ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ!‌ ಯಾಕೆ ಗೊತ್ತೆ.?

ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ. ಇವರು ತೆಂಗಿನ ಕಾಯಿಯನ್ನೇ ಆಹಾರವಾಗಿ ಸೇವಿಸುತ್ತಾರೆ ಜೊತೆಗೆ ಎಳನೀರು ಕುಡಿಯುತ್ತಾರೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಆಹಾರವನ್ನು ಸೇವಿಸುವುದಿಲ್ಲ.

ಬಾಲಕೃಷ್ಣನ್ ಎಂಬ ಈ ವ್ಯಕ್ತಿಗೆ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಿತ್ತು. ಈ ಕಾಯಿಲೆಯಿಂದ ಗುಣಮುಖರಾಗಲು 24 ವರ್ಷಗಳ ಕಾಲ ಎಳನೀರು ಕುಡಿದು ಬದುಕಿದ್ದಾರೆ. ಕಳೆದ 24 ವರ್ಷಗಳಿಂದ ತೆಂಗಿನಕಾಯಿಯನ್ನು ಹೊರತುಪಡಿಸಿ ಬೇರೇನನ್ನೂ ತಿಂದಿಲ್ಲ ಎಂದು ಖುದ್ದು ಬಾಲಕೃಷ್ಣನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತೆಂಗಿನಕಾಯಿ ಮತ್ತು ಎಳನೀರು ಸೇವನೆಯಿಂದ ತಾನು ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾಯಿತು ಅಂತಾ ಬಾಲಕೃಷ್ಣನ್‌ ಹೇಳಿದ್ದಾರೆ. ಸದ್ಯ ಕಾಯಿಲೆಯಿಂದ ಗುಣಮುಖರಾಗಿರೋ ಅವರು ಫಿಟ್ & ಫೈನ್ ಆಗಿದ್ದಾರೆ.
ಈಗಲೂ ಎಳನೀರು ಮತ್ತು ತೆಂಗಿನಕಾಯಿಯನ್ನು ಮಾತ್ರ ಸೇವಿಸುತ್ತಾರೆ.

ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ರೋಗ. ಈ ಕಾಯಿಲೆಗೆ ತುತ್ತಾದರೆ ಹೊಟ್ಟೆಯ ಆಮ್ಲ ಅಥವಾ ಪಿತ್ತರಸವು ಆಹಾರ ಪೈಪ್‌ನ ಒಳಪದರವನ್ನು ಕೆರಳಿಸುತ್ತದೆ. ಇದು ದೀರ್ಘಕಾಲ ಕಾಡುವಂತಹ ಸಮಸ್ಯೆ. ಹೊಟ್ಟೆಯ ಆಮ್ಲ ಅಥವಾ ಪಿತ್ತರಸವು ಆಹಾರದ ಪೈಪ್‌ಗೆ ಹರಿಯುತ್ತದೆ ಮತ್ತು ಒಳಪದರವನ್ನು ಕಿರಿಕಿರಿಗೊಳಿಸುತ್ತದೆ. ಇದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಸೇರಿದಂತೆ ಅನೇಕ ತೊಂದರೆಗಳಾಗುತ್ತವೆ.  ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ತೆಂಗಿನಕಾಯಿಯಲ್ಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply