Unwanted Hair : ಶೇವಿಂಗ್ ಮೂಲಕ ಬೇಡದ ಕೂದಲು ತೆಗೆದ್ರೆ.? – ಆರೋಗ್ಯ ಮಾಹಿತಿ

Unwanted Hair : ಬೇಡವಾದ ಕೂದಲನ್ನು ತೆಗೆಯಲು ಹೆಣ್ಣುಮಕ್ಕಳಿಗೆ ಈಗ ಅನೇಕ ಉಪಾಯಗಳಿವೆ. ಇದಕ್ಕಾಗಿ ಸಲೂನ್‌ಗೆ ತೆರಳಬಹುದು ಅಥವಾ ಮನೆಯಲ್ಲೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಬೇಡದ ಕೂದಲಿಗೆ ಮುಕ್ತಿ ತೋರಬಹುದು. ಬೇಡದ ಕೂದಲು ತೆಗೆಯುವುದು ತಾತ್ಕಾಲಿಕ ಪರಿಹಾರ. ಕೆಲವು ವಾರಗಳು ಕಳೆದ ನಂತರ ಕೂದಲು ತೆಗೆದ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮದಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ.

Whatsapp Group Join
Telegram channel Join

ಶೇವಿಂಗ್‌ ಮಾಡಿಕೊಳ್ಳುವ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ರೇಜರ್‌ ಬಳಸಿ ಮನೆಯಲ್ಲೇ ಕುಳಿತು ಅತ್ಯಂತ ಕಡಿಮೆ ಸಮಯದಲ್ಲಿ ಸುಲಭವಾಗಿ ಕೂದಲು ತೆಗೆಯಬಹುದಾದ ವಿಧಾನ ಇದು. ಈ ವಿಧಾನವನ್ನು ಸಾಕಷ್ಟು ಯುವತಿಯರು ಅನುಸರಿಸುತ್ತಾರೆ. ಆದರೆ, ಶೇವಿಂಗ್‌ ಮಾಡುವುದರಿಂದ ಅನೇಕ ತೊಂದರೆಗಳಿಗೆ ಸಿಲುಕಬೇಕಾಗುತ್ತದೆ.

ರೇಜರ್‌ ಬಳಕೆಯಿಂದ ಎಷ್ಟು ಸುಲಭವಾಗಿ ಕೂದಲು ತೆಗೆಯಬಹುದೋ, ಅಷ್ಟೇ ವೇಗವಾಗಿ ಮತ್ತೆ ಕೂದಲು ಬೆಳೆಯುತ್ತದೆ. ಪದೇ ಪದೇ ಶೇವಿಂಗ್‌ ಮಾಡುವುದರಿಂದ ತ್ವಚೆ ಒರಟಾಗುತ್ತದೆ. ಜೊತೆಗೆ ಶೇವಿಂಗ್‌ ಮಾಡಿಕೊಳ್ಳುವ ತರಾತುರಿಯಲ್ಲಿ ಚರ್ಮ ಕೊಯ್ದುಕೊಳ್ಳುವ ಅಪಾಯವೂ ಇರುತ್ತದೆ. ಈ ಎಲ್ಲ ತೊಂದರೆಗಳ ಜೊತೆಗೆ ಚರ್ಮದ ತುರಿಕೆ, ಗುಳ್ಳೆಗಳು ಏಳುವ ಸಂಭವವೂ ಇರುತ್ತದೆ.

Whatsapp Group Join
Telegram channel Join

ಬೇಡದ ಕೂದಲು ನಿವಾರಿಸಿಕೊಳ್ಳಲು ವ್ಯಾಕ್ಸಿಂಗ್‌ ಮತ್ತೊಂದು ವಿಧಾನ. ಇದು ಸಹ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಕ್ರಮ. ಸುಲಭವೂ ಹೌದು. ವ್ಯಾಕ್ಸಿಂಗ್‌ ಮಾಡುವುದರಿಂದ ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ವಾರಗಳ ಕಾಲ ಬೇಡದ ಕೂದಲು ಬೆಳೆಯದಂತೆ ನೋಡಿಕೊಳ್ಳಬಹುದು. ವ್ಯಾಕ್ಸಿಂಗ್‌ ಮಾಡಿಕೊಳ್ಳುವುದು ಸುಲಭ ವಿಧಾನವಾದರೂ ಅದನ್ನು ಮಾಡಿಕೊಳ್ಳಲು ಕೌಶಲ ಬೇಕು. ಆ ಕೌಶಲ ಇಲ್ಲದಿದ್ದರೆ, ಪರ್ಫೆಕ್ಟ್‌ ಫಿನಿಷಿಂಗ್‌ ಸಾಧ್ಯವಿಲ್ಲ. ಇದರ ಮತ್ತೊಂದು ಬಾಧಕ ಸಂಗತಿಯೆಂದರೆ, ವ್ಯಾಕ್ಸಿಂಗ್‌ ಮಾಡುವಾಗ ನೋವು ಸಹಿಸಿಕೊಳ್ಳಬೇಕು.

ಹೇರ್‌ ರಿಮೂವಲ್‌ ಕ್ರೀಂ ಬಳಸುವುದು ಮತ್ತೊಂದು ವಿಧಾನ. ಈ ವಿಧಾನದಲ್ಲಿ ಕೆಮಿಕಲ್‌ ಕ್ರೀಂ ಬಳಕೆ ಮಾಡುವುದರ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ವ್ಯಾಕ್ಸಿಂಗ್‌ಗಿಂತ ಇದು ಸರಳ ವಿಧಾನ. ವ್ಯಾಕ್ಸಿಂಗ್‌ ಮಾಡಿಕೊಳ್ಳುವಾಗ ಆಗುವಂಥ ನೋವು ಇಲ್ಲಿ ಆಗುವುದಿಲ್ಲ. ಈ ವಿಧಾನ ಬಳಕೆ ಮಾಡಲು ಯಾವುದೇ ವಿಶೇಷ ತರಬೇತಿಯ ಅವಶ್ಯ ಕತೆಯೂ ಬೇಕಿಲ್ಲ. ವಿವಿಧ ಬಗೆಯ ಚರ್ಮ
ಹೊಂದಿರುವ ಎಲ್ಲ ಹೆಣ್ಣು ಮಕ್ಕಳಿಗೂ ಬಗೆಬಗೆಯ ಹೇರ್‌ ರಿಮೂವಲ್‌ ಕ್ರೀಂಗಳು ಮಾರುಕಟ್ಟೆಯಲ್ಲಿ ಲಭ್ಯ.

ಬೇಡದ ಕೂದಲು ತೆಗೆಯಲು ಹೇರ್‌ ರಿಮೂವಲ್‌ ಕ್ರೀಂಗಳು ಅಷ್ಟು ಒಳ್ಳೆಯ ಆಯ್ಕೆಯಲ್ಲ. ಕಾರಣ, ಎರಡು ಅಥವಾ ಮೂರು ದಿನಗಳಲ್ಲಿ ಮತ್ತೆ ಕೂದಲು ಬೆಳೆಯುತ್ತದೆ. ಹಾಗಾಗಿ, ಮೂರು ದಿನಕ್ಕೊಮ್ಮೆಯಾದರೂ ಈ ಕ್ರಮ ಅನುಸರಿಸಬೇಕು. ಇಂತಹ ಕ್ರೀಂನಲ್ಲಿ ಕೆಮಿಕಲ್‌ಗಳು ಹೆಚ್ಚಿರುವುದರಿಂದ ತ್ವಚೆಯ ಅಲರ್ಜಿಗೂ ಕಾರಣವಾಗಬಹುದು.

ಥ್ರೆಡ್ಡಿಂಗ್‌ ಮಾಡಿಕೊಳ್ಳುವ ಮೂಲಕ ಯಾವುದೇ ಖರ್ಚಿಲ್ಲದೇ ಬೇಡದ ಕೂದಲು ತೆಗೆಯಬಹುದು. ಈ ವಿಧಾನ ಬಳಕೆ ಮಾಡುವುದರಿಂದ ಮೂರು ವಾರ ಆರಾಮವಾಗಿರಬಹುದು. ಐಬ್ರೋ ಮತ್ತು ಫೇಶಿಯಲ್‌, ಹೇರ್‌ ತೆಗೆಯಲು ಇದು ಉತ್ತಮ ವಿಧಾನ.

ಮನೆಯಲ್ಲಿ ಥ್ರೆಡ್ಡಿಂಗ್‌ ಮಾಡಿಕೊಳ್ಳಬೇಕೆಂದರೆ ಅದಕ್ಕೆ ಬ್ಯೂಟಿಷಿಯನ್‌ಗಳಿಂದ ತರಬೇತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಇದು ಸಹ ನೋವು, ಕಡಿತಕ್ಕೂ ಕಾರಣವಾಗಬಹುದು. ಅದರಲ್ಲೂ ಸೂಕ್ಷ್ಮ ಚರ್ಮ ಹೊಂದಿದವರು ಥ್ರೆಡ್ಡಿಂಗ್‌ ಮಾಡಿಕೊಳ್ಳುವುದರಿಂದ ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌ಗೂ ತುತ್ತಾಗುವ ಸಂಭವವಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply