Spandana Vijay : ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ ರಾಘವೇಂದ್ರ.! ಎಲ್ಲರೂ ಶಾಕ್.!

Spandana Vijay : ಸ್ಯಾಂಡಲ್ ವುಡ್ ನಟ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಹಾಗು ಸ್ಪಂದನ ಅವರು ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ಒಂದಾಗಿತ್ತು. ತುಂಬಾನೇ ಅನೋನ್ಯವಾಗಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಮನೆಮಾಡಿದೆ. ಈ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ವಿಜಯ್ ಅವರ ಬದುಕಿನಲ್ಲಿ ಈಗ ಬರಸಿಡಿಲು ಬಡಿದಂತಾಗಿದೆ. ಇದೀಗ ಕತ್ತಲೆ ಆವರಿಸಿ ಬಿಟ್ಟಿತು ಅಂತಾನೆ ಹೇಳಬಹುದು. ಒಂದು ಕಡೆ ಮುದ್ದಾದ ಮಗ ಶೌರ್ಯ ಚಿಕ್ಕ ವಯಸ್ಸಿಗೆ ತನ್ನ ತಾಯಿಯನ್ನು ಕಳೆದುಕೊಂಡನಲ್ಲ ಎಂದು ವಿಜಯ ಅವರಿಗೆ ತುಂಬಾ ನೋವಾದರೆ, ತಾವು ಇಷ್ಟಪಟ್ಟ ಹಾಗೂ ಒಳ್ಳೆಯ ಮನಸ್ಸಿನ ಹೆಂಡತಿಯನ್ನ ಕಳೆದುಕೊಂಡನಲ್ಲ ಎಂದು ರಾಘು ದಿನನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಮಗನ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಾ ಮಂಕಾಗಿದ್ದಾರೆ. ವಿಜಯ ರಾಘವೇಂದ್ರ ಅವರು ಇದೀಗ ತಮ್ಮಲ್ಲಿ ಎಷ್ಟೇ ನೋವಿದ್ದರೂ ಕೂಡ, ಅದನ್ನ ಹೊರಗಡೆ ತೋರಿಸಿಕೊಳ್ಳದೇ ತಮ್ಮ ಸಿನಿಮಾ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತೀಚಿನ ಖಾಸಗಿ ಟಿವಿ ಸಂದರ್ಶನದಲ್ಲಿ ಹೆಂಡತಿ ಮಗನ ಬಗ್ಗೆ, ಅವರ ಕುರಿತಾದ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Vijay Raghavendra : ತಾಯಿ ಕಳೆದುಕೊಂಡ ಶೌರ್ಯನಿಗೆ ಚಿಕ್ಕಮ್ಮ ಶ್ರೀಮುರಳಿ ಪತ್ನಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ.? ಕೈ ಮುಗಿದ ವಿಜಯ ರಾಘವೇಂದ್ರ.!

ಆದರೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ನೆಟ್ಟಿಗರು, ವಿಜಯ ರಾಘವೇಂದ್ರ ಅವರಿಗೆ ಸ್ಪಂದನ ಅವರಿಲ್ಲದೇ ನಿಮಗೆ ಹೆಚ್ಚು ನೋವಾಗಬಹುದು. ಆ ನೋವಿನಿಂದ ನೀವು ಹೊರಬರಬೇಕು ಅಂದರೆ ಯಾಕೆ ಇನ್ನೊಂದು ಮದುವೆಯಾಗಬಾರದು.? ಮಗನ ಭವಿಷ್ಯ ಕೂಡ ಮುಖ್ಯ ಅಲ್ವಾ.? ಎನ್ನುವ ಮಾತುಗಳು ಕೂಡ ಕೆಲವರಿಂದ ಕೇಳಿಬಂದಿದೆ. ಅದರ ಬೆನ್ನಲ್ಲೇ ವಿಜಯ ರಾಘವೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನನಗೆ ಸ್ಪಂದನ ಅವರೇ ಎಲ್ಲಾ, ಅವರನ್ನು ಬಿಟ್ಟು ಬೇರೆ ಯಾರು ಕೂಡ ಆ ಜಾಗಕ್ಕೆ ಬರಲು ಸಾಧ್ಯವಿಲ್ಲ. ನನ್ನ ಜೀವ-ಜೀವನ ಸ್ಪಂದನ ಅವರೇ, ಇಂದಿಗೂ, ಎಂದಿಗೂ, ಮುಂದೆಯೂ ಕೂಡ ಎಂದು ಹೇಳಿ, ನನ್ನ ಮಗನ ನೋಡಿಕೊಂಡು, ಅವನನ್ನು ಚೆನ್ನಾಗಿ ಬೆಳೆಸುತ್ತಾ ಜೀವನ ಮಾಡುತ್ತೇನೆ ಅನ್ನುವ ನಿಟ್ಟಿನಲ್ಲಿ ಹೇಳಿದ್ದು, ಇನ್ನೊಂದು ಮಾಡುವೆ ನಿರ್ಧಾರವನ್ನು ವಿರೋಧಿಸಿದ ವಿಜಯ ರಾಘವೇಂದ್ರ ಅವರ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ನಿಮ್ಮ ಪ್ರಕಾರ ವಿಜಯ ರಾಘವೇಂದ್ರ ಅವರು ಎರಡನೇ ಮದುವೆಯಾಗಬೇಕಾ.? ಅಥವಾ ಬೇಡ್ವಾ.? ಕಮೆಂಟ್ ಮೂಲಕ ತಿಳಿಸಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ!‌ ಯಾಕೆ ಗೊತ್ತೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..