ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಹಸ್ತ ಮೈಥುನವೆನ್ನುವುದು ಒಂದು ಸಾಮಾನ್ಯವಾದ ಚಟುವಟಿಕೆಯಾಗಿರುತ್ತದೆ. ಇದು ಲೈಂಗಿಕ ಆಸಕ್ತಿಯನ್ನು ಪೂರೈಸುವ ಒಂದು ಆಹ್ಲಾದಕಾರಿಯಾದ ಮಾರ್ಗವಾಗಿರುತ್ತದೆ. ಆದರೂ ಇದನ್ನು ಸಮಾಜ ಮುಕ್ತವಾಗಿ ಸ್ವೀಕರಿಸುತ್ತಿಲ್ಲ. ಇದು ಒಂದು ಕ್ರಿಯೆ ಅಷ್ಟೇ, ಇದರಲ್ಲಿ ವ್ಯಕ್ತಿಯು ರಹಸ್ಯವಾಗಿ ತನ್ನ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳುತ್ತಾನೆ ಮತ್ತು ಯಾರಿಗೂ ಇದರ ಕುರಿತು ವಿವರಿಸುವುದಿಲ್ಲ. ಆದರೂ ವ್ಯಕ್ತಿಗೆ ಇದು ತುಂಬಾ ಕೀಳರಿಮೆಯನ್ನು ನೀಡುತ್ತದೆ.

Whatsapp Group Join
Telegram channel Join

ಮೊದಲಿಗೆ ವ್ಯಕ್ತಿಯ ಕೀಳರಿಮೆಗೆ ಮುಖ್ಯವಾದ ಕಾರಣ ಎಂದರೆ ಆತನ/ಆಕೆಯ ಧಾರ್ಮಿಕ ನಂಬಿಕೆ. ಭಾರತದಲ್ಲಿ ಹಸ್ತ ಮೈಥುನ ನಿಷಿದ್ಧವಾದ ಕ್ರಿಯೆ ಎಂಬ ನಂಬಿಕೆ ಇದೆ. ಈ ರೀತಿ ಮಾಡಿಕೊಳ್ಳುವುದರಿಂದ ಉಂಟಾಗುವ ಕೀಳರಿಮೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತದೆ. ಅವರಿಗೆ ಆತ್ಮ-ವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿ :- ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು

Whatsapp Group Join
Telegram channel Join

ಡೊಪಮೈನ್ ಎಂಬುದು ಒಂದು ನ್ಯೂರೋ‌ಟ್ರಾನ್ಸ್‌ಮಿಟ್ಟರ್. ಇದು ಇತರ ನರಕೋಶಗಳಿಗೆ ಸಂಕೇತಗಳನ್ನು ರವಾನಿಸುತ್ತದೆ. ಲೈಂಗಿಕ ಚಟುವಟಿಕೆಯ ಸಂದರ್ಭದಲ್ಲಿ ಡೊಪಮೈನ್ ಬಿಡುಗಡೆಯಾಗುತ್ತದೆ. ಹಸ್ತಮೈಥುನದಲ್ಲಿ ಆನಂದ ನೀಡುವುದು ಇದೇ ಡೊಪಮೈನ್. ಹಸ್ತಮೈಥುನದ ನಂತರ ಡೊಪಮೈನ್ ಹಠಾತ್ ಆಗಿ ಕುಸಿಯುತ್ತದೆ. ಇದೇ ಕಾರಣದಿಂದಾಗಿ ಹಸ್ತಮೈಥುನ ಮಾಡಿಕೊಂಡ ನಂತರ ಜನರು ಪಶ್ಚಾತ್ತಾಪಪಡುವಂತೆ ಮಾಡುತ್ತದೆ.  ಕೆಲವರಲ್ಲಿ ಈ ನಕಾರಾತ್ಮಕ ಭಾವನೆಯು ತೀವ್ರ ಸ್ವರೂಪದಲ್ಲಿರುತ್ತದೆ.

ಕೆಲವರು ತಮಗಿರುವ ಇತರೆ ಸಮಸ್ಯೆಗಳಿಂದ ಅಥವಾ ತೊಡಕುಗಳಿಂದ ಪಾರಾಗಲು ಲೈಂಗಿಕ ಚಟುವಟಿಕೆಯನ್ನು ಬಳಸಿಕೊಳ್ಳುತ್ತಾರೆ. ಈ ಚಟುವಟಿಕೆ ಮುಗಿದ ಕೂಡಲೆ ಅವರು ಮತ್ತೆ ಹಳೆಯ ಮೂಡ್‍ಗೆ ಬರುತ್ತಾರೆ. ಇದರಿಂದ ಅವರಿಗೆ ಅಯೋಮಯವಾದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಮತ್ತೆ ಅವರು ಅದೇ ಸಮಸ್ಯೆಗಳು ಮುಂದೆ ಬಂದಾಗ ಅವರಿಗೆ ಈ ಪರಿಸ್ಥಿತಿಯನ್ನು ಸಹಿಸಿಕೊಳ್ಳಲಾಗುವುದಿಲ್ಲ.

ಇದನ್ನೂ ಓದಿ :- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು

ಎಲ್ಲಾ ದಂಪತಿಗಳು ತಮ್ಮ ಸಂಗಾತಿ ಹಸ್ತಮೈಥುನ ಮಾಡಿಕೊಳ್ಳಲು ಪರಿಣಾಮಕಾರಿಯಾಗಿ ಸಿದ್ಧತೆ ಮಾಡುವುದಿಲ್ಲ. ಹಸ್ತಮೈಥುನದಿಂದ ತಮ್ಮ ಸಂಬಂಧದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ನಂಬಿಕೆ ಇವರಲ್ಲಿ ಮನೆ ಮಾಡಿರುತ್ತದೆ. ಇದರಿಂದ ಸಹ ಸಂಗಾತಿಗಳಲ್ಲಿ ಒಬ್ಬರಿಗೆ ಅವಮಾನ ಹಾಗು ಪಶ್ಚಾತ್ತಾಪ ಉಂಟಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply