Vijaya Raghavendra : ಮಗನ ಎದುರಲ್ಲೇ ತಾಯಿ ಸ್ಪಂದನ ಬಗ್ಗೆ ವಿಜಯ ರಾಘವೇಂದ್ರ ಹೇಳಿದ ಮಾತಿಗೆ ಕುಳಿತಲ್ಲೇ ಕಣ್ಣೀರಿಟ್ಟ ಮಗ ಶೌರ್ಯ.!

Vijaya Raghavendra : ನಟ ವಿಜಯ ರಾಘವೇಂದ್ರ ಅವರ ಸಿನಿಮಾ ಕದ್ದ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹೌದು, ಇದೀಗ ವಿಜಯ ರಾಘವೇಂದ್ರ ಅವರು ಮಗನ ಜೊತೆ ಕಾಣಿಸಿಕೊಂಡಿದ್ದು, ಅವರ ಕದ್ದ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಮಾತನಾಡುವಾಗ ಪತ್ನಿ ಸ್ಪಂದನ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹಾಗಾದ್ರೆ ವಿಜಯ ರಾಘವೇಂದ್ರ ಅವರು ಹೇಳಿದ್ದೇನು ಗೊತ್ತಾ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ ರಾಘವೇಂದ್ರ.! ಎಲ್ಲರೂ ಶಾಕ್.!

ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ಅವಳು ನನ್ನ ಜೊತೆಯಿರುತ್ತಿದ್ದಳು. ತಮಾಷೆ ಮಾಡುವುದು, ಮಾತುಕತೆ, ಅದು ಬೇಕು-ಇದು ಬೇಡ, ಹೀಗೆ ಇನ್ನೂ ಸಾಕಷ್ಟು… ಇನ್ನು ಮೇಲೆ ಅವಳ ಫೋನ್ ಕಾಲ್ ಬರಲ್ಲ. ಯಾಕೆ ಲೇಟ್ ಎಂದು ಕೇಳುವವರಿಲ್ಲ. ಬೇಗ ಬನ್ರೀ ಎಂದು ಹೇಳುವವರಿಲ್ಲ. ಆದರೆ ಅವಳು ನನ್ನ ಜೊತೆ ಇದ್ದಷ್ಟು ದಿನ ನನಗೆ ಒಂದು ರೂಟ್ ಹಾಕಿ ಕೊಟ್ಟು ಹೋಗಿದ್ದಾಳೆ. ಏನು ಮಾಡಬೇಕು.? ಏನು ಮಾಡಬಾರದು.? ಎಲ್ಲವನ್ನು ಹೇಳಿಕೊಟ್ಟಿದ್ದಾಳೆ. ನನಗಾಗಿಯೇ ಒಂದು ಬ್ಲೂ ಪ್ರಿಂಟ್ ಹಾಕಿಕೊಟ್ಟಿದ್ದಾಳೆ. ಹಾಗಾಗಿ ಅವಳಿಲ್ಲ ಎನ್ನುವುದಕ್ಕಿಂತ ಅವಳು ಹಾಕಿಕೊಟ್ಟ ದಾರಿಯಲ್ಲಿಯೇ ಸಾಗುತ್ತೇನೆ ಎಂದಿದ್ದಾರೆ ನಟ ವಿಜಯ ರಾಘವೇಂದ್ರ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಶಾಲೆಗೆ ಕಳುಹಿಸದೇ ಮಗನನ್ನು ಕರೆದುಕೊಂಡು ಇದ್ದಕ್ಕಿದ್ದಂತೆ ವಿಜಯ ರಾಘವೇಂದ್ರ ಹೋಗಿದ್ದೆಲ್ಲಿಗೆ ಗೊತ್ತಾ.?

ಒಂದು ಖಾಲಿತನ ನನ್ನನ್ನು ಆವರಿಸಿದೆ. ಸಧ್ಯ ಅದನ್ನು ನಿಭಾಯಿಸುವುದೇ ನನ್ನ ಮುಂದಿನ ಅತೀ ದೊಡ್ಡ ಸವಾಲು. ಪೂರ್ತಿ ಬ್ಲಾಂಕ್ ಆಗಿರುವುದರಿಂದ, ಅದರ ಜೊತೆ ಹೇಗಿರ್ತೀನಿ ಅನ್ನುವುದೇ ನನಗೊಂದು ಪ್ರಶ್ನೆ. ಏನು ಮಾಡಲು ಸಾಧ್ಯವಿಲ್ಲ. ಅದರ ಜೊತೆಗೆ ಜೀವಿಸಬೇಕು. ಮಗನ ಭವಿಷ್ಯದ ಜೊತೆ ನಿಲ್ಲಬೇಕು ಅನ್ನುವ ಭಾವುಕ ಮಾತು ಹೇಳಿದ್ದಾರೆ. ತಂದೆಯ ಮಾತು ಕೇಳಿ ಮಗ ಶೌರ್ಯ ಕೂಡ ಕಣ್ಣೀರು ಹಾಕಿದ್ದಾರೆ. ವಿಜಯ ರಾಘವೇಂದ್ರ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಇದನ್ನೂ ಕೂಡ ಓದಿ : ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ!‌ ಯಾಕೆ ಗೊತ್ತೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..