ್ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿ ಮೂರು ವಾರಗಳ ಕಾಲ ನಿಯಮಿತವಾಗಿ ತೆಗೆದುಕೊಳ್ಳಬೇಕು. ಮತ್ತೆ ವಾರಕಾಲ ಗ್ಯಾಪ್ ಕೊಟ್ಟು ಮತ್ತೆ ಬೇಕಿದ್ದರೆ ಇನ್ನೂ ಮೂರು ವಾರ ತೆಗೆದುಕೊಳ್ಳಬೇಕು. ಈ ರೀತಿ 6 ತಿಂಗಳಿಗೊಮ್ಮೆ ಮಾಡಬಹುದು. ಇದರಿಂದ ಹೃದಯ ತೊಂದರೆ ಎಂಬುದು ಬರಲ್ಲ. ಹೃದಯಕ್ಕೆ ಪಂಪ್ ಮಾಡುವ ರಕ್ತನಾಳಗಳಲ್ಲಿ ಕೊಬ್ಬು ಕರಗಿ ಅವು ಫ್ರೀಯಾಗುತ್ತವೆ.

ಇದರಿಂದ ರಕ್ತ ಸಂಚಲನಕ್ಕೆ ಯಾವುದೇ ತೊಂದರೆಯಾಗಲ್ಲ. ಹಾಗಾಗಿ ಹೃದಯ ರೋಗಗಳು ಹತ್ತಿರ ಸುಳಿಯಲ್ಲ. ಆರೋಗ್ಯವಾಗಿರುವವರು ಸಹ ಈ ಮಿಶ್ರಣವನ್ನು ನಿತ್ಯ ಬಳಸಿದರೆ, ಅವರಿಗೆ ಭವಿಷ್ಯದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗಳು ಬರಲ್ಲ. ನಿಜವಾಗಿ ಕೊಲೆಸ್ಟರಾಲನ್ನು ಕರಗಿಸುವ, ಹೃದಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಅನೇಕ ಔಷಧಿಗಳಲ್ಲಿ ನಿಂಬೆರಸ, ಬೆಳ್ಳುಳ್ಳಿಯಲ್ಲಿನ ಕೆಮಿಕಲ್ಸ್ ಬಳಸುತ್ತಾರೆ. ಆದರೆ ಈ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹಾಗಾಗಿ ಈ ಎರಡು ಪದಾರ್ಥಗಳಿಂದ ತಯಾರಿಸಿದ ಆ ಮಿಶ್ರಣವನ್ನು ಕುಡಿದರೆ ಹಾರ್ಟ್ ಅಟ್ಯಾಕ್ ಬರದಂತೆ ನೋಡಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply